ಪೆರುವಾಯಿ : ಸೆ.4ರಂದು ಶಿಕ್ಷಣ ದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ | ನಾಡಿನ ಶಿಕ್ಷಣ ಕ್ಷೇತ್ರದಲ್ಲಿನ ಬಲವರ್ಧನೆಗೆ ಒಂದು ಪ್ರಯತ್ನ –

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರನ್ನು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದಾಗ ಕಲ್ಲಡ್ಕ ಎಂಬಲ್ಲಿ ಎಡ ತಿರುವು ಕೇರಳ ರಾಜ್ಯಕ್ಕೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿ ಹೋದರೆ ಹಚ್ಚ ಹಸಿರಿನಿಂದ ಕೂಡಿದ ಕಳಂಜಿಮಲೆ ಕಾಡನ್ನು ದಾಟಿದಾಗ ಕಾಣ ಸಿಗುವ ಅತೀ ಮನೋಹರವಾದ, ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಸಹೃದಯಿ ಹಸಿರುತಾಣ ಸಪ್ತ ಭಾಷಾ ಸಂಗಮ ಗಡಿನಾಡಾದ ” ಪೆರುವಾಯಿ ಎಂಬ ಸಹೃದಯ ವಂತಿಕೆಯ ಸೌಹಾರ್ದ ನಾಡು”

ಕೌಟುಂಬಿಕ ಜೀವನ ನಿರ್ವಹಣೆಯ ಜವಾಬ್ದಾರಿ ಹೊತ್ತು ಈ ಸುಂದರ ನಾಡಾದ ಪೆರುವಾಯಿಂದ ಅರಬಿ ಸಮುದ್ರವನ್ನು ದಾಟಿ ಮೂರು ಸಾವಿರ ಕಿಲೋಮೀಟರ್ ಆಚೆಗಿರುವ ಗಲ್ಫ್ ನಾಡಾದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ದುಡಿಯುತ್ತಿರುವ ಶ್ರಮ ಜೇವಿಗಳು ಒಟ್ಟು ಸೇರಿ…
ಕಾರುಣ್ಯ ನೇತಾರ ,ಮಹಾನ್ ಮಾನವತಾವಾದಿ, ಲೋಕದ ಸೃಷ್ಟಿಗೆ ಕಾರಣ ಭೂತರಾದ ನಬಿ ಕರೀಂ ರಸೂಲ್ ಸ.ಅ ರ ಪುಣ್ಯ ಆಹ್ವಾನ ವಾದ , ಅಲ್ಲಾಹನು ತನಗೆ ನೀಡಿದ ಅನುಗ್ರಹದಲ್ಲಿ ತಮ್ಮ ನೆರಹೊರೆಯವರ ಸಮಸ್ಯೆಗಳಿಗೂ ಸ್ಪಂದಿಸು ಎಂಬ ಕಾರುಣ್ಯದ ಮಾತನ್ನು ಪರಿಗಣಿಸಿ…..?

ಮರಳು ಗಾಡಿನ ಸುಡುಬಿಸಿಲಿಗೆ ಮೈಯೊಡ್ಡಿ ನೊಂದು ಬೆಂದು ಬೆವೆತ ಅನಿವಾಸಿ ಪೆರುವಾಯಿಗರ ಆತ್ಮೀಯ ಸಿಂಚನ , ಆದರ್ಶ ಕಾಮನಬಿಲ್ಲು , ಸಾಂತ್ವನ ಪ್ರದೀಪಾ ಮಾದರಿಯುಕ್ತ ಸಮಿತಿ ,
ಗಲ್ಫ್ ಪೆರುವಾಯಿಗರಲ್ಲಿ ಜ್ವಾಲಾ ಮುಖಿಯಂತೆ ಅಪ್ಪಳಿಸಿ ಮನೆ ಮಾತಾದ ಕೊಲ್ಲಿ ರಾಷ್ಟ್ರದ ಸುನ್ನಿ ಸಮಿತಿ.

ಸಂಘಟನಾ ಚಾತುರ್ಯತೆ ಯಲ್ಲಿ , ಸೇವಾ ಕೈಕಾರ್ಯದಲ್ಲಿ ಭಲೇ ಎಂದೆನಿಸಿಕೊಂಡ ಆದರ್ಶ ಸಮಿತಿ.. ಪುಣ್ಯ ನೆಬಿಯರವರು ಬಿರುದಾಂಕಿತ ಪಡೆದ ಪುಣ್ಯ ನಾಮದಲ್ಲಿ ರಚಿತ ಗೊಂಡ ಸಮುದಾಯ ಸ್ನೇಹ ಸಮಿತಿ ಅದುವೇ ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿ”

ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು , ಪೆರುವಾಯಿ ನಾಡಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರಂತರ ಸೇವೆ ಗೈಯ್ಯುತ್ತಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಪೆರುವಾಯಿ ನಾಡಿನ ಅನಿವಾಸಿ ಭಾರತೀಯ ಸಹೃದಯಗಳು ಒಟ್ಟು ಸೇರಿಕೊಂಡು ರಚಿಸಿದ ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿ ಯು , ಪೆರುವಾಯಿ ಮುಚ್ಚಿರಪದವು ಮರಿಯಮ್ ಖಲ್ಫಾನ್ ಮದ್ರಸಾ ಸಭಾಂಗಣದಲ್ಲಿ” ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ” ನಮ್ಮ, ನಮ್ಮ ಮಕ್ಕಳ ಜೀವನದಲ್ಲಿ ಶಿಕ್ಷಣವು ಅದೇಷ್ಟು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಅದರ ಮಹತ್ವ ಮತ್ತು ಒಬ್ಬ ಸುಶಿಕ್ಷಿತ ವ್ಯಕ್ತಿಯ ನಡೆ ನುಡಿ ಆಚಾರ ವಿಚಾರ.. ಇವೆಲ್ಲದರ ಕುರಿತು ಸಮಗ್ರವಾಗಿ ಮನಸ್ಸಿಗೆ ಅರ್ಥೈಸುವ ರೀತಿಯಲ್ಲಿ ತಿಳಿಸಿ ಕೊಡುವ ಪ್ರೇರಣಾತ್ಮಕ ಮಾತುಗಾರ, ಶಿಕ್ಷಣ ತಜ್ಞ ಹಲವಾರು ವೇದಿಕೆಗಳಲ್ಲಿ ಸೆಮಿನಾರ್ ನಡೆಸಿದ ಅನುಭವಿ ಮಾತುಗಾರ.. ದಕ್ಷಿಣ ಕನ್ನಡ ಜಿಲ್ಲೆ ಕಂಡಂತಹ ಅದ್ಭುತ ವಾಕ್ ಚಾತುರ್ಯ ಇರುವ ಶಿಕ್ಷಣ ಕ್ರಾಂತಿಯ ಹರಿಕಾರ ಮಾನ್ಯ ಮಾಸ್ಟರ್ ರಫೀಕ್ ಸಾರ್ ಆತೂರ್ ರವರು ಮುಖ್ಯ ಅತಿಥಿಯಾಗಿ ಪೆರುವಾಯಿ ನಾಡಿನ ಮತ್ತು ಹೊಂದಿಕೊಂಡಿರುವ ಸುತ್ತಮುತ್ತಲಿನ ನಾಡಿನ ಮಕ್ಕಳಿಗೆ ಮತ್ತು ಪೋಷಕರಿಗೆ ಒಂದು ಉಪಯೋಗಕರವಾದ ಕಾರ್ಯಕ್ರಮ : ” ಶಿಕ್ಷಣ ದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ” ವನ್ನು ದಿನಾಂಕ 04-ಸೆಪ್ಟೆಂಬರ್ 2022 ರಂದು ಆಯೋಜಿಸಿಕೊಂಡಿದ್ದು.. ಪೆರುವಾಯಿ ನಾಡಿನ ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮವಾದ ಬದಲಾವಣೆಯ ಕ್ರಾಂತಿಗೆ ಅಡಿಪಾಯ ಹಾಕುವ ಕಾರ್ಯವನ್ನು ಕೈಗೊಳ್ಳುತ್ತಿದೆ. ದೀನಿ ಮತ್ತು ದೀನಿಯೇತರ
ಶಿಕ್ಷಣ ಕ್ಷೇತ್ರದಲ್ಲಿನ ಸಾಧಕರಿಗೆ.. ಪ್ರೇರಣಾತ್ಮಕ ಪ್ರೋತ್ಸಾಹಕ ಗಳನ್ನು ಸಮಿತಿಯು ಪ್ರಾರಂಭ ಹಂತದಿಂದಲೇ ಮಾಡುತ್ತಾ ಬರುತ್ತಿದ್ದು.. ಸತತವಾಗಿ ಎರಡನೇ ಬಾರಿಗೆ ಮಾಹಿತಿ ಕಾರ್ಯಾಗಾರ ಶಿಬಿರವನ್ನು ಹಮ್ಮಿಕೊಳ್ಳುತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಶಿಕ್ಷಣ ಅದೊಂದು ವಿಶಾಲವಾದ ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ. ತೊಟ್ಟಿಲಿನಿಂದ ಮಸಣ ದ ತನಕ ನಿರಂತರವಾಗಿ ನಡೆಯುತ್ತಾ ಇರುವ ಒಂದು ಕ್ರಿಯೆ ಅಂದರೆ ಅದು ಕಲಿಕೆ. ಒಬ್ಬ ಮನುಷ್ಯ ತನ್ನ ಹುಟ್ಟಿನಿನಿಂದ ತನ್ನ ಜೀವಿತಾವಧಿಯ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ವಿಚಾರ ವನ್ನು ಕಲಿಯುತ್ತಾ ಇರುತ್ತಾನೆ ಈ ಕಲಿಕೆಗೆ ಕೊನೆ ನಮ್ಮ ಉಸಿರು ನಿಂತಾಗ ಮಾತ್ರ.

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಹೆತ್ತವರೆ ಮೊದಲ ಶಿಕ್ಷಕರು.. ತದ ನಂತರ ನಮ್ಮ ಸುತ್ತಮುತ್ತಲಿನ ವಾತಾವರಣ ನಂತರ ನಾಲ್ಕು ಗೋಡೆಗಳ ನಡುವೆ ಇರುವ ಶಿಕ್ಷಣ ಅಲ್ಲಿ ಕೂಡ ಪಠ್ಯ ಪಠ್ಯೇತರ ಕಲಿಕೆ.. ತದ ನಂತರ ಉನ್ನತ ಶಿಕ್ಷಣ ನಂತರ ಜವಾಬ್ದಾರಿಯುತ ಜೀವನ ನಡೆಸಿಕೊಂಡು ಹೋಗಲು ವೃತ್ತಿ ನಿರತ ವಾತಾವರಣದಲ್ಲಿ ಶಿಕ್ಷಣ ಹೀಗೆ ನಮ್ಮ ಕೊನೆಯ ಉಸಿರಿನ ತನಕ ಶಿಕ್ಷಣ ವು ಮಹತ್ತರವಾದ ಪಾತ್ರವನ್ನು ವಹಿಸಿಕೊಳ್ಳುತ್ತದೆ.

ಈ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಪ್ರಮುಖ ಅಂಗ. ಆದರೆ ಅದರ ಪ್ರಾಮುಖ್ಯತೆ ಅರಿವಾಗುವುದು ನಾವು ಈ ಸ್ಪರ್ಧಾತ್ಮಕ ಯುಗದಲ್ಲಿ ಕುಟುಂಬ ಜೀವನ ವೆಂಬ ಮಹತ್ತರ ವಾದ ಹಡಗನ್ನು ಮುನ್ನಡೆಸಲು ಹೊರಟಾಗ ಮಾತ್ರ…

ಯಾವ ಸಮಯದಲ್ಲಿ ಕಲಿಯಬೇಕೋ ಆ ಸಮಯದಲ್ಲಿ ಕಲಿಯಲ್ಲ.. ಯಾವ ಸಮಯದಲ್ಲಿ ಕಲಿಯಬೇಕೋ ಅನ್ನಿಸುತ್ತದೆ ಯೋ ಆ ಸಮಯದಲ್ಲಿ ಕಲಿಯೊಕ್ಕೋ ಅವಕಾಶ ಸಿಗಲ್ಲ..

ಪ್ರಸ್ತುತ ಯುಗ ಸಾಮಾಜಿಕ ಜಾಲತಾಣಗಳ ಗುಲಾಮರಾಗಿ ಪದವಿ ಯಾದರಿತ ಶಿಕ್ಷಣ ದಿಂದ ಮಕ್ಕಳು ಯುವ ಸಮೂಹವು ದಾರಿ ತಪ್ಪುತ್ತಾ ಇದ್ದು ಪೋಷಕರ ಕಡೆಯಿಂದಲೂ ಮಾಹಿತಿ ಯ ಪ್ರೇರಣೆ ಯ ಕೊರತೆ ಎದ್ದು ಕಾಣುತ್ತಿದೆ…

ಅದೇ ರೀತಿ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ದುಪ್ಪಟ್ಟು ನಮ್ಮ ವ್ಯಕ್ತಿತ್ವ ಮುಖ್ಯ.. ನಮ್ಮ ಆ ಆಚಾರ ವಿಚಾರ ನಡೆ ನುಡಿ ಇವೆಲ್ಲವೂ ಜೀವನದ ಲ್ಲಿನ ಅವಿಭಾಜ್ಯ ಅಂಗಗಳು ಶಿಕ್ಷಣ ಮತ್ತು ವ್ಯಕ್ತಿತ್ವ ಇವೆರಡು ಪರಸ್ಪರ ಸಾಮ್ಯತೆ ಇರುವ ಜೀವನದ ಪ್ರಮುಖ ಅಂಗ..

ಯಾರಿಂದಲೂ ಕಸಿದುಕೊಳ್ಳಲು ಸಾಧ್ಯ ಇಲ್ಲದ ಒಂದು ವಸ್ತು ಇದ್ದರೆ ಅದು ಶಿಕ್ಷಣ ..

ಶಿಕ್ಷಣ ವೆಂಬ ಆಯುಧ ನಮ್ಮ ಕೈಯಲ್ಲಿದ್ದರೆ ನಮಿಗೆ ಯಾವ ಶತ್ರುವನ್ನು ಭಯ ಪಡುವ ಅಗತ್ಯವಿಲ್ಲ..

ನಮ್ಮ ಶಿಕ್ಷಣ ನಮ್ಮ ಪದವಿ ಇವೆಲ್ಲವೂ ಸಮಾಜದ ಒಳಿತಿನ ಉಪಯೋಗಕ್ಕಿರಲಿ ಎಂಬುದೇ ನನ್ನ ಆಶಯ..
➖➖➖➖➖➖➖➖➖➖
ಅಲ್ ಅಮೀನ್ ಸಮಿತಿಯ ಕಾರ್ಯ ವ್ಯಾಪ್ತಿ:-

1.ಬಡ/ಯತೀಮ್ ಹೆಣ್ಣು ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಸಹಕಾರ
2.ಸೂರಿಲ್ಲದ ನಿರ್ಗತಿಕ ಕುಟುಂಬ ಕ್ಕೆ ಆಶ್ರಯ ಕಲ್ಪಿಸುವುದು ಮತ್ತು ದುರಸ್ತಿಕರಣ
3.ಶೈಕ್ಷಣಿಕ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳ ಆಯೋಜನೆ, ದೀನಿ ಮತ್ತು ದೀನಿಯೇತರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು, ಶಿಕ್ಷಣ ಉತ್ತೇಜನಾ ತರಬೇತಿ ಶಿಬಿರಗಳ ಆಯೋಜನೆ, ಪ್ರೋತ್ಸಾಹಕ ಬಾಹ್ಯ ಪ್ರೇರಣಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವುದು.

  1. ಬಡ ನಿರ್ಗತಿಕ ,ಅರ್ಹ ಅಸಹಾಯಕ ಕುಟುಂಬಗಳಿಗೆ ವೈದ್ಯಕೀಯ ಸಹಕಾರ ನೀಡುವುದು.

5.ಅರ್ಹ ಕುಟುಂಬಗಳಿಗೆ ಆಹಾರ ವೈದ್ಯಕೀಯ ಕಿಟ್ ವಿತರಣೆ.

6.ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಉದ್ಯೋಗ ಅರಸಿ ಬಂದ ಪೆರುವಾಯಿ ನಾಡಿನ ಅನಿವಾಸಿ ಭಾರತೀಯರಿಗೆ ಅರ್ಹತೆ ಗನುಸಾರವಾಗಿ ಸಹಕಾರ ಸಹಾಯ ಕಲ್ಪಿಸುವುದು.

7.ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಅನಿರೀಕ್ಷಿತ ಆಪತ್ ಸಮಸ್ಯೆಯಲ್ಲಿ ಸಿಲುಕಿ ಕೊಂಡಿರುವ ನಾಡಿನ ಜನರ ಸಮಸ್ಯೆ ಗಳಿಗೆ ಸ್ಪಂದಿಸುವುದು.

  1. ವರ್ಷಗಳಿಗೊಮ್ಮೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಅನಿವಾಸಿ ಭಾರತೀಯರಿಗೆ ಸಮ್ಮಿಲನ ಕಾರ್ಯ ಕ್ರಮಗಳನ್ನು ಆಯೋಜಿಸುವುದರ ಮೂಲಕ ಬಾಹ್ಯ ಆಂತರಿಕ ಸ್ಪರ್ಧಾ ಕಾರ್ಯಕ್ರಮ ಗಳಿಗೆ ಅವಕಾಶ ಕಲ್ಪಿಸಿ ಪ್ರೋತ್ಸಹಿಸುವುದು ಪರಸ್ಪರ ಸಂತಸ ಹಂಚಿಕ್ಕೊಳ್ಳುವುದು.
  2. ಸದಸ್ಯರಿಂದ ಪ್ರಾರಂಭ ಗೊಂಡ ಸಮಿತಿ ಪ್ರಸ್ತುತ 60 ಸದಸ್ಯರನೊಳಗೊಂಡು ಸಾಮುದಾಯಿಕ ಸಾಂತ್ವನ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡುತ್ತಾ ಸಮುದಾಯ ರಂಗದಲ್ಲಿ ತನ್ನದೇ ಆದ ರೀತಿ ನಿಯಮಗಳ ಅಡಿಯಲ್ಲಿ ಕಾರ್ಯಚರಿಸುತ್ತಿದೆ.

ಈ ಸಮಿತಿಯ ಸರ್ವ ಒಳಿತಿನ ಕಾರ್ಯಕ್ರಮಗಳನ್ನು ಸರ್ವ ಶಕ್ತನಾದ ಅಲ್ಲಾಹು ಸ್ವೀಕರಿಸಲಿ,
ಸರ್ವ ಸದಸ್ಯರಿಗೂ ಒಳಿತನ್ನು ಅನುಗ್ರಹಿಸಲಿ.

  • ಸಮೀರ್ ದರಕಾಸ್

Leave A Reply

Your email address will not be published.