ಕಫ, ಕೆಮ್ಮಿನಿಂದ ಬಳಲುವವರಿಗೆ ಇಲ್ಲಿದೆ ಉತ್ತಮ ಪರಿಹಾರ | ಈ ಮನೆಮದ್ದುಗಳನ್ನು ಟ್ರೈ ಮಾಡಿ !!!
ಬದಲಾಗುತ್ತಿರುವ ಹವಾಮಾನದಲ್ಲಿ ಶೀತ ,ಕೆಮ್ಮು , ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಮಹಾಮಾರಿ ತಾಂಡವದ ನಂತರ ಸಣ್ಣ ಕೆಮ್ಮು ಬಂದರೂ ಕೂಡ ಹೆದರುವ ಪರಿಸ್ಥಿತಿ ಎದುರಾಗಿದೆ. ಕೆಮ್ಮು, ಕಫದಿಂದ ಪಾರಾಗಲು ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.
ಮನೆಯ ಸುತ್ತ ಮುತ್ತಲಲ್ಲೇ ಸಿಗುವ ಮನೆಮದ್ದು ಗಳ ಬಗ್ಗೆ ತಿಳಿಯುವುದಾದರೆ: ಅನೇಕ ಸಂಶೋಧನೆಗಳ ಪ್ರಕಾರ ಜೇನುತುಪ್ಪವು ಕೆಮ್ಮನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಮುಖ್ಯವಾಗಿ ಇದು ರಾತ್ರಿಯಲ್ಲಿ ಕಾಣಿಸುವ ಕೆಮ್ಮಿಗೆ ರಾಮಬಾಣ ಎಂದೇ ಹೇಳಬಹುದು.
ಜೇನುತುಪ್ಪವು ರೋಗನಿರೋಧಕ ಶಕ್ತಿಯನ್ನು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಗಾಯಗಳನ್ನು ಗುಣಪಡಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ, ನೋಯುತ್ತಿರುವ ಗಂಟಲನ್ನು ಶಮನಗೊಳಿಸುತ್ತದೆ.
ಪ್ರೋಬಯಾಟಿಕ್ ಗಳು ಸೂಕ್ಷ್ಮಜೀವಿಗಳಾಗಿದ್ದು,
ಕೆಮ್ಮನ್ನು ನೇರವಾಗಿ ನಿವಾರಿಸದಿದ್ದರೂ ಕೂಡ ದೇಹದ ಜಠರಗರುಳಿನ ಸಸ್ಯವನ್ನು ಸಮತೋಲನ ಗೊಳಿಸಲು ಸಹಕರಿಸುತ್ತದೆ.ಈ ಸಮತೋಲನವು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಿ ಉಸಿರಾಟದ ಸೋಂಕು ತಗುಲುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೂ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ. ಅಲ್ಲದೆ ಅರಿಷಿನವು ಬಲವಾದ ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಶೀತ ಮತ್ತು ಕೆಮ್ಮನ್ನು ತಕ್ಷಣ ಗುಣಪಡಿಸುವ ಶಕ್ತಿ ಅರಿಶಿಣ ಮತ್ತು ಹಾಲಿಗಿದೆ.
ಪುದೀನಾದಲ್ಲಿರುವ ಮೆಂಥಾಲ್ ಗಂಟಲಿನ ಸಮಸ್ಯೆಗಳನ್ನು ಶಮನ ಗೊಳಿಸಲು ನೆರವಾಗಿ, ಉಸಿರಾಟದ ಸಮಸ್ಯೆ ಬಗೆಹರಿಸುತ್ತದೆ.
ಶುಂಠಿಯು ಪರಿಣಾಮಕಾರಿಯಾಗಿ ಕೆಮ್ಮನ್ನು ನಿವಾರಣೆ ಮಾಡುತ್ತದೆ.
ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ವಾಕರಿಕೆ ಮತ್ತು ನೋವನ್ನು ಸಹ ನಿವಾರಿಸುತ್ತದೆ.
ಅಲ್ಲದೆ, ದೇಹದ ತೂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆಯಲ್ಲದೇ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಒಂದು ಲೋಟ ನೀರಿಗೆ ತಾಜಾ ಶುಂಠಿಯ ಚೂರುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಶೀತ, ಕೆಮ್ಮು ಕಡಿಮೆಯಾಗುತ್ತದೆ. ಅಲ್ಲದೆ ಶುಂಠಿ ಚಹಾವು ಕೆಮ್ಮನ್ನು ತಕ್ಷಣ ಹೊಡೆದೋಡಿಸಲು ನೆರವಾಗುತ್ತದೆ. ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು.
ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ಕೂಡ ದೂರವಾಗುತ್ತದೆ.
ಕರಿಮೆಣಸಿನೊಂದಿಗೆ ಅರಿಶಿನವನ್ನು ಸೇವಿಸಿದರೂ ಕೂಡ ಕೆಮ್ಮು ಕಡಿಮೆಯಾಗುತ್ತದೆ . ಕರಿಮೆಣಸಿನ ಪ್ರಮುಖ ಸಂಯುಕ್ತವಾದ ಪೈಪರಿನ್ ಅರಿಶಿನದ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ.
ಹೆಚ್ಚಾಗಿ ದ್ರವ ಪದಾರ್ಥಗಳನ್ನು ಸೇವಿಸುವುದರಿಂದ
ಗಂಟಲಿನ ಶುಷ್ಕತೆಯನ್ನು ನಿವಾರಿಸಿ, ಕೆಮ್ಮು ಬಂದಾಗ ಉಂಟಾಗುವ ಲೋಳೆ ತೆಳುವಾಗಲು ಸಹಕರಿಸುತ್ತದೆ. ಸಾರು ಇಲ್ಲವೇ ಬಿಸಿಯಾದ ನೀರು, ಟೀ ಯಂತಹ ದ್ರವ ಪದಾರ್ಥಗಳ ಸೇವನೆ ಮಾಡಬಹುದು.
ಹವಾಮಾನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಿಂದ ಅದೆಷ್ಟೋ ರೋಗಗಳು ಬರದಂತೆ ತಡೆಯಬಹುದು.
ನೀರನ್ನು ಯಥೇಚ್ಚವಾಗಿ ಕುಡಿಯುವುದರಿಂದಲೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.