BBK OTT : ನೀವು ಮಾತಾಡೋ ಏಕವಚನ ‘ ಚಪ್ಪಲಿ’ ಯಲ್ಲಿ ಹೊಡೆಯೋ ಹಾಗೇ ಇರುತ್ತೆ, ಸೋನುಗೆ ಛೀಮಾರಿ ಹಾಕಿ, ಕ್ಲಾಸ್ ತಗೊಂಡ ಕಿಚ್ಚ ಸುದೀಪ್

Share the Article

ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆ ನಿಜಕ್ಕೂ ಆರಂಭದಲ್ಲಿ ಹಾಟ್ ಆಗಿಯೇ ಶುರು ಮಾಡಿದ್ದರು ಸುದೀಪ್. ನಿನ್ನೆ ವಾರದ ಕಥೆ ಕಿಚ್ಚನ ಜೊತೆಯ ಪಂಚಾಯಿತಿಯಲ್ಲಿ ಸುದೀಪ್ ಮೊದಲಿಗೆ ಕ್ಲಾಸ್ ತಗೊಂಡಿದ್ದೇ ಸೋನು ಅವರನ್ನು. ತನಗೆ ಕಳಪೆ ಪ್ರದರ್ಶನ ಕೊಟ್ಟು ಜೈಲಿಗೆ ಹಾಕಿದ್ದಕ್ಕೆ ಸೋನು ಅವರು ಮನೆಯಲ್ಲಿದ್ದವರಿಗೆ ಬಾಯಿಗೆ ಬಂದ ಹಾಗೇ ಮಾತನಾಡಿ ಭಾರೀ ರಂಪಾಟ ಮಾಡಿದ್ದರು. ಅವರ ಬಾಯಿಯಿಂದ ಬಿಗ್ ಬಾಸ್ ( Bigg Boss) ಗೂ ಬೈಗುಳ ಬಂದಿತ್ತು. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ, ಕಿಚ್ಚ ಸುದೀಪ್ ನಿನ್ನೆ ಸೋನು ಅವರಿಗೆ ಛೀಮಾರಿ ಹಾಕಿದ್ದಾರೆ.
ಬಾಯಿಗೆ ಬಂದ ಹಾಗೆ ಮಾತನಾಡುವ ಅಗೌರವ ತರುವ ರೀತಿಯಲ್ಲಿ ಮಾತನಾಡುವ ಸೋನು ಶ್ರೀನಿವಾಸ್ ಗೌಡಗೆ ( Sonu Srinivas Gowda) ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು.

ಕಿಚ್ಚ ಮಾತನಾಡಿದ ಮಾತಿನ ಸಾರಾಂಶ ಹೀಗಿದೆ.

“ಬಿಗ್ ಬಾಸ್ ನನಗೆ ಇದನ್ನ ಹೇಳಿಲ್ಲ ಅಂತ ನೀವು ಯಾವಾಗಲೂ ಹೇಳುತ್ತಿರುತ್ತೀರಿ. ಬಿಗ್ ಬಾಸ್ ಯಾರಿಗೆ ಏನು ಹೇಳಿದ್ದಾರೆ? ಬಿಗ್ ಬಾಸ್ ಮೇಕಪ್ ಮಾಡಿಕೊಳ್ಳಿ ಅಂತಲೂ ಹೇಳಿಲ್ಲ. ನಿಮ್ಮ ಸ್ಟೇಟ್‌ಮೆಂಟ್ಸ್ ತುಂಬಾ ಡಿಸ್‌ಮಿಸ್ಸಿವ್ ಆಗಿರುತ್ತೆ. ತುಂಬಾ ಅಗೌರವ ತರುವ ರೀತಿಯಲ್ಲೂ ಇರುತ್ತದೆ. ಹಾಗೆ ನೋಡಿದ್ರೆ, ಡಿಸ್‌ಮಿಸ್ಸಿವ್ ರೀತಿಯಲ್ಲಿ ಹೇಳೋದ್ರಲ್ಲಿ ಚೈತ್ರಾ ಕೂಡ ಒಂದು ಕೈ ಮೇಲೆ ಅಂದರೂ ತಪ್ಪಾಗಲ್ಲ. ಹೀಗಾಗಿ, ಬಿಗ್ ಬಾಸ್ ಇವತ್ತಿನಿಂದ ನಿಮಗೆ ಆದೇಶ ಕೊಡುವುದಿಲ್ಲ. ಮನೆಯಲ್ಲಿ ತುಂಬಾ ಸುಂದರವಾದ ಪ್ರಾಪರ್ಟೀಸ್ ಇದೆ. ನೀವೂ ಅದರಲ್ಲಿ ಒಂದು. ನೀವು ತುಂಬಾ ಹಾರ್ಶ್ ಆಗಿ ಮಾತನಾಡುತ್ತೀರಾ. ಹಾಗಂತ ನಿಮ್ಮಲ್ಲಿ ಕ್ಯೂಟ್‌ನೆಸ್ ಇಲ್ವಾ? ಖಂಡಿತ ಇದೆ. ಆದರೆ, ನಿಮ್ಮ ಹಾರ್ಶ್ ಸೈಡ್
ತುಂಬಾ ಡಾಮಿನೇಟ್ ಮಾಡುತ್ತಿದೆ’

‘ನಾನು ತುಂಬಾ ಸೀಸನ್‌ನಲ್ಲಿ ಏಕವಚನಗಳನ್ನ ಕೇಳಿದ್ದೀನಿ. ಆದರೆ, ಈ ಬಾರಿ ಈ ಮನೆಯಲ್ಲಿ ನಿಮ್ಮಲ್ಲಿ ತುಂಬಾ ಜನ ಮಾತನಾಡುವ ಏಕವಚನ ನಿಜವಾಗಿಯೂ ಚಪ್ಪಲಿಯಲ್ಲಿ ಹೊಡೆದ ಹಾಗೆ ಇರುತ್ತದೆ. ನಿಮ್ಮ ಏಕವಚನದಲ್ಲಿ ಗೌರವ ಕಾಣಿಸೋದೇ ಇಲ್ಲ. ಇಟ್ಸ್ ಸ್ಯಾಡ್’

‘ತಪ್ಪು ಎಲ್ಲರೂ ಮಾಡ್ತಾರೆ. ಆದರೆ, ತಿದ್ದೋಕೆ ಯಾರೂ ಇಲ್ಲ. ಫ್ರಾಂಕ್ ಆಗಿ ಹೇಳೋದಾದರೆ ರಾಕೇಶ್ ತರಹದ ಫ್ರೆಂಡ್ ಎಲ್ಲರಿಗೂ ಸಿಗುವುದಿಲ್ಲ. ತಮ್ಮ ನಿಲುವನ್ನ ಹೇಳಿದರೂ, ನಿಮ್ಮನ್ನ ಎಷ್ಟೋ ಬಾರಿ ತಿದ್ದುತ್ತಿದ್ದಾರೆ. ಆದರೆ, ನಿಮ್ಮ ಬಾಯಿಂದ ಅವರಿಗೆ ಬರೋದು “ಥ.. ಎಷ್ಟು ಚೀಪ್.. ಥ.. ಎಷ್ಟು ಫೇಕ್… ಥ”. ಈ “ಹೂ..” ಏನು? ಎಲ್ಲಕ್ಕಿಂತ ಹೆಚ್ಚಾಗಿ ಅವರೇ ನಿಮ್ಮ ಬಳಿ ಬಂದು ಸಾರಿ ಕೇಳ್ತಾರೆ. ಆಗ ನೀವು ಏನು ಹೇಳೀರಿ.. ತಪ್ಪು ಮಾಡಿರೋದು ಈಗಲಾದರೂ ಗೊತ್ತಾಯಿತಲ್ಲಾ ಅಂತ. ನಿನಗೆ ಬೇಜಾರಾಯ್ತಲ್ಲ ಅಂತ ಕೇಳಿದ್ದು ಅಂತ ಅವರು ಹೇಳಿದ್ದರು. ಇಷ್ಟರ ಮೇಲೆ ನಿಮಗೆ ಬಿಟ್ಟಿದ್ದು” ಎಂದು ಕಿಚ್ಚ ಸುದೀಪ್ ಹೇಳಿದರು. ಆಗ ಸೋನು ಶ್ರೀನಿವಾಸ್ ಗೌಡ ಕ್ಷಮೆ ಕೇಳಿದರು. ‘ಇನ್ಮೇಲೆ ನನ್ನ ತಪ್ಪನ್ನು ಸರಿ ಮಾಡ್ತೀನಿ’ ಎಂದರು ಸೋನು ಶ್ರೀನಿವಾಸ್ ಗೌಡ.

ಕಿಚ್ಚನ ಮಾತನ್ನು ತಾಳ್ಮೆಯಿಂದಲೇ ಕೇಳಿಸಿಕೊಂಡ‌ ಸೋನು ಅವರು ಬ್ರೇಕ್ ನೀಡಿದಾಗ, ವಾಶ್ ರೂಂ ಗೆ ಹೋಗಿ ತಮಗೆ ತಾವೇ ಕನ್ನಡಿ ನೋಡಿಕೊಂಡು ಬೈಕೊಂಡು ತಪ್ಪನ್ನ ತಿದ್ದಿ ಸರಿ ಮಾಡೋ ತರಹ ಮಾತಾಡಿದ್ದಾರೆ.

Leave A Reply

Your email address will not be published.