ಭಾರತೀಯ ಭದ್ರತಾ ಪಡೆಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪಿ ಅಂದರ್!
ಭಾರತೀಯ ಭದ್ರತಾ ಪಡೆಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಶಂಕಿತನನ್ನು 22 ವರ್ಷದ ಅಬ್ದುಲ್ ವಾಹಿದ್ ಎಂದು ಗುರುತಿಸಲಾಗಿದೆ.
ಈತ ಕಾಶ್ಮೀರಿ ಜನಬಾಜ್ ಫೋರ್ಸ್ ಎಂಬ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗೆ ಲ್, ಭಾರತೀಯ ಭದ್ರತಾ ಪಡೆಗಳ ಯೋಜನೆ ಮತ್ತು ಚಲನವಲನದ ಬಗ್ಗೆ ಸಂದೇಶ ರವಾನಿಸುತ್ತಿದ್ದ ಮಾಹಿತಿಯನ್ನು ಅಧಿಕಾರಿಗಳು ಇದೀಗ ಪತ್ತೆ ಹಚ್ಚಿದ್ದಾರೆ.
ಕಳೆದ ಶುಕ್ರವಾರ ಪೊಲೀಸರು ಕಿಶ್ತ್ವಾರ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಬ್ದುಲ್ ವಾಹಿದ್‌ಗೆ ಸೂಚಿಸಿದ್ದರು. ಈ ವೇಳೆ ಡಿಸೆಂಬರ್ ೨೦೨೨ರಲ್ಲಿ ಕಾಶ್ಮೀರ ಜನಬಾಜ್ ಫೋರ್ಸ್(ಕೆಜೆಎಫ್)ನ ಕಮಾಂಡರ್ ಅಮೀರ್ ಎಂಬ ಹೆಸರಿನ ಮೂಲಕ ಗುರುತಿಸಿಕೊಂಡಿದ್ದ ತಯ್ಯಬ್ ಫಾರೂಕಿ, ಅಲಿಯಾಸ್ ಉಮರ್ ಖತಾಬ್ ಎಂಬಾತನನ್ನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡಿರುವುದಾಗಿ ಬಹಿರಂಗ ಪಡಿಸಿದ್ದಾನೆ.
ತದನಂತರ ವಾಹಿದ್ ಫೇಸ್‌ಬುಕ್ ಹಾಗೂ ವಾಟ್ಸಾಪ್ ಮೂಲಕ ಭಯೋತ್ಪಾದಕ ಸಂಘಟನೆಗೆ ಭಾರತೀಯ ಭದ್ರತಾ ಪಡೆಗೆ ಸಂಬಂಧಿಸಿದ ಫೋಟೋ ಹಾಗೂ ಮಾಹಿತಿಗಳನ್ನು ಕಳುಹಿಸುತ್ತಿದ್ದನು. ಈತ ಮದರಸಾದಲ್ಲಿ ಶಿಕ್ಷಕನಾಗಿ ಮತ್ತು ಕಿಶ್ತ್ವಾರ್‌ನ ಮಸೀದಿಯಲ್ಲಿ ‘ಮೌಲ್ವಿ’ (ಪಾದ್ರಿ) ಆಗಿ ಕಾರ್ಯನಿರ್ವಹಿಸುತ್ತಿದ್ದನು.