ಒಂದು ವರ್ಷದಲ್ಲಿ ಬರೋಬ್ಬರಿ 2 ಲಕ್ಷ ಜನರ ಪ್ರಾಣ ತೆಗೆಯುತ್ತದೆಯಂತೆ ಬಸವನಹುಳು!
ಬಸವನಹುಳು ಹುಳು ನೀರಿನಲ್ಲಿ ಹಾಗೂ ಭೂಮಿಯಲ್ಲಿ ವಾಸಿಸುತ್ತವೆ. ಕೆಲವು ಜೀವಿಗಳು ಗಿಡಗಳನ್ನು, ಎಲೆಗಳನ್ನು ತಿನ್ನುತ್ತವೆ. ಇನ್ನೂ ಕೆಲವು ಬಸವನ ಹುಳುಗಳು ಬೇರೆ ಜೀವಿಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ ಭೂಮಿಯ ಮೇಲೆ ಇರುವ ಬಸವನ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ ತಮ್ಮನ್ನು ತೇವವಾಗಿ ಇಟ್ಟುಕೊಳ್ಳುತ್ತವೆ. ಬಸವನ ಹುಳುಗಳಿಗೆ ಬಲವಾದ ಹಲ್ಲುಗಳಿರುತ್ತವೆ. ನೀರಿನಲ್ಲಿ ಬದುಕುವ ಬಸವನ ಹುಳುವಿನ ಹಲ್ಲು ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಗಟ್ಟಿಯಾದ ವಸ್ತುವೆಂದು ತಿಳಿದುಬಂದಿದೆ.
ಆದ್ರೆ, ಈ ಬಸವನಹುಳು ಎಷ್ಟು ಅಪಾಯಕಾರಿ ಎಂಬುದು ನಿಮಗೆ ಗೊತ್ತೇ. ಹೌದು. ಬಸವನಹುಳು ಒಂದು ವರ್ಷದಲ್ಲಿ ಬರೋಬ್ಬರಿ 2 ಲಕ್ಷ ಜನರ ಪ್ರಾಣ ತೆಗೆಯುತ್ತದೆಯಂತೆ. ಇಂತಹ ಒಂದು ಶಾಕಿಂಗ್ ಮಾಹಿತಿಯನ್ನು ಅಧ್ಯಯನವೊಂದು ತಿಳಿಸಿದೆ.
ಜಗತ್ತಿನ ಅತ್ಯಂತ ಅಪಾಯಕಾರಿ ಪ್ರಾಣಿಗಳ ಪಟ್ಟಿಯನ್ನು ಇತ್ತೀಚೆಗಷ್ಟೇ ಪ್ರಾಣಿ ತಜ್ಞರೊಬ್ಬರು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿ ಪ್ರಾಣಿಗಳಿಂದ ನಡೆದ ಹಲ್ಲೆಗಳು ಹಾಗೂ ಆ ಹಲ್ಲೆಗಳಿಂದ ಸಂಭವಿಸಿದ ಸಾವು-ನೋವುಗಳ ಅಂಕಿ ಅಂಶಗಳನ್ನು ಆಧರಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಈ ಪಟ್ಟಿಯ ಪ್ರಕಾರ ಬಸವನ ಹುಳುವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ. ನೋಡಲು ತುಂಬಾ ಚಿಕ್ಕದಾಗಿರುವ ಈ ಬಸವನ ಹುಳು, ಕೀಟ ಹುಲಿ, ಸಿಂಹ ಅಥವಾ ಯಾವುದೇ ಒಂದು ಶಾರ್ಕ್ ಗಿಂತಲೂ ಅಪಾಯಕಾರಿಯಾಗಿದೆ ಎನ್ನಲಾಗಿದೆ.
ಬಿಡುಗಡೆ ಮಾಡಲಾಗಿರುವ ಅಂಕಿ-ಅಂಶಗಳನ್ನು ನಂಬುವುದಾದರೆ, ಬಸವನ ಹುಳು ಒಂದು ವರ್ಷದಲ್ಲಿ ಸುಮಾರು 2 ಲಕ್ಷ ಜನರ ಪ್ರಾಣ ತೆಗೆಯುತ್ತದೆ ಎನ್ನಲಾಗಿದೆ. ತೆವಳಿಕೊಂಡು ಸಾಗುವ ಈ ಹುಳುವಿನ ಶರೀರದಲ್ಲಿ ಪರಾವಲಂಬಿಗಳು ಆಂಟಿಕೊಂಡಿರುತ್ತವೆ ಮತ್ತು ಅವು ಮಾನವನ ಶರೀರಕ್ಕೆ ಪ್ರವೇಶಿಸಿದರೆ, ವ್ಯಕ್ತಿ ಸಾವನ್ನಪ್ಪುತ್ತಾನೆ. ಹೀಗಾಗಿ ಕೋನದಂತೆ ಕಾಣಿಸುವ ಬಸವನ ಹುಳು ತುಂಬಾ ಅಪಾಯಕಾರಿ ಹುಳು ಎಂದು ಅಧ್ಯಯನ ತಿಳಿಸಿದೆ.