ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್‍ಗಳನ್ನು ಬೇಕಾಬಿಟ್ಟಿ ಎಸೆದ ಸಿಬ್ಬಂದಿ ; ಈ ಕುರಿತು ರೈಲ್ವೆ ಇಲಾಖೆ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಬಟ್ಟೆ ಲ್ಯಾಪ್‌ಟಾಪ್, ಟಿವಿ, ಮೊಬೈಲ್ ಮುಂತಾದ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತೀರಾ? ಹಾಗಿದ್ರೆ ನೀವು ಈ ವಿಡಿಯೋವನ್ನು ನೋಡಲೇಬೇಕು. ಇದು ರೈಲಿನಲ್ಲಿ ಬಂದ ಆನ್‌ಲೈನ್ ಆರ್ಡರ್‌ಗಳಾಗಿದ್ದು, ಇದನ್ನು ಮತ್ತೊಂದೆಡೆಗೆ ಸಾಗಿಸಲು ರೈಲಿನಿಂದ ಆನ್‌ಲೋಡ್ ಮಾಡುತ್ತಿರುವ ದೃಶ್ಯವಾಗಿದೆ. ರೈಲಿನಿಂದ ತೆಗೆದು ಫ್ಲಾಟ್‌ಪಾರ್ಮ್‌ನತ್ತ ಕೆಲಸಗಾರರು ಎಸೆಯುತ್ತಿದ್ದ ದೃಶ್ಯವನ್ನು ಸ್ಥಳೀಯರು ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಅಲ್ಲದೇ ಆನ್‌ಲೈನ್ ಶಾಪಿಂಗ್ ಪ್ರಿಯರು ಈ ದೃಶ್ಯ ನೋಡಿ ಗಾಬರಿಯಾಗಿತ್ತು.

ಆದರೆ, ಇದೀಗ ಈ ವೀಡಿಯೋ ಕುರಿತಂತೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಸ್ಪಷ್ಟನೆ ನೀಡಿದೆ. ಹೌದು, ಗುವಾಹಟಿ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್‍ಗಳನ್ನು ಕೆಳಗಿಳಿಸುವಾಗ ಕೆಲಸಗಾರರು ಬೇಜವಾಬ್ದಾರಿಯಿಂದ ಇಷ್ಟಬಂದಂತೆ ಬೀಸಾಡಿದ್ದರು. ಈ ವೀಡಿಯೋ ಮಾರ್ಚ್ 22ರ ಗುವಾಹಟಿ ರೈಲ್ವೆ ನಿಲ್ದಾಣದ್ದಾಗಿದೆ. ನವದೆಹಲಿ ದಿಬ್ರುಗಢ ರಾಜಧಾನಿ ಎಕ್ಸ್‍ಪ್ರೆಸ್ (12424) ರೈಲಿನಲ್ಲಿ ಬಂದ ಈ ಪಾರ್ಸೆಲ್‍ಗಳು ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಂದ ಬಂದಿವೆ ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.

ಇದೀಗ ಈ ವೀಡಿಯೋಗೆ ಸ್ಪಷ್ಟನೆ ನೀಡಿರುವ ಈಶಾನ್ಯ ಫ್ರಾಂಟಿಯರ್ ರೈಲ್ವೆ, ಇದೊಂದು ಹಳೆಯ ವೀಡಿಯೋ. ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವವರು ರೈಲ್ವೆ ಉದ್ಯೋಗಿಗಳಲ್ಲ ಎಂದು ತಿಳಿಸಿದ್ದಾರೆ. ಇದು ಮಾರ್ಚ್ 2022ರ ಹಳೆಯ ವೀಡಿಯೋ ಆಗಿದ್ದು, ಗುವಾಹಟಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಬಂದ ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವ ವ್ಯಕ್ತಿಗಳು ವಸ್ತುಗಳಿಗೆ ಸಂಬಂಧಪಟ್ಟವರಾಗಿದ್ದಾರೆ. ರೈಲ್ವೆಯು ವಿವಿಧ ಪಾರ್ಟಿಗಳಿಗೆ ಗುತ್ತಿಗೆ ಆಧಾರದ ಮೇಲೆ ಪಾರ್ಸೆಲ್ ಜಾಗವನ್ನು ಬುಕ್ಕಿಂಗ್ ನೀಡುತ್ತದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಟ್ವೀಟ್ ಮಾಡಿದೆ. ಈ ಮೂಲಕ ಆನ್ಲೈನ್ ಶಾಪಿಂಗ್ ಗ್ರಾಹಕರ ಗೊಂದಲವನ್ನು ದೂರಗೊಳಿಸಿದ್ದಾರೆ.

Leave A Reply

Your email address will not be published.