ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ | ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ, ಒಟ್ಟು 19 ಹುದ್ದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.29
ಭಾರತೀಯ ಅಂಚೆಯು ಕರ್ನಾಟಕ ವೃತ್ತದಲ್ಲಿ ನೇಮಕ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಸ್ಥಳ: ಕರ್ನಾಟಕ ಅಂಚೆ ವೃತ್ತ, ಬೆಂಗಳೂರು ಹುದ್ದೆ ಹೆಸರು : ಸಿಬ್ಬಂದಿ ಕಾರು ಚಾಲಕ ಹುದ್ದೆ
ಹುದ್ದೆ ಸಂಖ್ಯೆ : 19
ಜೆನೆರಲ್ ಕೆಟಗರಿ – 07, EWS – 02, ಪರಿಶಿಷ್ಟ ಜಾತಿ
04, ಪರಿಶಿಷ್ಟ ಪಂಗಡ – 01, ಒಬಿಸಿ – 05, ಮಾಜಿ ಸೈನಿಕ ಅಭ್ಯರ್ಥಿ – 02 ಹುದ್ದೆಗಳು ಮೀಸಲಾತಿ ಪ್ರಕಾರ
ವಿಂಗಡಣೆ ಮಾಡಲಾಗಿದೆ.
ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷ ವಯಸ್ಸು
ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷ ವಯೋಮಿತಿ ಸಡಿಲಿಕೆ
ನೀಡಲಾಗಿದೆ.
ವೇತನ ಶ್ರೇಣಿ : ರೂ.19,900 (ಲೆವೆಲ್-2, 7 ಸಿಪಿಸಿ
ಮೇ ಮೆಟ್ರಿಕ್)ಪ್ರೊಬೇಷನ್ ಅವಧಿ : ಎರಡು ವರ್ಷ.
ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆ- ಲಘು ಮತ್ತು ಭಾರಿ ವಾಹನ ಚಾಲನೆ ಪರವಾನಗಿ (ಲೈಸೆನ್ಸ್) ಅಭ್ಯರ್ಥಿಗಳು ಹೊಂದಿರಬೇಕು. ಹಾಗೂ ಅಭ್ಯರ್ಥಿಗಳಿಗೆ
ಕನಿಷ್ಠ 3 ವರ್ಷ ಚಾಲನೆಯ ಅನುಭವ ಹೊಂದಿರಬೇಕು. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು.
ಅರ್ಜಿ ಸಲ್ಲಿಕೆ ವಿಧಾನ ; ಅಭ್ಯರ್ಥಿಗಳು ನೋಟಿಫಿಕೇಶನ್ ಜೊತೆಗೆ ಅರ್ಜಿ ನಮೂನೆ ಇದೆ. ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಚಾಲನೆ ಹಾಗೂ ಮೊಟಾರು ಮೆಕ್ಯಾನಿಷಮ್ ಕುರಿತು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಥಿಯರಿ ಪರೀಕ್ಷೆಯ ಪಠ್ಯಕ್ರಮ, ದಿನಾಂಕ, ಪರೀಕ್ಷೆ ಮಾದರಿ ಕುರಿತು
ಪ್ರತ್ಯೇಕವಾಗಿ ಈ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ : The Manager, Mail Motor Service, Bengaluru-560001.
ಅರ್ಜಿ ಸ್ವೀಕಾರ ಮಾಡಲು ಕೊನೆ ದಿನಾಂಕ: 26-09 2022 ರ ಸಂಜೆ 05 ಗಂಟೆವರೆಗೆ.
ಅಭ್ಯರ್ಥಿಗಳು ಅರ್ಜಿಯ ಲಕೋಟೆ ಮೇಲೆ ‘ Application for the post of Driver (Direct Recruitment) at MMS Bengaluru’ ಎಂದು ಬರೆಯಬೇಕು.
ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.