ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನಿಗೆ ವಿಚಿತ್ರ ಶಿಕ್ಷೆ ನೀಡಿದ ಅಂಗನವಾಡಿ ಶಿಕ್ಷಕಿ | ಕ್ರೂರತೆಯ ಪರಮಾವಧಿ

Share the Article

ಮಕ್ಕಳು ಎಂದರೆ ಮಕ್ಕಳೇ. ಅವುಗಳಿಗೆ ಏನೂ ಗೊತ್ತಾಗಲ್ಲ. ಹಾಗೆನೇ ಅವುಗಳನ್ನು ನೋಡ್ಕೋಳ್ಳೋರು ಕೂಡಾ ಅಷ್ಟೇ ತಾಳ್ಮೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಅದು ಶಾಲೆಯಲ್ಲಾಗಲಿ ಅಥವಾ ಹೊರಗಡೆಯಲ್ಲಾಗಲಿ ಇನ್ನೂ ಹೆಚ್ಚಾಗಿ ಮನೆಯಲ್ಲೇ ಆಗಿರಬಹುದು. ಆದರೆ ಇಲ್ಲೊಂದು ಶಾಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಈ ವಿಚಿತ್ರ ಘಟನೆ ನಡೆದಿರುವುದು ಚಿಕ್ಕನಾಯಕನಹಳ್ಳಿ (ತುಮಕೂರು) ಯಲ್ಲಿ.

ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ತಾಲ್ಲೂಕಿನ ಮೂರು ವರ್ಷದ ವಿದ್ಯಾರ್ಥಿಯನ್ನು ಗದರಿಸಲು ಅಂಗನವಾಡಿ ಕೇಂದ್ರದ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗವನ್ನು ಬೆಂಕಿಕಡ್ಡಿಯಿಂದ ಸುಟ್ಟಿದ್ದಾರೆ. ಇದರಿಂದ ಆತನ ಗುಪ್ತಾಂಗ ಮತ್ತು ತೊಡೆಯ ಬಳಿ ಸುಟ್ಟ ಗಾಯಗಳಾಗಿವೆ.

ಇತ್ತೀಚೆಗೆ ನಡೆದ ಈ ಘಟನೆ ಗೊತ್ತಾಗುತ್ತಲೇ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ಧಾವಿಸಿ ಮಕ್ಕಳು, ಶಿಕ್ಷಕಿ, ಸಹಾಯಕಿ ಮತ್ತು ಬಾಲಕನ ಪೋಷಕರ ಹೇಳಿಕೆ ಪಡೆದಿದ್ದಾರೆ. ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಅಧಿಕಾರಿ ನೋಟಿಸ್ ನೀಡಿ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave A Reply