ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಪ್ರಧಾನಿ ಮೋದಿಗೆ ಯಾವ ಉಡುಗೊರೆ ಗೊತ್ತಾ!??
ಮಂಗಳೂರು: ನಾಳೆ ಸೆ.02ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಲ್ಲಾ ಕೆಲಸ ಕಾರ್ಯಗಳು ಬಿರುಸಿನಿಂದ ಸಾಗುತ್ತಿದೆ.
ಇಂದು ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ರಾಜ್ಯ ಪೊಲೀಸ್ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಭದ್ರತ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ್ದು,ಯಾವುದೇ ಕಾರಣಕ್ಕೂ ಮೊಬೈಲ್ ಚಿತ್ರೀಕರಣ,ಕಪ್ಪು ಬಟ್ಟೆ ಧರಿಸುವಂತಿಲ್ಲ ಎಂದು ಹೇಳಿದರು. ಅಲ್ಲದೇ ಕಾರ್ಯಕ್ರಮ ವೇದಿಕೆಯಲ್ಲಿ ಸಿಸಿ ಟಿವಿ ಅಳವಡಿಸದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರ ಮೇಲೆ ಗರಂ ಆದರು.
ಅಲ್ಲದೇ ಪರಶುರಾಮ ಸೃಷ್ಟಿಯ ತುಳುನಾಡಿಗೆ ಮೋದಿ ಆಗಮನಕ್ಕೆ ಯಕ್ಷಗಾನ ಶೈಲಿ ಸಹಿತ ಇನ್ನಿತರ ಶುಭಕೋರುವ ಆಡಿಯೋ ಸಾಂಗ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಕಾರ್ಯಕರ್ತರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ತುಳುನಾಡಿಗೆ ಮೋದಿ ಆಗಮನದ ಹಿನ್ನೆಲೆಯಲ್ಲಿ ಉಡುಗೊರೆಯಾಗಿ ಪರಶುರಾಮ ಪುತ್ಥಳಿ ನೀಡಲು ಕಾರ್ಯಕ್ರಮ ಆಯೋಜಕರು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಮೂಲದ ಶಿಲ್ಪಿಯೊಬ್ಬರ ಕೈಚಳಕದಿಂದ ಸುಂದರವಾದ ಪರಶುರಾಮ ಪುತ್ಥಳಿಯೊಂದು ತಯಾರಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮ ನಡೆಯುವ ಸ್ಥಳದ ಸಹಿತ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ ಎಸ್ಕಾರ್ಟ್ ವಾಹನಗಳು ರಸ್ತೆಯಲ್ಲಿ ಅತ್ತಿಂದಿತ್ತಾ ಓಡಾಡುತ್ತಿವೆ. ಅಲ್ಲದೇ ವಾಹನ ಸಂಚಾರದಲ್ಲೂ ವ್ಯತ್ಯಯವಿರಲಿದ್ದು, ಬದಲಿ ರಸ್ತೆಗಳ ಮಾಹಿತಿ ಈಗಾಗಳೇ ಎಲ್ಲಾ ಕಡೆಗಳಿಗೂ ಹಂಚಿಕೆಯಾಗಿದೆ.