ಗೂಗಲ್ ಪೇ, ಫೋನ್ ಪೇ ಮುಂತಾದ UPI ವಹಿವಾಟಿನ ದಿನದ ಗರಿಷ್ಠ ಟ್ರಾನ್ಸ್ ಫರ್ ಲಿಮಿಟ್ ಎಷ್ಟು ಗೊತ್ತಾ? ; ಬ್ಯಾಂಕ್ ವಾರು ವರ್ಗಾವಣೆ ಮಿತಿಯ ಕಂಪ್ಲೀಟ್ ಡೀಟೇಲ್ಸ್!
ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್ ಪಾವತಿಯನ್ನು ಸ್ವೀಕರಿಸುತ್ತಾರೆ. ಡಿಜಿಟಲ್ ಇಂಡಿಯಾದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿದೆ. ಯುಪಿಐ ಮೂಲಕ ಎಲ್ಲ ರೀತಿಯ ಹಣಕಾಸು ವ್ಯವಹಾರ, ಬ್ಯಾಂಕಿನ ವ್ಯವಹಾರ ತುಂಬಾ ಸುಲಭವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಸ್ವೀಕೃತಿಯನ್ನು ಇದು ತುಂಬಾ ಸುಲಭಗೊಳಿಸಿದೆ.
ಏಕಿಕೃತ ಪಾವತಿ ವ್ಯವಸ್ಥೆ ಎಂಬುದು ಯಪಿಐ ವಿಸ್ತ್ರತ ರೂಪ. ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಇದು ಸಹಕಾರಿ. ಪ್ರತಿ ಬಳಕೆದಾರರ ಯಪಿಐ ಸಂಖ್ಯೆ ಬೇರೆಯದೇ ಆಗುತ್ತದೆ. ನೀವು ಒಂದು ಯುಪಿಐ ಅಪ್ಲಿಕೇಶನ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು ಮತ್ತು ಕೆಲವೇ ಸೆಕೆಂಡುಗಳಲ್ಲಿ ಹಣವನ್ನು ವರ್ಗಾಯಿಸಬಹುದು. ಇದರಿಂದ ಎಸ್ಎಂಎಸ್ ಕಳಿಸಿದಷ್ಟೇ ಸರಳವಾಗಿ ಬೇರೊಬ್ಬರಿಗೆ ಹಣ ಪಾವತಿ ಮಾಡಬಹುದಾಗಿದೆ.
ಫೋನ್ ಪೇ, ಗೂಗಲ್ ಪೇ ಆನ್ಲೈನ್ ವಾಲೆಟ್ ಆಪ್ ಆಗಿದ್ದು, ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದೆ. ಫೋನ್ ಪೇ ಆಪ್ ಫ್ಲಿಪ್ಕಾರ್ಟ್ ಆಗಸ್ಟ್ ನಲ್ಲಿ ಲಾಂಚ್ ಮಾಡಿದ್ದು, ಯುಪಿಐ ಆಧರಿತ ಆಪ್ ಹಣ ನಿರ್ವಹಣೆಯನ್ನು ತುಂಬಾ ಸುರಕ್ಷಿತ ರೀತಿಯಲ್ಲಿ ನಿರ್ವಹಿಸುತ್ತದೆ ಯುಪಿಐ ಆಧರಿತ ಫೋನ್ ಪೇ ಮೂಲಕ ನಿಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಬಹುದು. ಮೊಬೈಲ್ ಸಂಖ್ಯೆ ಅಥವಾ ಯುಪಿಐ ಸಂಖ್ಯೆ ಬಳಸಿ ಶೀಘ್ರದಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಬಹುದು.
ಈ ಹಣದ ವಹಿವಾಟಿಗೆ ಇನ್ನೂ ಯಾವುದೇ ಶುಲ್ಕವಿಲ್ಲ. ನೀವು ಯಾರಿಗಾದರೂ ಸಂಪೂರ್ಣವಾಗಿ ಉಚಿತವಾಗಿ ಹಣವನ್ನು ಕಳುಹಿಸಬಹುದು. ಅದಕ್ಕಾಗಿಯೇ ಈ ಮಾಧ್ಯಮವು ಬಹಳ ಜನಪ್ರಿಯವಾಗಿದೆ. ದಿನದ 24 ಗಂಟೆಯೂ UPI ಮೂಲಕ ಪಾವತಿಗಳನ್ನು ಮಾಡಬಹುದು. ಆದರೆ ಈ ಪಾವತಿಗೆ ಹೆಚ್ಚಿನ ಮಿತಿ ಇದೆ. NPCI ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಒಂದು ಬಾರಿಗೆ UPI ಮೂಲಕ ಗರಿಷ್ಠ 2 ಲಕ್ಷ ರೂ. ಆದಾಗ್ಯೂ, ಈ ಮೇಲಿನ ಮಿತಿಯು ವಿವಿಧ ಬ್ಯಾಂಕ್‌ಗಳಿಗೆ ವಿಭಿನ್ನವಾಗಿರಬಹುದು.
HDFC ಬ್ಯಾಂಕ್ ವೆಬ್‌ಸೈಟ್‌ನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ತನ್ನ ಗ್ರಾಹಕರಿಗೆ UPI ಮೂಲಕ 10 ವಹಿವಾಟುಗಳನ್ನು ಮಾಡಲು ಅನುಮತಿಸುತ್ತದೆ. ಒಂದು ದಿನದ ವಹಿವಾಟು 1 ಲಕ್ಷ ರೂಪಾಯಿ ಮೀರುವಂತಿಲ್ಲ. ಹೊಸ UPI ಬಳಕೆದಾರರಿಗೆ ಮೊದಲ 24 ಗಂಟೆಗಳಲ್ಲಿ 50 ಸಾವಿರ ವಹಿವಾಟು ಮಿತಿ. ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗ್ರಾಹಕರು ಒಂದು ದಿನದಲ್ಲಿ ಗರಿಷ್ಠ 1 ಲಕ್ಷ ರೂ. ಐಸಿಐಸಿಐ ಬ್ಯಾಂಕ್ ಗ್ರಾಹಕರು 24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟುಗಳನ್ನು ಮಾಡಬಹುದು.
ಯುಪಿಐ ವಹಿವಾಟು ಮಿತಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಬಹುದು. ಯುಪಿಐ ಬಳಸಿ ಮಾಡುವ ವಹಿವಾಟು ಮಿತಿ ದಿನಕ್ಕೆ 1 ಲಕ್ಷ ರೂ. ಆಗಿದೆ. ಯುಪಿಐ ವಹಿವಾಟಿನ ಗರಿಷ್ಠ ಸಂಖ್ಯೆ ಸಾಮಾನ್ಯವಾಗಿ (ಹೆಚ್ಚಿನ ಸಂದರ್ಭಗಳಲ್ಲಿ) 20ಕ್ಕೆ ಸೀಮಿತವಾಗಿರುತ್ತದೆ. ಪ್ರತಿ ಯುಪಿಐ ವಹಿವಾಟಿನಲ್ಲಿ 1 ಲಕ್ಷ ರೂ. ಗರಿಷ್ಠ ಮಿತಿಯು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಇದು 10 ಸಾವಿರದಿಂದ 1 ಲಕ್ಷ ರೂ.ವರೆಗೂ ಇರುತ್ತದೆ.
ಭೀಮ್ ಯುಪಿಐ ವಹಿವಾಟು ಮಿತಿ, ಪ್ರತಿ ವಹಿವಾಟಿಗೆ 40 ಸಾವಿರ ರೂ. ಮತ್ತು 24 ಗಂಟೆಗಳಲ್ಲಿ 40 ಸಾವಿರ ರೂ. ಆಗಿದೆ. ಈ ವಹಿವಾಟು ಮಿತಿ ಭೀಮ್ ಯುಪಿಐಗೆ ಲಿಂಕ್ ಆಗಿರುವ ಖಾತೆಗಳಿಗೆ ಲಭ್ಯವಿರುತ್ತದೆ ಯುಪಿಐ ಐಎಂಪಿಎಸ್ ತಂತ್ರಜ್ಞಾನವನ್ನು ಆಧರಿಸಿರುವುದರಿಂದ ಈ ಮಿತಿಯನ್ನು ನಿಗದಿಪಡಿಸಲಾಗಿದೆ.
ವ್ಯಾಪಾರಿಗಳ ನಡೆಸುವ ವಹಿವಾಟಿನ ಗರಿಷ್ಠ ಮೊತ್ತ 24 ಗಂಟೆಯಲ್ಲಿ 2 ಲಕ್ಷ ರೂ. ಆಗಿದೆ. ಒಂದು ವೇಳೆ ನಿಮ್ಮ ಮೊಬೈಲ್ ಹ್ಯಾಂಡ್‌ಸೆಟ್, ಮೊಬೈಲ್ ಸಂಖ್ಯೆ ಅಥವಾ ಯುಪಿಐ ಪಿನ್ ಅನ್ನು ನೀವು ಬದಲಾಯಿಸಿದರೆ, ನೀವು ಗರಿಷ್ಠ 5 ಸಾವಿರ ರೂ. ಮಾತ್ರ ವಹಿವಾಟು ನಡೆಸಬಹುದು. ಈ ಕಡ್ಡಾಯ ಮಿತಿ ಮೊದಲ 24 ಗಂಟೆಗಳ ಕಾಲ ಜಾರಿಯಲ್ಲಿರುತ್ತದೆ.
ವಿವಿಧ ಬ್ಯಾಂಕ್ ಖಾತೆಗಳಿಗೆ ಯುಪಿಐ ವಹಿವಾಟು ಮಿತಿ ವಿಭಿನ್ನವಾಗಿದೆ. ಪ್ರತಿ ವಹಿವಾಟು ಮತ್ತು ಪ್ರತಿದಿನದ ಯುಪಿಐ ವಹಿವಾಟು ಮಿತಿಗಳನ್ನು ಹೊಂದಿರುವ ಕೆಲವು ಬ್ಯಾಂಕುಗಳು ಇಲ್ಲಿವೆ.
ಕ್ರಮ ಸಂಖ್ಯೆ, ಬ್ಯಾಂಕ್ ಹೆಸರು, ಪ್ರತಿ ವಹಿವಾಟಿನ ಗರಿಷ್ಠ ಮಿತಿ, ಪ್ರತಿ ವಹಿವಾಟಿನ ಮಿತಿ:
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ಲಕ್ಷ ರೂ. 1 ಲಕ್ಷ ರೂ.(24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟು ಮಾಡಬಹುದು)
2) ಕೆನರಾ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
3) ಆಕ್ಸಿಸ್ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
4) ಕಾರ್ಪೊರೇಶನ್ ಬ್ಯಾಂಕ್ 50 ಸಾವಿರ ರೂ. 1 ಲಕ್ಷ ರೂ.
5) ಎಚ್‌ಡಿಎಫ್‌ಸಿ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
6) ಐಸಿಐಸಿಐ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
7) ಆಂಧ್ರ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
8) ಸೆಂಟ್ರಲ್ ಬ್ಯಾಂಕ್ 20 ಸಾವಿರ ರೂ. 50 ಸಾವಿರ ರೂ.
9) ಸಿಟಿ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
10) ಬ್ಯಾಂಕ್ ಆಫ್ ಬರೋಡಾ 25 ಸಾವಿರ ರೂ. 50 ಸಾವಿರ ರೂ.
11) ಬ್ಯಾಂಕ್ ಆಫ್ ಮಹಾರಾಷ್ಟ್ರ 1 ಲಕ್ಷ ರೂ. 20 ಸಾವಿರ ರೂ.
12) ಬ್ಯಾಂಕ್ ಆಫ್ ಇಂಡಿಯಾ 10 ಸಾವಿರ ರೂ. 1 ಲಕ್ಷ ರೂ.
13) ದೇನಾ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
14) ಸಿಟಿ ಯೂನಿಯನ್ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.
ಫೋನ್ ಪೇ ಮತ್ತು ಗೂಗಲ್ ಪೇಗಳಂತೆ, ಪೇಟಿಎಂನಲ್ಲಿಯೂ ಪ್ರತಿ ವಹಿವಾಟಿನಲ್ಲಿ 1 ಲಕ್ಷ ರೂ. ವರ್ಗಾವಣೆ ಮಾಡಬಹುದಾಗಿದೆ. ಆದರೆ 24 ಗಂಟೆಗಳಲ್ಲಿ ನೀವು 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ರವಾನಿಸಲು ಸಾಧ್ಯವಿಲ್ಲ. ಗ್ರಾಹಕರಿಗೆ ಬ್ಯಾಂಕುಗಳ ನೀಡುವ ಗರಿಷ್ಠ ಸಂಖ್ಯೆಯ ವಹಿವಾಟು ನಡೆಸಿದ್ದರೆ, ಹೆಚ್ಚಿನ ಯುಪಿಐ ವಹಿವಾಟು ಮಾಡಲು ಸಾಧ್ಯವಿಲ್ಲ. ದಿನದ ಮೊದಲ ವಹಿವಾಟಿನ ನಂತರ 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ.