ಕುಡಿದು ಟೈಟಾಗಿ ತನ್ನ ಮದುವೆಗೂ ಹೋಗದ ವಧು | ಗೊರಕೆ ಹೊಡೆಯುತ್ತಾ ನಿದ್ದೆಗೆ ಜಾರಿದ ಮದುಮಗಳು
ಮದುವೆ ಎಂದರೆ ಭಾರೀ ಸಂಭ್ರಮ, ಸಂತೋಷದ ಕ್ಷಣ ನವವಧು ವರರಿಗೆ. ಹೆಣ್ಮಕ್ಕಳಿಗಂತೂ ಇದು, ನಿಜಕ್ಕೂ ಜೀವಮಾನ ಪೂರ್ತಿ ಮರೆಯಲಾಗದಂತಹ ದಿನ, ಕ್ಷಣ ಎಂದೇ ಹೇಳಬಹುದು. ಬಂದಿರುವ ನೆಂಟರಿಗಿಂತ ತಾನೇ ಎಲ್ಲರಿಗಿಂತ ಚಂದ ಕಾಣಬೇಕೆಂಬುದು ಮದುಮಗಳ ಆಸೆ. ಹಾಗಾಗಿ, ಈ ಖುಷಿನಾ ಮದುವೆಯ ಎಲ್ಲಾ ಸಂಭ್ರಮ ಮುಗಿಯುವವರೆಗೆ ಎಲ್ಲಾ ಮದುಮಕ್ಕಳು ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ಮದುಮಗಳು ಮದುವೆಯ ಖುಷಿಯಲ್ಲಿ ಕಂಠಪೂರ್ತಿ ಕುಡಿದು ರಿಸೆಪ್ಶನ್ ಮುಗಿಯುವವರೆಗೂ ಮಲಗೇ ಇದ್ದ ಘಟನೆಯೊಂದು ನಡೆದಿದೆ.
ಆದರೆ ಮದುಮಗ ಮಾತ್ರ ಟಿಪ್ ಟಾಪ್ ಆಗಿ ನೆಟ್ಟಗೆ ಇದ್ದು, ಒಬ್ಬನೇ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಘಟನೆಯೊಂದು ನಡೆದಿರುವ ಬಗ್ಗೆ ಮದುವೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈಗ ಈ ಪೋಸ್ಟ್ ವೈರಲ್ ಆಗಿದೆ.
“ನಾನು ಇತ್ತೀಚೆಗೆ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದೆ. ಸಂಜೆ ಆರು ಗಂಟೆಗೆಲ್ಲಾ ರಿಸೆಪ್ಶನ್ ಆರಂಭವಾಯಿತು. ಗಂಡು ಹೆಣ್ಣು ಇಬ್ಬರೂ ಬಂದರು. ಅಧಿಕೃತವಾದ ಭಾಷಣ ಮತ್ತುಳಿದ ಕಾರ್ಯಕ್ರಮ ಕ್ಷಣದೊಳಗೆ ಮುಗಿದುಹೋಯಿತು. ಯಾಕೆ ಇಷ್ಟೊಂದು ತುರ್ತಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ ಮದುಮಗಳ ಪರಿಸ್ಥಿತಿಯನ್ನು ನೋಡಿ ಅರ್ಥವಾಗಿತ್ತು. ಆಕೆ ಕುಡಿದಿದ್ದಳು. ಏನು ಮಾಡುತ್ತಿದ್ದಾಳೆ ಎಂಬ ಪರಿಭ್ರಮೆಯೂ ಆಕೆಗಿರಲಿಲ್ಲ.” ಎಂದು ಮದುವೆಯ ಬಗ್ಗೆ ಸಂಬಂಧಿ ಬರೆದುಕೊಂಡಿದ್ದಾರೆ.
ಸಂಜೆ ಎಂಟು ಗಂಟೆಗೆನೇ ಮದುಮಗಳು ನಿಲ್ಲಲೂ ಶಕ್ತಿಯಿಲ್ಲದೇ ಮಲಗಿಬಿಟ್ಟಿದ್ದಾಳೆ. ನಂತರ ರಿಸೆಪ್ಶನ್ ಹೊರಬದಿಯ ಸೋಫಾ ಒಂದರ ಮೇಲೆ ಮಲಗಿದವಳು ರಿಸೆಪ್ಶನ್ ಮುಗಿದು, ನೆಂಟರಿಷ್ಟರು ಬಂದು ಉಂಡು ಹೋಗುವವರೆಗೆ ಏಳಲಿಲ್ಲವಂತೆ.
ನಂತರ ರಿಸೆಪ್ಶನ್ ಮುಗಿದ ಮೇಲೆ ಆಕೆಯನ್ನು ಎತ್ತಿಕೊಂಡು ಕಾರಿನತ್ತ ಕರೆದೊಯ್ಯಲಾಯಿತಂತೆ. ಬೆಲೆಬಾಳುವ ಬಟ್ಟೆ ಧರಿಸಿದ್ದ ಆಕೆ, ಅದರ ಮೇಲೆಯೇ ವಾಂತಿ ಮಾಡಿಕೊಳ್ಳುತ್ತಿದ್ದರಂತೆ ಎಂದು ಸಂಬಂಧಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಹಲವರು, ತನ್ನ ಮದುವೆಯ ದಿನವೇ ಹುಡುಗಿ ಈ ರೀತಿ ಮಾಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ ಹಲವು ಕಮೆಂಟ್ ಗಳನ್ನು ಹಾಕಿದ್ದಾರೆ.
ಅಳತೆ ಮೀರಿ ಕುಡಿದರೆ ಏನಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಒಟ್ಟಿನಲ್ಲಿ ಜೀವನದ ಅತ್ಯಂತ ಖುಷಿಯ ಕ್ಷಣಗಳನ್ನು ಮದುಮಗಳು ಮಿಸ್ ಮಾಡಿಕೊಂಡಿದ್ದಾಳೇ ಎಂದೇ ಹೇಳಬಹುದು. ಹಾಗೆನೇ ಲಿಮಿಟ್ ಮೀರಿ ಕುಡಿದರೆ ಏನಾಗುತ್ತೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಈ ಘಟನೆಯಿಂದ ಮದುಮಗಳು ಟ್ರೋಲ್ ಆಗಿದ್ದಲ್ಲದೇ ಬಾರೀ ಮುಜುಗರಕ್ಕೆ ಒಳಗಾಗಿದ್ದಾಳೆ. ಆದರೂ ಆಕೆಯ ಪರವೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಮದುವೆ ಎಂದರೆ ಆಕೆಯ ದಿನ, ಆಕೆ ಕುಡಿದಿರುವ ಬಗ್ಗೆ ಗಂಡನಿಗೇ ಸಮಸ್ಯೆ ಇಲ್ಲ ಎಂದ ಮೇಲೆ ನೀವ್ಯಾಕೆ ಅದನ್ನು ವಿಶ್ಲೇಷಿಸುತ್ತೀರಿ ಎಂದು ಟೀಕಾಕಾರರ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಇದೆಲ್ಲ ಆಕೆ ನೋಡಿರಬಹುದೇ? ಆಕೆಯ ಗಮನಕ್ಕೆ ಬಂದಿರಬಹುದೇ? ಆಕೆಯ ಉತ್ತರ ಮಾತ್ರ ಎಲ್ಲೂ ಇಲ್ಲ.