VI : ವೊಡಾಪೋನ್ ಐಡಿಯಾದ 2 ಕೋಟಿ ಗ್ರಾಹಕರ ದತ್ತಾಂಶ ಸೋರಿಕೆ

ಟೆಲಿಕಾಂ ಆಪರೇಟರ್ ವೋಡಾಪೋನ್ ಐಡಿಯಾ ವ್ಯವಸ್ಥೆಯಲ್ಲಿರುವ ದೋಷಗಳಿಂದಾಗಿ ಸುಮಾರು 2 ಕೋಟಿ ಪೋಸ್ಟ್ ಪೇಯ್ಡ್ ಗ್ರಾಹಕರ ಕಾಲ್ ಡೇಟಾ ದಾಖಲೆಗಳು ಸೋರಿಕೆಯಾಗಿರೋದಾಗಿ ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆ ಸೈಬರ್ ಎಕ್ಸ್ 9 ವರದಿಯಲ್ಲಿ ತಿಳಿಸಿದೆ.

 

ವೊಡಾಪೋನ್ ಐಡಿಯಾ ಗ್ರಾಹಕರಿಗೆ ಕಂಪನಿಯ ದೋಷದಿಂದಾಗಿ ಕರೆ ಮಾಡಲಾದಂತ ವಿವರ, ಕರೆಯ ಕಾಲಾವಧಿ, ಲೋಕೇಷನ್, ಗ್ರಾಹಕರ ಹೆಸರು, ವಿಳಾಸ, ಎಸ್ಎಂಎಸ್ ದಾಖಲೆಗಳು ಸೇರಿದಂತೆ ಹಲವು ದತ್ತಾಂಶ ಸೋರಿಕೆಯಾಗಿರೋದಾಗಿ ವರದಿಯಲ್ಲಿ ತಿಳಿಸಿದೆ.

ಆದಾಗ್ಯೂ ಈ ಬಗ್ಗೆ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ವೊಡಾಫೋನ್ ಐಡಿಯಾ ಹೇಳಿದೆ.

Leave A Reply

Your email address will not be published.