ದಕ್ಷ ಪೊಲೀಸ್ ಅಧಿಕಾರಿಯಾಗುವ ಯುವತಿಯ ಕನಸು ಭಸ್ಮ!! ಮುಸ್ಲಿಂ ಯುವಕನ ರಾಕ್ಷಸ ಕೃತ್ಯಕ್ಕೆ ಸಾವು ಬದುಕಿನ ಹೋರಾಟ ನಡೆಸಿದ್ದ ಅಂಕಿತಾ ಇನ್ನಿಲ್ಲ!!

ದಕ್ಷ ಪೊಲೀಸ್ ಅಧಿಕಾರಿಯಾಗಿ ಅಕ್ರಮ ಗಳ ಸಹಿತ ಪ್ರಕರಣಗಳ ಮಟ್ಟ ಹಾಕಬೇಕೆಂದು ಕನಸು ಹೊತ್ತಿದ್ದ ಯುವತಿಯೊಬ್ಬಳು ಭಗ್ನ ಪ್ರೇಮಿ ಮುಸ್ಲಿಂ ಯುವಕನೊಬ್ಬನ ಕ್ರೂರ ವರ್ತನೆಗೆ ಕೊಲೆಯಾಗಿ ಹೋದ ಘಟನೆಯೊಂದು ಜಾರ್ಖಂಡ್ ನ ಧುಮ್ಕಾ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ಬಳಿಕ ಸಾವಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಲೇ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ಮುಟ್ಟಿದೆ.

ಮೃತ ಯುವತಿಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಂಕಿತ(19) ಎಂದು ಗುರುತಿಸಲಾಗಿದೆ. ಪ್ರೀತಿಸುವಂತೆ ಆಕೆಯನ್ನು ಕಾಡಿದ್ದ ಮುಸ್ಲಿಂ ಯುವಕನೊಬ್ಬ, ಆಕೆ ಮಲಗಿದ್ದ ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಘಟನೆ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಘಟನೆ ವಿವರ: ಮೃತ ಯುವತಿ ಅಂಕಿತಾಳನ್ನು ಮುಸ್ಲಿಂ ಯುವಕನೊಬ್ಬ ಪ್ರೀತಿಸುವಂತೆ ಪೀಡಿಸಿದ್ದ ಎನ್ನಲಾಗಿದೆ.ಆದರೆ ಆತನ ಪ್ರೀತಿಯನ್ನು ಆಕೆ ಧಿಕ್ಕರಿಸಿದ್ದಳು. ಇದರಿಂದ ಆತ ಕೋಪಗೊಂಡಿದ್ದು, ನನಗೆ ಸಿಗದಾಕೆ ಯಾರಿಗೂ ಸಿಗಬಾರದು ಎಂದು ಆಕೆ ಮನೆಯಲ್ಲಿ ಮಲಗಿದ್ದ ವೇಳೆ ಕೋಣೆಯ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಕೂಡಲೇ ಮನೆಯವರು ಆಗಮಿಸಿ ಬೆಂಕಿ ನಂದಿಸದರಾದರೂ ಅದಾಗಲೇ ಆಕೆಯ ದೇಹ ಅರ್ಧ ಸುಟ್ಟುಹೋಗಿತ್ತು. ಬಳಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವು ಬದುಕಿನ ಹೋರಾಟ ನಡೆಸಿದ ಆಕೆ ಆಗಸ್ಟ್ 28ರಂದು ಇಹಲೋಕ ತ್ಯಜಿಸಿದ್ದಳು.

ಮುಸ್ಲಿಂ ಯುವಕನಿಂದ ಆದ ಹಿಂದೂ ಯುವತಿಯ ಸಾವಿನ ಬಗ್ಗೆ ಎಲ್ಲೆಡೆ ಸುದ್ದಿಯಾಗಿದ್ದು,ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿತ್ತು. ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದು, ಪ್ರತಿಭಟನೆಯ ಬಿಸಿ ರಾಜ್ಯ ಸರ್ಕಾರಕ್ಕೆ ಮುಟ್ಟುತ್ತಿದ್ದಂತೆ ಮುಖ್ಯಮಂತ್ರಿ ಮೃತಳ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿ, ಶೀಘ್ರ ತನಿಖೆಗೆ ಆದ್ದೇಶಿಸಿದ್ದರು.

ತನ್ನ ಪಾಡಿಗೆ ತಾನು ಓದಿನ ಜೊತೆಗೆ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದ ಯುವತಿಯ ಸಾವಿಗೆ ಇಡೀ ಗ್ರಾಮವೇ ಮರುಗಿದ್ದು, ಕೃತ್ಯಕ್ಕೆ ಸಹಕರಿಸಿದ್ದಾನೆ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ಹಿಂಪಡೆಯಲಾಗಿದೆ. ಸದ್ಯ ಯುವತಿಯ ಸಾವಿಗೆ ನ್ಯಾಯ ಸಿಗಬೇಕಾಗಿದ್ದು,ಕೃತ್ಯ ಎಸಗಿದ ಆರೋಪಿ ಶಾರುಖ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.