ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಕೆನರಾ ಬ್ಯಾಂಕ್​ ಸೆಕ್ಯುರಿಟೀಸ್​ ಲಿಮಿಟೆಡ್​ನಲ್ಲಿ (Canara Bank Securities Limited) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್
ಹುದ್ದೆಯ ಹೆಸರು: ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಬೆಂಗಳೂರು – ಮುಂಬೈ
ವೇತನ: 21200-37000ರೂ ಪ್ರತಿ ತಿಂಗಳು

ಹುದ್ದೆ, ಹುದ್ದೆ ಸಂಖ್ಯೆ, ವಿದ್ಯಾರ್ಹತೆ, ವೇತನ ವಯೋಮಿತಿ:
ಉಪ ವ್ಯವಸ್ಥಾಪಕರು 1 ಎಲ್​ಎಲ್​ಬಿ ಅಥವಾ ಎಲ್​ಎಲ್​ಎಂ ಪದವಿ 31800-37000 ರೂ ಮಾಸಿಕ ಕನಿಷ್ಟ 22- ಗರಿಷ್ಟ 30 ವರ್ಷ
ಸಹಾಯಕ ವ್ಯವಸ್ಥಾಪಕ 3 ಪದವಿ, ಸ್ನಾತಕೋತ್ತರ ಪದವಿ 21200-26000 ರೂ ಮಾಸಿಕ ಕನಿಷ್ಟ 22- ಗರಿಷ್ಟ 30 ವರ್ಷ
ಕಿರಿಯ ಅಧಿಕಾರಿ 8 ಪದವಿ 29000-34000ರೂ ಮಾಸಿಕ ಕನಿಷ್ಟ 22- ಗರಿಷ್ಟ 30 ವರ್ಷ
ಸಹಾಯಕ ಮ್ಯಾನೇಜರ್ – IT ಡೇಟಾಬೇಸ್ ನಿರ್ವಾಹಕರು 1 ಬಿಇ ಅಥವಾ ಬಇಟೆಕ್​ ಪದವಿ 21200-26000 ರೂ ಮಾಸಿಕ ಕನಿಷ್ಟ 20- ಗರಿಷ್ಟ 28 ವರ್ಷ
ಸಹಾಯಕ ಮ್ಯಾನೇಜರ್ – ಬ್ಯಾಕ್ ಆಫೀಸ್ 1 ಪದವಿ 21200-26000 ರೂ ಮಾಸಿಕ ಕನಿಷ್ಟ 20- ಗರಿಷ್ಟ 28 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
ಪ.ಜಾ, ಪ. ಪಂ ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಸಲ್ಲಿಕೆ: ಆಫ್​ಲೈನ್​

ಆಯ್ಕೆ ಪ್ರಕ್ರಿಯೆ:
ಶಾರ್ಟ್​ ಲಿಸ್ಟ್​​ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಆಗಸ್ಟ್​​​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಸೆಪ್ಟೆಂಬರ್​ 2022

ಅರ್ಜಿ ಸಲ್ಲಿಕೆ ವಿಳಾಸ:
ಜನರಲ್ ಮ್ಯಾನೇಜರ್, ಮಾನವ ಸಂಪನ್ಮೂಲ ಇಲಾಖೆ, ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್, 7 ನೇ ಮಹಡಿ, ಮೇಕರ್ ಚೇಂಬರ್ III ನಾರಿಮನ್ ಪಾಯಿಂಟ್, ಮುಂಬೈ – 400021

ಅರ್ಜಿ ಸಲ್ಲಿಸುವ ವಿಧಾನ :
*ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
*ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ
*ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕಕ್ಕೂ ಮುನ್ನ ಸಲ್ಲಿಸುವಂತೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮಾಡಿ.

ಅಧಿಕೃತ ವೆಬ್‌ಸೈಟ್: canmoney.in

Leave A Reply

Your email address will not be published.