ಪ್ರಕೃತಿ ವಿಕೋಪಗಳು ಕಾರ್ತಿಕ ಮಾಸದಲ್ಲಿ ಹೆಚ್ಚಾಗಲಿವೆ: ಕೋಡಿಹಳ್ಳಿ ಶ್ರೀ ಭವಿಷ್ಯ

ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀಗಳು ಕಾರ್ತಿಕ ಮಾಸದಲ್ಲಿ ಪ್ರಕೃತಿ ವಿಕೋಪ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರು ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.
ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ತಾಂಡಾದ ಐಯ್ಯನವರ ಕೆರೆಗೆ ಬಾಗಿನ ಅರ್ಪಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.
ಹಿರಿಯರು ಕಟ್ಟಿಸಿರುವ ಅಯ್ಯನಕೆರೆ ಮಳೆಯಿಂದಾಗಿ ತುಂಬಿರುವುದು ಹರ್ಷ ತಂದಿದೆ. ಮಳೆ ಹೆಚ್ಚಾಗಿರುವುದರಿಂದ ಬಹಳ ವರ್ಷಗಳ ಬಳಿಕ ಈ ಕೆರೆ ತುಂಬಿರುವುದು ಸಂತೋಷ ತಂದಿದೆ. ಇದು ಈ ಭಾಗದ ಜನರಿಗೆ ಅನುಕೂಲವಾಗುತ್ತೆ. ಮುಂದಿನ ದಿನಗಳಲ್ಲಿ ನೀರಿನಿಂದ ಅನಾಹುತವಾಗಲಿದೆ ಎಂಬ ಮಾತನ್ನು ಹೇಳಿದ್ದಾರೆ.
ಕಾರ್ತಿಕ ಮಾಸದಲ್ಲಿ ಅವಘಡ ಹೆಚ್ಚು: ಕಾರ್ತಿಕ ಮಾಸದಲ್ಲಿ ನೀರಿನಿಂದ ಜಲಗಂಡಾಂತರವಿದೆ. ಭೂಮಿ ನಡುಗುತ್ತೆ. ಬೆಂಕಿ ಅನಾಹುತಗಳು ಹೆಚ್ಚಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಜನರು ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಹೆಚ್ಚು ಹೆಚ್ಚು ಪೂಜೆ ನಡೆಸುವುದರಿಂದ ಅನಾಹುತಗಳನ್ನು ತಪ್ಪಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ ಸ್ವಾಮೀಜಿಗಳು.
What’s up, after reading this remarkable piece of writing i am too
delighted to share my knowledge here with friends.