KGF – 2 ‘ಅಧೀರ’ ನ ಕಾರಿನ ನಂಬರ್ ದಿಢೀರ್ ಬದಲಾವಣೆ !!! ಇದರ ಹಿಂದಿದೆ ಒಂದು ಗುಟ್ಟು !

‘ ಕೆಜಿಎಫ್ – 2’ ಸಿನಿಮಾದ
ಅಧೀರನ ಪಾತ್ರದ ಮೂಲಕ ಸಿನಿ ಮನಸಿಗರ ಮನದಲ್ಲಿ ಲಗ್ಗೆ ಇಟ್ಟು,ಚಿರಪರಿಚಿತರಾಗಿರುವ ಸಂಜಯ್ ದತ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಯಾಗಿರುವ ‘ಸಂಷೇರಾ ‘ ಸಿನಿಮಾದಲ್ಲಿ ಪವರ್ ಫುಲ್ ವಿಲನ್ ಪಾತ್ರದಲ್ಲಿ ತೆರೆಯ ಮೇಲೆ ಮಿಂಚಿದ್ದಾರೆ.
5 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್ ದುಬಾರಿ ಕಾರಿನ ಒಡೆಯರಾಗಿರುವ ದತ್,ಐಷಾರಾಮಿ ಜೀವನ ಶೈಲಿಯ ಜೊತೆ ಕಾರುಗಳ ಕಲೆಕ್ಷನ್ ನ ಹವ್ಯಾಸ ಉಳ್ಳವರಾಗಿರುವ ಸಂಜಯ್ ದತ್, ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಸಂಖ್ಯಾ ಶಾಸ್ತ್ರವನ್ನು ನಂಬುವ ದತ್ ತಮ್ಮ ಎಲ್ಲ ಕಾರುಗಳಿಗೆ ” 4545 ” ಒಂದೇ ಸಂಖ್ಯೆಯಿಂದ ನೋಂದಣಿ ಮಾಡಿಸಿದ್ದಾರೆ. ಆದರೆ ಈ ಬಾರಿ 4545 ನಂಬರ್ ಬಿಟ್ಟು 2999 ಸಂಖ್ಯೆಯನ್ನು ತಮ್ಮ ಹೊಸ ಕಾರ್ ನಂಬರನ್ನು ರಿಜಿಸ್ಟರ್ ಮಾಡಿಸಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.

 

ಸಂಖ್ಯಾಶಾಸ್ತ್ರವನ್ನು ಬಲವಾಗಿ ನಂಬುವ ಸಂಜಯ್ ದತ್ ಅವರ ಆರೋಗ್ಯ ಮತ್ತು ಜೀವನದ ದೃಷ್ಟಿಯಿಂದ ಈ ಸಂಖ್ಯೆ ಒಳ್ಳೆಯದೆಂಬ ಕಾರಣಕ್ಕೆ ನಂಬರ್ ಬದಲಾಯಿಸಲಾಗಿದೆಯಂತೆ.

ಸಂಜಯ್ ದತ್ ಅವರ ಐಷಾರಾಮಿ ಕಾರಿನ ಪಟ್ಟಿ ನೋಡುತ್ತಾ ಹೋದರೆ, ಸಿನಿ ಲೋಕದ ತಾರೆಯರ ಮೆಚ್ಚಿನ ಕಾರ್ ಆಗಿರುವ “ಲ್ಯಾಂಡ್ ರೋವರ್ ರೇಂಜ್ ರೋವರ್ ” ಕಾರನ್ನು ದತ್ 2.11ಕೋಟಿ ಬೆಲೆ ತೆತ್ತು ಖರೀದಿಸಿದ್ದಾರೆ. ಇಷ್ಟೇ ಅಲ್ಲದೆ ಸಂಜಯ್ 80ಲಕ್ಷ ಬೆಲೆಬಾಳುವ ಆಡಿ- ಕ್ಯೂ – 7 ಕಾರಿನ ಮಾಲೀಕರಾಗಿದ್ದಾರೆ.
2012ರಲ್ಲಿ ಖರೀದಿಸಿರುವ ಕೆಂಪು ಬಣ್ಣದ ಫೆರಾರಿ 599 ಜಿಟಿಬಿ ಕಾರು, 3.7 ಕೋಟಿ ಮೌಲ್ಯದಾಗಿದ್ದು, ಈ ಕಾರನ್ನು ಶರ್ಮಾನ್ ಜೋಶಿ ಅಭಿನಯದ ” ಫೆರಾರಿ ಕಿ ಸವಾರಿ ” ಚಿತ್ರೀಕರಣದಲ್ಲಿ ಭರ್ಜರಿ ರೈಡ್ ಗೆ ಬಳಸಿಕೊಂಡಿರುವುದು ವಿಶೇಷ.

ಸಂಜಯ್ ದತ್ – ಮಾನ್ಯತ ದತ್ ಗ್ಯಾರೇಜ್ ನಲ್ಲಿರುವ ಮತ್ತೊಂದು ಅತಿ ದುಬಾರಿ ಕಾರ್, ಕಪ್ಪು ಬಣ್ಣದ ಆಡಿ – ಆರ್ – 8 ಆಗಿದ್ದು ಇದರ ಬೆಲೆ 2.47 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಎಲ್ಲ ಕಾರುಗಳನ್ನು 4545 ನಂಬರಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ‌‌. ಆದರೆ ಕೇವಲ ಅದರ ಇನಿಶಿಯಲ್ ಮಾತ್ರ ಇಂಗ್ಲಿಷ್ ಅಲ್ಲಿ ಬದಾಲಾಯಿಸಲಾಗಿದೆ.
ಇತ್ತೀಚೆಗೆ ಹೊಸ ಮರ್ಸಿಡೀಸ್ ಬೆಂಜ್ ಕಾರನ್ನು ಬುಕ್ ಮಾಡಿದ್ದು, ಈ ಹಿಂದಿನ ಕಾರಿನ “4545” ನಂಬರ್ ಬದಲಾಗಿ ” 2999″ ಸಂಖ್ಯೆಯಲ್ಲಿ ನೋಂದಾವಣಿ ಮಾಡಿಸಲಿದ್ದಾರೆ.

ಈ ಹೊಸ ನಿರ್ಧಾರಕ್ಕೆ ಕಾರಣ ವೇನು? ಎಂಬ ಕೌತುಕ ನಿಮ್ಮನ್ನು ಕಾಡುತ್ತಿದ್ದರೆ,ಇಲ್ಲಿದೆ ಉತ್ತರ :

ಸಂಜಯ್ ದತ್ ಹುಟ್ಟಿದ್ದು ಜೂನ್ 29ರಂದು, ಹಾಗಾಗಿ ಈ ಸಂಖ್ಯೆಯು ಅವರ ನೆಚ್ಚಿನ ಸಂಖ್ಯೆಯಾಗಿದ್ದು, ಆರೋಗ್ಯದ ಹಾಗೂ ಜೀವನದ ದೃಷ್ಟಿಯಿಂದ ಈ ಅವರಿಗೆ ಶ್ರೇಯಸ್ಕರ ಎಂಬ ಕಾರಣದಿಂದ ಮರ್ಸಿಡೀಸ್ ಕಾರ್ ನ ನಂಬರನ್ನು 2999 ಎಂದು ಬದಲಿಸುವ ಯೋಜನೆಯಲ್ಲಿದ್ದಾರೆ.
ಇಷ್ಟೇ ಅಲ್ಲದೆ ಅವರಿಗೆ 9 ಮತ್ತು 29 ತುಂಬಾ ಇಷ್ಟದ ಸಂಖ್ಯೆ ಯಾಗಿದ್ದು ತಮ್ಮ ನಾಯಕತ್ವದ ಸಿನಿಮಾ ನಿರ್ಮಾಣದ ಕೆಲಸಗಳನ್ನು 29 ಇಲ್ಲವೇ 9 ರಂದು ಶುರು ಮಾಡುವುದು ವಾಡಿಕೆ. ಅತಿ ಮುಖ್ಯ ಕಾರ್ಯ ಗಳನ್ನು ದತ್ ಅವರು ಇದೇ ತಾರೀಖಿನಂದು ಮಾತ್ರವೇ ಮಾಡುತ್ತಾರೆ.

” ಮುನ್ನಾ ಬಾಯ್ 3″, “ದಿ ಗುಡ್ ಮಹಾರಾಜ”, ” ಗುಡ್ ಚಡಿ” , ” ಬ್ಲಾಕ್ ಬಸ್ಟರ್” ಸಿನಿಮಾಗಳಲ್ಲಿ ನಟಿಸಿ ಜನಮನ ಗೆಲ್ಲುವ ತವಕದಲ್ಲಿದ್ದಾರೆ. ಈ ನಡುವೆ ತೆಲುಗು, ತಮಿಳು ಚಿತ್ರದ ಆಫರ್ ಗಳು ಕೂಡ ದತ್ ಕೈ ಸೇರಿವೆ. ಒಂದು ಕಾಲದಲ್ಲಿ ಅಶಿಸ್ತಿನ ನಡೆಯಿಂದ ಸೆರೆಮನೆ ವಾಸ ಅನುಭವಿಸಿ, ನಂತರ ಆರೋಗ್ಯ ಸಮಸ್ಯೆ ಎದುರಾಗಿ ಇದೀಗ ಆರೋಗ್ಯದಲ್ಲೂ ಚೇತರಿಕೆಗೊಂಡು ಮತ್ತೆ ಮೊದಲಿನಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

Leave A Reply

Your email address will not be published.