ಶಿಕ್ಷಕರ ಹುದ್ದೆ ಆಕಾಂಕ್ಷಿಗಳೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್: ‘KAR-TET ಪರೀಕ್ಷೆ’ಗೆ ಅರ್ಜಿ ಆಹ್ವಾನ

ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿರುವವರೇ, ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಹೌದು, 15 ಸಾವಿರ ಶಿಕ್ಷಕರ ಹುದ್ದೆಯ ನೇಮಕಾತಿಯಲ್ಲಿ (Teacher Recruitment 2022) ಆಯ್ಕೆಯಾಗದೇ ಇನ್ನೂ 3,500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಲ್ಲದೇ ಬಾಕಿ ಉಳಿಯಲಿವೆ ಎನ್ನಲಾಗುತ್ತಿದೆ. ಹಾಗಾಗಿ  ಆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಾಕಿ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದಾರೆ. 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KAR-TET 2022)ಕ್ಕೆ ಇಲಾಖೆಯ ವೆಬ್ ಸೈಟ್ www.schooleducation.kar.nic.in  ಜಾಲತಾಣದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಾಗಾಗಿ ಅರ್ಹ ಅಭ್ಯರ್ಥಿಗಳು ಟಿಇಟಿ-2022ರ ಪರೀಕ್ಷೆಗೆ ( KARTET-2022 Exam) ಆನ್ಲೈನ್ ( Online) ಮೂಲಕ ಅರ್ಜಿಯನ್ನು ದಿನಾಂಕ 01-09-2022ರಿಂದ 30-09-2022 ರವರೆಗೆ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ವಯೋಮಿತಿ ಸೇರಿದಂತೆ ವಿವಿಧ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವಂತೆ  ಪಡೆಯುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Leave A Reply

Your email address will not be published.