ಸರ್ಕಾರಿ ಉದ್ಯಮವನ್ನು ತ್ಯಜಿಸಿ ಹೀಗೂ ಮಾಡ್ತಾರಾ!! | ಊರಿಗೆ ಊರೇ ಯೂಟ್ಯೂಬ್ ಗೆ ಅಡಿಕ್ಟ್!!
ಇಂದಿನ ಡಿಜಿಟಲ್ ಯುಗದಲ್ಲಿ ಮಾನವನು ಹಾರ್ಡ್ ವರ್ಕ್ ಗಳಿಗಿಂತ ಸ್ಮಾರ್ಟ್ ಆಗಿ ವರ್ಕ್ ಮಾಡೋದಕ್ಕೆ ಇಷ್ಟಪಡುತ್ತಾನೆ. ಅದರಲ್ಲೂ ನಮ್ಮ ಮಾಧ್ಯಮಗಳಲ್ಲಿ ಕೆಲಸವನ್ನ ಮಾಡಲು ಇಷ್ಟಪಡುವುದರಲ್ಲಿ ತಪ್ಪೇ ಇಲ್ಲ. ಯೂಟ್ಯೂಬ್ ನ ಚಾನೆಲ್ ಗಳು ದಿನೇ ದಿನೇ ಹೆಚ್ಚುತ್ತಲೆ ಇದೆ. ಇದರಿಂದಲೇ ಜೀವನ ನಡೆಸುತ್ತಿರುವವರು ಇದ್ದಾರೆ ಎನ್ನಬಹುದು. ಆದರೆ ಸರ್ಕಾರಿ ಉದ್ಯಮವನ್ನೇ ತ್ಯಜಿಸಿ ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ಉದ್ಯಮ ಆರಂಭ ಮಾಡಬಹುದಾ?
ನಿಮ್ಮ ಪ್ರಶ್ನೆಗೆ, ಹೌದು ನಾವು ಮಾಡಿದ್ದೇವೆ ಅಂತಾರೆ ಇಲ್ಲಿರುವ ಗ್ರಾಮಸ್ಥರು. ಏನಪ್ಪ ವಿಶೇಷ ಅಂತ ಅನ್ನಿಸ್ತಾ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಛತ್ತೀಸ್ಗಡದ ರಾಯಪುರದ ತುಳಸಿ ಗ್ರಾಮ ಎಂಬಲ್ಲಿ 3,000 ಜನರು ವಾಸಿಸುತ್ತಿದ್ದಾರೆ. ಆದರೆ ಇಲ್ಲಿ ಬರುವ ಬರಿ ಒಂದು ಸಾವಿರದಷ್ಟು ಜನರು ಯೂಟ್ಯೂಬ್ ಚಾನೆಲ್ ಆರಂಭ ಮಾಡಿ ಅದರಿಂದ ಗಳಿಸುವ ಹಣದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಅಂದರೆ ಶೇಕಡ 30ರಷ್ಟು ಜನರು ಯೂಟ್ಯೂಬ್ ಗೆ ಅವಲಂಬಿತರಾಗಿದ್ದಾರೆ.
ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ನರೇಂದ್ರ ಶುಲ್ಕ ಮತ್ತು ಜೈ ವರ್ಮಾ ಎನ್ನುವವರು ತಮ್ಮ ಸರ್ಕಾರಿ ಕೆಲಸವನ್ನು ತ್ಯಜಿಸಿ ಈ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಜ್ಞಾನೇಂದ್ರ ಶುಕ್ಲ ರವರು ಮೊದಲು ಎಸ್ ಬಿ ಐ ನೆಟ್ವರ್ಕ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ 150 ವಿಡಿಯೋಸ್ ಗಳನ್ನು ತನ್ನ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಮತ್ತು 1.15 ಲಕ್ಷ ಚಂದದಾರರನ್ನು ಕೂಡ ಹೊಂದಿದ್ದಾರೆ. ಇನ್ನೂ ಜೈ ವರ್ಮ ರವರು ರಸಾಯನ ಶಾಸ್ತ್ರದಲ್ಲಿ ಎಂ ಎಸ್ ಸಿ ಮಾಡಿ, ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸ್ತಾ ಇದ್ರು. ಅಲ್ಲಿ ಅವರಿಗೆ 12,000 ರಿಂದ 15,000 ಸಂಬಳ ದೊರೆಯುತ್ತಿತ್ತು. ಯೂಟ್ಯೂಬ್ ಚಾನೆಲ್ ಆರಂಭವಾದ ನಂತರ ತಿಂಗಳಿಗೆ 30000 ದಿಂದ 35, 000 ತನಕ ಗಳಿಸುತ್ತಾರೆ ಅಂತೆ.
ಇನ್ನು ನಟನೆಗೆ ವೇದಿಕೆಗಳು ಬಹಳ ಕಡಿಮೆ, ಆದರೆ, ಇದಕ್ಕೆ ಯುಟ್ಯೂಬ್ ಚಾನೆಲ್ ಸಾತ್ ನೀಡಿದೆ ಎಂದು ಇದೇ ಊರಿನ ಸಂದೀಪ್ ಸಾಹು ರವರು ಮಾತನಾಡಿದ್ದಾರೆ. ‘Benig chattisgarhiya’ ಎಂಬ ಯೂಟ್ಯೂಬ್ ಚಾನೆಲ್ ಇವರದ್ದು. ನಗಿಸುವ ವೀಡಿಯೋ ಮಾಡೋಕೆ ಸಿಗ್ತು ಸ್ಪೂರ್ತಿ ಎಂದು ಹೇಳುತ್ತಾರೆ ಊರಿನ ಜನ. ಒಮ್ಮೆ ಆಸ್ಪತ್ರೆಯಲ್ಲಿ ಒಬ್ಬರಿಗೆ ಸೀರಿಯಸ್ ಆಗಿತ್ತು ಅಂತೆ ಆಗ ಈ ವೀಡಿಯೋ ನೋಡಿ ನಕ್ಕಿದರು. ಇದರಿಂದ ಸ್ಪೂರ್ತಿಯಾಗಿ ಇನ್ನು ಕಂಟೆಂಟ್ ಆರಂಭ ಮಾಡಿದ್ದು ಎನ್ನುತ್ತಾರೆ. ಅಷ್ಟೇ ಅಲ್ಲದೆ, ಊರಿನ ಮಹಿಳೆಯರು ಕೂಡ ಧೈರ್ಯವಾಗಿ ಕ್ಯಾಮರದ ಎದುರುಗಡೆ ಬಂದು, ಮಾತನಾಡುತ್ತಾರೆ ಎಂಬ ಖುಷಿಯ ವಿಚಾರವನ್ನು ಊರಿನ ಗ್ರಾಮಸ್ಥರು ಹಂಚಿಕೊಂಡಿದ್ದಾರೆ.