ಹೋಟೆಲ್ ಉದ್ಯಮದಲ್ಲಿ ಕೈ ಸುಟ್ಟುಕೊಂಡ ಚಂದನ್!! ; ಹೀಗೂ ಆಗುತ್ತೆ ಅಂತ ಅಂದು ಕೊಂಡಿರಲಿಲ್ಲ ಇವರು!!
ನಟ ಚಂದನ್ ಕುಮಾರ್ ಕಿರುತೆರೆಯ ಮೂಲಕ ಜನರಿಗೆ ಪರಿಚಯವಾದರು. ಅದಾದ ನಂತರ ಚಂದನ್ ಕುಮಾರ್ ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಬಹಳ ಫೇಮಸ್ ಆದರೂ ಎಂದು ಹೇಳಿದರು ತಪ್ಪಾಗಲಾರದು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಚಂದನ್ ಕುಮಾರ್ ಅದರಲ್ಲಿಯೇ ನಟಿಸುತ್ತಿದ್ದ ಲಕ್ಷ್ಮಿಯನ್ನು ( ಕವಿತಾ ) ಮದುವೆಯಾದರು. ಅವರು ತದನಂತರದಲ್ಲಿ ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಬಹಳ ಬ್ಯುಸಿ ಆದರು.
ನಟ ಚಂದನ್ ಕುಮಾರ್ ಅವರು ತೆಲುಗು ಧಾರಾವಾಹಿಗಳಲ್ಲಿ ನಟನೆಯನ್ನ ಮಾಡಲು ಆರಂಭ ಮಾಡಿದರು. ಕಳೆದ ತಿಂಗಳು ತೆಲುಗು ಧಾರಾವಾಹಿಯಲ್ಲಿ ನಟನೆಯನ್ನ ಮಾಡುತ್ತಿದ್ದ ಸಮಯದಲ್ಲಿ ಶೂಟಿಂಗ್ ಸೆಟ್ ನಲ್ಲಿ ಗಲಾಟೆ ಆದಕಾರಣ ನಟ ಚಂದನ್ ಕುಮಾರ್ ಅವರಿಗೆ ಕಪಾಳಮೋಕ್ಷ ಕೂಡ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ಇದರ ಬಗ್ಗೆ ವಿಷಯಗಳು ಹರಿದಾಡಿರುವುದನ್ನು ನೀವು ಕಂಡಿರುತ್ತೀರಿ.
ಇದಾದ ನಂತರ ಈ ಗಲಾಟೆ ಹಲವು ತಿರುವುಗಳನ್ನ ಪಡೆದುಕೊಂಡ ನಂತರ ನಟ ಚಂದನ್ ಕುಮಾರ್ ಅವರನ್ನ ತೆಲುಗು ಕಿರುತೆರೆಯಿಂದ ಬ್ಯಾನ್ ಮಾಡಲಾಯಿತು. ನಟ ಚಂದನ್ ಕುಮಾರ್ ಮತ್ತು ಪತ್ನಿ ಕವಿತಾ ಗೌಡ ಅವರಿಗೆ ಇನ್ನೊಂದು ದೊಡ್ಡ ಆಘಾತ ಎದುರಾಗಿದೆ ಎಂದು ಹೇಳಬಹುದು.
ಚಿತ್ರಗಳಲ್ಲಿ ನಟನಾಗಿ ಮಿಂಚುವುದರ ಜೊತೆಗೆ ನಟ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅವರು ಹೋಟೆಲ್ ಉದ್ಯಮವನ್ನ ಕೂಡ ಮಾಡುತ್ತಿದ್ದರು. ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಜೊತೆಗೆ ಬೆಂಗಳೂರಿನಲ್ಲಿ ಬಿರಿಯಾನಿ ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದ ನಟ ಚಂದನ್ ಕುಮಾರ್ ಅವರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ.
ಕಳೆದ ವಾರ ಚಂದನ್ ಕುಮಾರ್ ಇವರ ಹೋಟೆಲ್ ನಲ್ಲಿ ಕಳ್ಳತನ ಮಾಡಲಾಗಿದ್ದು ಸದ್ಯ ನಟ ಚಂದನ್ ಕುಮಾರ್ ಅವರಿಗೆ ದೊಡ್ಡ ಲಾಸ್ ಆಗಿದೆ ಎಂದು ಹೇಳಲಾಗುತ್ತಿದೆ. ಮೊನ್ನೆ ರಾತ್ರಿ ನಟ ಚಂದನ್ ಕುಮಾರ್ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬರಿ ಚಂದನ್ ಕುಮಾರ್ ಅವರ ಹೋಟೆಲ್ ಮಾತ್ರವಲ್ಲದೆ ಅಕ್ಕಪಕ್ಕದ ಅಂಗಡಿಯಲ್ಲಿ ಕೂಡ ಕಳ್ಳರು ಕಳ್ಳತನವನ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳತನ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ಕಳ್ಳರಿಗಾಗಿ ಹುಡುಕಾಟ ಮಾಡಲು ಆರಂಭ ಮಾಡಿದ್ದಾರೆ.
ಈ ಹಿಂದೆ ಚಿತ್ರರಂಗದಲ್ಲಿ ಆದಂತಹ ಅವಮಾನಗಳನ್ನು ಎದುರಿಸಿದ ಚಂದನವರು ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದರು. ಏಟಿನ ಮೇಲೇಟು ಎಂಬಂತೆ ನಟ ಚಂದನ್ ಕುಮಾರ್ ಅವರ ಹೋಟೆಲ್ ಗೂ ಕನ್ನ ಬಿದ್ದಂತಾಯಿತು. ಅವರ ಬಿರಿಯಾಗಿ ಹೋಟೆಲ್ ಗೆ ಚಿತ್ರರಂಗದ ಹಲವು ನಟ ನಟಿಯರು ಕೂಡ ಬಂದು ಬಿರಿಯಾನಿ ಸೇವಿಸಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದರು. ಸದ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಾಗಿದ್ದು ಪೊಲೀಸರು ಕಳ್ಳರಿಗಾಗಿ ಶೋಧ ಮಾಡುತ್ತಿದ್ದಾರೆ. ಕಾದು ನೋಡಬೇಕಾಗಿದೆ.