ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ : ಶ್ರೀಗಳ ವೈದ್ಯಕೀಯ ಟೆಸ್ಟ್ ರಿಪೋರ್ಟ್ ಬಹಿರಂಗ

Share the Article

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಈಗಾಗಲೇ ಫೋಕ್ಸೋ ದಾಖಲಾಗಿದ್ದು, ಆಸ್ಪತ್ರೆ ಸೇರಿದ್ದ ಮುರುಘಾ ಶ್ರೀಗಳಿಗೆ ಮತ್ತೊಂದು ಕಂಟಕ ಎದುರಾಗಿದೆ.

ಹೌದು, ಲೈಂಗಿಕ ದೌರ್ಜನ್ಯ‌ ಮೆಡಿಕಲ್‌ ಟೆಸ್ಟ್‌ ರಿಪೋರ್ಟ್ ಬಹಿರಂಗವಾಗಿದೆ.

ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಗಿದ್ದು, ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದರ ಜೊತೆಗೆ ಬೇರೊಂದು ಪ್ರಕರಣ ಕೂಡಾ ದಾಖಲಾಗಿದ್ದು ಜಾಮೀನು ರಹಿತ ವಾರೆಂಟ್ ಕೂಡಾ ಜಾರಿಯಾಗಿದೆ.

ನಿನ್ನೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ ಬೆನ್ನಲ್ಲೇ ಪೊಲೀಸರು ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳನ್ನು ವೈದ್ಯಕೀಯ ಟೆಸ್ಟ್‌ ಮಾಡಿದ್ದಾರೆ. ಪುರುಷತ್ವ ಪರೀಕ್ಷೆಯಲ್ಲಿ ವೈದ್ಯರು ತಿಳಿಸಿದ ವರದಿಗಳಲ್ಲಿ ಶ್ರೀಗಳು ಫಿಟ್‌ ಆಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಎಫ್‌ ಎಸ್‌ಎಲ್‌ ಪರೀಕ್ಷೆಗಾಗಿ ಕೂದಲು, ರಕ್ತ, ಉಗುರಿನ ಮಾದರಿಗಳನ್ನು ಕಳುಹಿಸಲಾಗಿದ್ದು ವರದಿ ಇನ್ನಷ್ಟೇ ಬರಬೇಕಿದೆ.

Leave A Reply