ಮಂಗಳೂರು: ಆಟವಾಡುತ್ತಿದ್ದ ಬಾಲಕನ ಪ್ರಾಣ ಕಸಿದ ಕಣಜ!!

ಮಂಗಳೂರು: ಆಟವಾಡುತ್ತಿದ್ದ ಸಂದರ್ಭ ಕಣಜ ನೊಣಗಳ ದಾಳಿಗೆ ತುತ್ತಾಗಿ ಬಾಲಕನೋರ್ವ ಮೃತಪಟ್ಟ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್ ಸಮೀಪದ ಕಲಾಯಿ ಎಂಬಲ್ಲಿ ನಡೆದಿದೆ.

 

ಮನೆಯ ಸಮೀಪ ಆಟವಾಡುತ್ತಿದ್ದ ಸಂದರ್ಭ ಕಣಜದ ನೊಣಗಳ ದಾಳಿ ನಡೆದಿದ್ದು, ನೊಣಗಳ ಕಡಿತಕ್ಕೆ ಬಾಲಕ ಪ್ರಜ್ಞೆ ತಪ್ಪಿದ್ದಾನೆ ಎನ್ನಲಾಗಿದೆ.

ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕಣಜದ ನೊಣಗಳ ದಾಳಿಗೆ ಈ ಹಿಂದೆಯೂ ಹಲವು ಜೀವಗಳು ಬಲಿಯಾಗಿದ್ದು, ಅವುಗಳ ಗೂಡುಗಳಿಗೆ ಹದ್ದುಗಳು, ಅಥವಾ ಇನ್ನಿತರ ಜೀವಿಗಳು ತೊಂದರೆ ಉಂಟು ಮಾಡುವುದರಿಂದ ಕೋಪಗೊಳ್ಳುವ ಅವುಗಳು ಆ ಸಂದರ್ಭ ಅಲ್ಲಿ ಸಿಕ್ಕ ಸಿಕ್ಕ ಪ್ರಾಣಿಗಳು, ಮನುಷ್ಯರ ಮೇಲೆ ದಾಳಿಗೆ ಮುಂದಾಗುತ್ತವೆ.

Leave A Reply

Your email address will not be published.