ಸುಳ್ಯ:ಕಾಲೇಜೊಂದರ ಹಿಂದೂ ವಿದ್ಯಾರ್ಥಿನಿ ಮತ್ತು ಮುಸ್ಲಿಂ ಹುಡುಗನ ಮಧ್ಯೆ ದ್ವಿತೀಯ ದರ್ಜೆ ನಡವಳಿಕೆ!!

ಸುಳ್ಯ: ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿನಿ ಮತ್ತು ಅನ್ಯಕೋಮಿಗೆ ಸೇರಿದ ವಿದ್ಯಾರ್ಥಿಯ ಪ್ರೀತಿಯ ವಿಚಾರವೊಂದು ಬೀದಿಗೆ ಬಂದಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಜೋಡಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ಸುಳ್ಯದಲ್ಲಿ ನಡೆದಿದೆ.

 

ಸುಳ್ಯದ ಹೆಸರಾಂತ ಕಾಲೇಜಿಗೆ ಸೇರಿದ ಭಿನ್ನ ಕೋಮಿನ ವಿದ್ಯಾರ್ಥಿಗಳ ಪ್ರೀತಿ-ಪ್ರೇಮದ ವಿಚಾರ ಕಳೆದ ಕೆಲ ದಿನಗಳಿಂದ ಎಲ್ಲೆಡೆ ಸುದ್ದಿಯಾಗಿತ್ತು. ಈ ವಿಚಾರ ನೆಟ್ಟಿಗರ ನೆತ್ತಿಗೇರಿದ್ದು, ಇಬ್ಬರೂ ಜೊತೆಯಾಗಿ ಸಿಗುವ ಕ್ಷಣ ಕಾಯುತ್ತಿದ್ದರು ಎನ್ನಲಾಗಿದೆ.

ಅದರಂತೆ ಮಂಗಳವಾರ ಜೋಡಿಯು ಲವ್ವಿ-ಡವ್ವಿಯಲ್ಲಿ ತೊಡಗಿದ್ದಾಗ ರೆಡ್ ಹಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪ್ರಶ್ನಿಸಿದಾಗ ಯುವತಿಯು ವಿರೋಧಿಸಿ ಮಾತನಾಡಿದ್ದಳು ಎನ್ನಲಾಗಿದೆ. “ನಾನು ಏನು ಬೇಕಾದರೂ ಮಾಡುತ್ತೇನೆ. ನೀವು ನನಗೆ ಊಟ ಕೊಟ್ಟು ಸಾಕಿದ್ದಿರಾ ? ನಾನು ಪ್ರೀತಿ ಮಾಡುತ್ತಿದ್ದೇನೆ ” ಎಂದು ಪ್ರತ್ಯುತ್ತರ ಕೊಟ್ಟಿದ್ದಾಳೆ. ಇದರಿಂದ ಕೆರಳಿದ ಸ್ಥಳೀಯರು, ” ನಿನ್ನ ಅಪ್ಪ ಅಮ್ಮ ಮನೇಲಿ ನಿನಗೆ ಊಟ ಹಾಕಿಲ್ಲವೆ, ಅವರಿಗೆ ಹೇಳಿ ಅವರ ಪರ್ಮಿಷನ್ ಪಡೆದು ಇಂಥ ಕೆಲ್ಸ ಮಾಡಲು ಬಂದಿದ್ದೀಯಾ” ಎಂದಿದ್ದಾರೆ. ಇನ್ನಷ್ಟು ಸಂಭಾಷಣೆ ಬುದ್ಧಿವಾದ ಸ್ಥಳೀಯರಿಂದ ನಡೆದಿದೆ. ಹುಡುಗಿ ಸ್ಥಳೀಯರಿಗೆ ಜೋರು ಮಾಡಿದ್ದಾಳೆ. ಈ ಎಲ್ಲಾ ಸಂಭಾಷಣೆ ನಡೆಯುತ್ತಿರುವ ಸಂದರ್ಭ ಯುವಕ ಸ್ಮೈಲ್ ಮಾಡುತ್ತಾ ಇದ್ದನಂತೆ. ಆಗ ಯುವತಿಯ ಎದುರಲ್ಲಿಯೇ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಯುವಕನ ಬೆನ್ನಿನಲ್ಲಿ ರಕ್ತ ಹೆಪ್ಪುಗಟ್ಟಿದ ಫೋಟೋ ಸಹಿತ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೇಸರಿ ಭದ್ರಕೋಟೆ ಸುಳ್ಯದಲ್ಲೂ ಕಾಲೇಜು ವಿದ್ಯಾರ್ಥಿಗಳ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಅದಲ್ಲದೇ ಸುಳ್ಯ ತಾಲೂಕು ಗಣೇಶೋತ್ಸವದ ಸಂಭ್ರಮಕ್ಕೆ ಅಣಿಯಾಗುತ್ತಿದ್ದೂ, ಘಟನೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಂಭವವೂ ಹೆಚ್ಚಿದೆ. ಸುಳ್ಯದ ಬಗಲಲ್ಲೆ ಇರುವ ಬೆಳ್ಳಾರೆ ಪ್ರವೀನ್ ನೆಟ್ಟಾರ್ ಘಟನೆ ಜನರ ಮನಸ್ಸಿನಿಂದ ಮಾಸುತ್ತ ಬಂದು ಜನ ಜೀವನ ಮಾಮೂಲಿ ಸ್ಥಿತಿಗೆ ಬಂದಾಗ, ಈಗ ಲವ್ ಜಿಹಾದ್ ನಂತಹ ಸೂಕ್ಷ್ಮ ವಿಚಾರ ಮತ್ತೆ ಆ ಪ್ರದೇಶದಲ್ಲಿ ತಲೆಯೆತ್ತಿದೆ. ಇದರಿಂದಾಗಿ ಚೌತಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ ಎನ್ನುವ ಮಾತುಗಳು ಸುಳ್ಯದ ನಾಗರಿಕರು ಹೇಳುತ್ತಿದ್ದಾರೆ.

Leave A Reply

Your email address will not be published.