ಹೋಟೆಲ್ ನಲ್ಲಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು | ಜೊತೆಗಿದ್ದ ಯುವಕ ಎಸ್ಕೇಪ್, ಕೊಲೆ ಶಂಕೆ

ಹೋಟೆಲ್ ನಲ್ಲಿ ಯುವತಿಯೋರ್ವಳ(Lady) ಅನುಮಾನಾಸ್ಪದ ಸಾವು ಉಂಟಾಗಿದ್ದು, ಮೈಸೂರು ಜನತೆ ನಿಜಕ್ಕೂ (Mysuru) ಬೆಚ್ಚಿಬಿದ್ದಿದೆ ಎಂದೇ ಹೇಳಬಹುದು. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ (Hotel) ವಾಸ್ತವ್ಯ ಹೂಡಿದ್ದ 21 ವರ್ಷ ಯುವತಿ ಅನುಮಾನಾಸ್ಪದವಾಗಿ (Suspect Death) ಸಾವು ಕಂಡಿದ್ದಾಳೆ. ಮೈಸೂರು ಹುಣಸೂರು ರಸ್ತೆಯಲ್ಲಿರುವ ಹೋಟೆಲ್ ಘಟನೆ ನಡೆದಿದೆ.

 

ಅಪೂರ್ವ ಶೆಟ್ಟಿ ಎಂಬ ಯುವತಿಯೇ ಅನುಮಾನಾಸ್ಪದವಾಗಿ ಸಾವು ಕಂಡಾಕೆ. ಇದರ ಜೊತೆಗೆ ಈ ಯುವತಿ ಜೊತೆಗೆ ಬಂದಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಈತನೇ ಕೊಲೆಗೈದಿರುವ ಅನುಮಾನ ವ್ಯಕ್ತವಾಗಿದೆ.

ಅಪೂರ್ವ ಶೆಟ್ಟಿ, ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ (Engineering Student) ಕಲಿಯುತ್ತಿದ್ದಳು.
ಘಟನಾ ಸ್ಥಳಕ್ಕೆ ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕು ಹರಳಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವರ ಪುತ್ರಿ ಅಪೂರ್ವ ಶೆಟ್ಟಿಯೇ ಸಾವನ್ನಪ್ಪಿರುವ ಯುವತಿ. ಇನ್ನು ಸಾವನ್ನಪ್ಪಿರುವ ಸ್ಥಳಕ್ಕೆ ಬೆರಳಚ್ಚು ತಜ್ಞರು ದೌಡಾಯಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇಂದು ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭವಿತ್ತು. ಆಗಸ್ಟ್ 30ರಂದು ಯುವಕನ ಜೊತೆ ಹೋಟೆಲ್ ಗೆ ಬಂದಿದ್ದ ಅಪೂರ್ವ ಕೊಠಡಿ ಬಾಡಿಗೆಗೆ ಪಡೆದು ವಾಸ್ತವ್ಯ ಹೂಡಿದ್ದರು. ಇದರ ನಡುವೆ ಯುವತಿ ಹೆಣವಾಗಿ ಪತ್ತೆಯಾಗಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುವುದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಅಂತಾ ಮೈಸೂರು ನಗರ ಡಿಸಿಪಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ.

Leave A Reply

Your email address will not be published.