ಅತೀ ಸಣ್ಣ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣಲು ಕಾರಣವೇನು? ಈ ರೀತಿಯಾಗಿ ಕಾಳಜಿ ವಹಿಸಿ

ಈ ವಯಸ್ಸು, ಪ್ರಾಯ ಇದು ಮರೆಮಾಚುವಂತದ್ದಲ್ಲ. ಮನುಷ್ಯ ದೊಡ್ಡವನಾಗುತ್ತಾ ಹೋದ ಹಾಗೇ, ವಯಸ್ಸು ಆಗ್ತಾ ಹೋಗುತ್ತೆ. ಹಾಗೆನೇ, ಕೆಲವರು ಸಣ್ಣ ವಯಸ್ಸಿನವರಾದರೂ ವಯಸ್ಸಾದವರಾದಾಗೆ ಕಾಣುತ್ತಾರೆ. ಯಾಕೆ ಈ ರೀತಿ? ಇದಕ್ಕೆ ಮೂಲ ಕಾರಣವೇನು? ಮೇಲ್ನೋಟಕ್ಕೆ ಇದೊಂದು
ಆಹಾರ ಕ್ರಮ ಹಾಗೂ ಸೌಂದರ್ಯದ ಬಗ್ಗೆ ಕಾಳಜಿ ವಹಿಸದಿರುವುದು ಕಾರಣವಾಗಿದೆ. ಚಿಕ್ಕವಯಸ್ಸಿನಲ್ಲಿ ಮುದುಕರಾದಂತೆ ಕಾಣದಿರಲು ಆಹಾರ ಕ್ರಮ ಹಾಗೂ ಸೌಂದರ್ಯದ ಕಾಳಜಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಅವಶ್ಯಕ ಎಂದು ತಜ್ಞರು ಸಲಹೆ ನೀಡುತ್ತಾರೆ. ಇನ್ನೂ ಕೆಲವರು ವಯಸ್ಸಾಗಿದ್ದರೂ ವಯಸ್ಸಾದಂತೆ ಕಾಣಿಸುವುದಿಲ್ಲ. ಎರಡನೇ ವಿಭಾಗಕ್ಕೆ ಸೇರಿದವರು ತಮ್ಮ ಕಾಂತಿಯುತವಾದ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

ಆದರೆ 20 ಮತ್ತು 30ರ ಹರೆಯದ ಜನರು ಕೆಲವೊಮ್ಮೆ ವಯಸ್ಸಾದವರಂತೆ ಕಾಣಲು ಕಾರಣ ಅವರ ಮುಖ ಮತ್ತು ದೇಹದಲ್ಲಾಗುವ ಬದಲಾವಣೆ. ವಯಸ್ಸು ಹೆಚ್ಚಾದಂತೆ ಚರ್ಮದಲ್ಲಿ ಸುಕ್ಕುಗಳು ಬರುವುದು ನಾರ್ಮಲ್. ಆದರೆ ಕೆಲವರಿಗೆ ಇದು ಚಿಕ್ಕ ವಯಸ್ಸು, ಅಂದರೆ ಸಾಮಾನ್ಯವಾಗಿ 20ರ ಹರೆಯದವರು 50 ದಾಟಿದವರಂತೆ ಕಾಣುತ್ತಾರೆ. ಈ ರೀತಿಯಾಗಿ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ.

ಯಾರೇ ಆಗಲಿ, ನೀವು ಚರ್ಮದ ಆರೈಕೆಯ ಬಗ್ಗೆ ಅಸಡ್ಡೆ ಹೊಂದಿದ್ದರೆ ಅಕಾಲಿಕ ವಯಸ್ಸಾದ ಚಿಹ್ನೆಗಳು ಮುಖದ ಮೇಲೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿಯೇ ತ್ವಚೆಯ ಆರೈಕೆಯ ಜೊತೆಗೆ ಇತರ ಕೆಲವು ಅಭ್ಯಾಸಗಳನ್ನು ಬದಲಾಯಿಸುವುದು ಬಹಳ ಮುಖ್ಯ. ನಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಧೂಮಪಾನವು ಚರ್ಮಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ಇದು ಚರ್ಮದ ಅಂಗಾಂಶವನ್ನು ನಾಶಪಡಿಸುತ್ತದೆ. ಅಂಗಾಂಶ ರಚನೆಯನ್ನು ನಿರ್ಬಂಧಿಸುವುದರ ಜೊತೆಗೆ ಚರ್ಮವನ್ನು ಸಡಿಲವಾಗಿಸುತ್ತದೆ. ಹೆಚ್ಚು ಕಾಲ ಯುವಕರಾಗಿರಲು ಬಯಸುವವರು ಧೂಮಪಾನವನ್ನು ತ್ಯಜಿಸಬೇಕು.

ಕೆಲಸದ ಒತ್ತಡದಿಂದಲೂ ಮುಖದಲ್ಲಿ ಅಕಾಲಿಕ ವಯಸ್ಸಾಗುವಿಕೆ ಆರಂಭವಾಗಬಹುದು. ಅದಕ್ಕಾಗಿಯೇ ಒತ್ತಡವನ್ನು ಸಾಧ್ಯವಾದಷ್ಟು ತಪ್ಪಿಸಿ ಸಂತೋಷದಿಂದ ಇರಲು ಪ್ರಯತ್ನಿಸಿ.

ಸಾಕಷ್ಟು ನೀರು ಕುಡಿಯುವುದು ಚರ್ಮದ ಮೇಲೆ ಬರುವ ಸುಕ್ಕುಗಳನ್ನು ಕಡಿಮೆ ಮಾಡಲು ಸುಲಭವಾದ, ನೈಸರ್ಗಿಕ ವಿಧಾನ. ಇದು ಚರ್ಮ ಮತ್ತು ಮುಖದಲ್ಲಿ ತೇವಾಂಶವನ್ನು ಇಡುತ್ತದೆ, ಅಕಾಲಿಕ ಸುಕ್ಕುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ದೇಹದಿಂದ ವಿಷಕಾರಿ ತ್ಯಾಜ್ಯವನ್ನು ಕೂಡ ಹೊರಹಾಕಲು ಸಹಕಾರಿಯಾಗಿದೆ.

ನಿದ್ರೆಯ ಕೊರತೆಯು ಮುಖದ ಮೇಲೆ ಬೇಗನೇ ಸುಕ್ಕು ಬರೋದಕ್ಕೆ ಕಾರಣವಾಗಬಹುದು. ನಿದ್ರೆ ಕಡಿಮೆ ಮಾಡಿದರೆ ಮುಖದ ಸ್ನಾಯುಗಳನ್ನು ಕುಗ್ಗುತ್ತದೆ‌ ಇದರಿಂದ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ನೀವು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಮಲಗಬೇಕು.

ಹೆಚ್ಚು ಸಕ್ಕರೆ ಮತ್ತು ಸಿಹಿತಿಂಡಿಗಳನ್ನು ತಿನ್ನುವುದು ಕೂಡಾ ಅಕಾಲಿಕ ಸುಕ್ಕುಗಟ್ಟುವಿಕೆಗೆ ಕಾರಣವಾಗಬಹುದು. ಹೆಚ್ಚು ಸಿಹಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಉತ್ಪಾದಿಸುವ ಚರ್ಮದ ಸಾಮರ್ಥ್ಯವನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಇದರಿಂದ ಮುಖ, ಕುತ್ತಿಗೆ ಮತ್ತು ಕೈಗಳಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅಂತಹ ತಿಂಡಿಗಳನ್ನು ಸೇವಿಸುವ ಅಭ್ಯಾಸವನ್ನು ಕಡಿಮೆ ಮಾಡಿಕೊಂಡರೆ ಉತ್ತಮ.

Leave A Reply

Your email address will not be published.