10ನೇ ಕ್ಲಾಸ್ ಬಾಲಕನಿಂದ 16 ರ ಕಾಲೇಜು ಹುಡುಗಿ ಗರ್ಭಿಣಿ | ತೀಟೆ ಮುಗಿದ ನಂತರ ಪುಟ್ಟ ಕಂದನನ್ನು ಪೊದೆಗೆ ಎಸೆದರು!!!

ಅಪ್ರಾಪ್ತ ಬಾಲಕಿಯೋರ್ವಳು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದ್ದು, ಆಕೆಯ ಗರ್ಭಕ್ಕೆ ಕಾರಣಕ್ಕೆ ಬಾಲಕ ಎಂದು ಹೇಳಿದ್ದು ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಹೌದು, ಈ ಘಟನೆ ತಮಿಳುನಾಡಿನಲ್ಲಿ ಆಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹನ್ನೊಂದನೇ ತರಗತಿಯ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಶಾಲೆಯ ಬಳಿಯ ಪೊದೆಯಲ್ಲಿ ನವಜಾತ ಶಿಶು ಎಸೆದು ಹೋಗಿದ್ದಾಳೆ.

 

16 ವರ್ಷದ ಬಾಲಕಿ ಗರ್ಭಧರಿಸಲು ಕಾರಣನಾದ ಹತ್ತನೇ ತರಗತಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪೊದೆಯಲ್ಲಿ ನವಜಾತ ಶಿಶುವಿನ ಶವವನ್ನು ಕಂಡು ಸಹಾಯಕ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ, ಪೊಲೀಸ್ ತಂಡ ಶಾಲೆಗೆ ಧಾವಿಸಿ, ಮೃತ ಮಗು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಚಿದಂಬರಂನ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆ.

ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ವಿಶ್ರಾಂತಿ ಕೊಠಡಿಯಲ್ಲಿ ಮಗುವಿಗೆ ಜನ್ಮ ನೀಡಿ ಪೊದೆಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿ ತನಿಖೆ ಕೈಗೊಂಡಿದ್ದಾರೆ. ಅನಂತರ ಈ ವಿದ್ಯಾರ್ಥಿನಿಯೇ ಆ ಮಗುವಿನ ತಾಯಿ ಎಂದು ತಿಳಿದಾಗ, ತನಿಖೆ ಸಮಯದಲ್ಲಿ ಆಕೆ ಮಗುವಿಗೆ ಜನ್ಮ ನೀಡಿ ಪೊದೆಗಳಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಅನಂತರ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಬಾಲಕನೇ ತನ್ನ ಗರ್ಭಕ್ಕೆ ಕಾರಣ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಫೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಬಾಲಕನ ವಿರುದ್ಧ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಬಾಲಕನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ನಂತರ ಆತನನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.