Earthquake : ರಾಜ್ಯದಲ್ಲಿ ಈ ಜಿಲ್ಲೆಯಲ್ಲಿ ಇಂದು ಮತ್ತೆ ಲಘು ಭೂಕಂಪನ | ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನ

ರಾಜ್ಯದಲ್ಲಿ ಭೂಕಂಪನ ಅಲ್ಲಲ್ಲಿ ನಡೆಯುತ್ತಿರುವುದು ಈಗ ಮತ್ತೂ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭೂಕಂಪನ ( Earthquake) ಆಗ್ತಾ ಇದ್ದು, ಇತ್ತೀಚೆಗೆ ಸ್ವಲ್ಪ ಕಮ್ಮಿ ಆಗಿದೆ. ಆದರೆ ರಾಜ್ಯದ ಹಲವು ಕಡೆಗಳಲ್ಲಿ ಇದು ಮುಂದುವರಿದಿದೆ. ನಿನ್ನೆ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಕಂಪನ ಉಂಟಾಗಿದೆ. ಭಾರೀ ಶಬ್ದದೊಂದಿಗೆ ಭೂಮಿ ಕಂಪಸಿದ್ದರಿಂದ ಜನ ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ.

 

ಚಿಂಚೋಳಿ ತಾಲೂಕಿನ ಗಡಿಕೇಶ್ವರ ಸಮೀಪದ ಹಲವು ಗ್ರಾಮಗಳಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಭಾರೀ ಶಬ್ದದೊಂದಿಗೆ ಲಘು ಭೂಕಂಪನವಾಗಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಲಘು ಭೂಕಂಪನದ ಅನುಭವವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಾತ್ರಿಯೆಲ್ಲ ಮನೆಯಿಂದ ಹೊರಗಡೆ ಕಳೆದಿದ್ದಾರೆ.

ವಿಜಯಪುರ ತಾಲೂಕಿನ ಹೊನ್ನುಟಗಿ ಹಾಗೂ ಸುತ್ತಮುತ್ತಲೂ ಭೂಂಕಪನ ದೃಢವಾಗಿದ್ದು,
ಆಗಸ್ಟ್ 26 ರಂದು ಭೂಕಂಪನ (Earthquake) ಆಗಿತ್ತು. ಆದರೆ ನಿನ್ನೆ ರಾತ್ರಿ 8.51 ಸುಮಾರಿಗೆ ಮತ್ತು ಮಧ್ಯರಾತ್ರಿ 2.18ಕ್ಕೆ ಭೂಮಿ ಕಂಪಿಸಿದ್ದು, 3.9 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಸಾಯಂಕಾಲ ಹಾಗೂ ರಾತ್ರಿ ಭೂಮಿ ಕಂಪಸಿದ್ದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇಷ್ಟರ ಬಳಿಕ ನಸುಕಿನ ಜಾವ 2-21ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಷ್ಟೇ ಅಲ್ಲದೆ ಇಂದು ಮುಂಜಾನೆ 6.58ಕ್ಕೆ ಮತ್ತೇ ಭೂಕಂಪನದ ಅನುಭವವಾಗಿದೆ. ಈ ಕಂಪನಗಳ ಕುರಿತು ಇನ್ನೂ ಮಾಹಿತಿ ತಿಳಿದಿಲ್ಲ. ಎಷ್ಟು ಪ್ರಮಾಣದಲ್ಲಿ ಕಂಪನವಾಗಿದೆ ಎಂದು ಕರಾನೈವಿನಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.

ಮೇಲಿಂದ ಮೇಲೆ ಭೂಕಂಪನ ಉಂಟಾಗುತ್ತಿದ್ದು, ಈ ಕುರಿತು ಇಂದು ತಜ್ಞ ವಿಜ್ಞಾನಿಗಳು ಜಿಲ್ಲೆಗೆ ಆಗಮಿಸಿ ಪರೀಕ್ಷೆ ನಡೆಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಆಧ್ಯಯನ ಮಾಡಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಲಿದೆ.

ವಿಜಯಪುರ ನಗರ ಬಸವನಬಾಗೇವಾಡಿ, ಸಿಂದಗಿ, ಇಂಡಿ, ನೆರೆಯ ಬಾಗಲಕೋಟೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ. ಮೇಲಿಂದ ಮೇಲೆ ಸರಣಿ ರೂಪದಲ್ಲಿ ಭೂಕಂಪನ ಕಾಡುತ್ತಿದ್ದು, ಇಂದು ಭೂಕಂಪನ ಕುರಿತು ತಜ್ಞ ವಿಜ್ಞಾನಿಗಳು ಪರೀಕ್ಷೆ ನಡೆಸಲಿದ್ದಾರೆ.

Leave A Reply

Your email address will not be published.