ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಮನೆ ಸಂಪೂರ್ಣ ಜಲಾವೃತ!!!

ಹೆಸರಾಂತ ನಟ, ರಾಜಕಾರಣಿ ನವರಸ ನಾಯಕ ಜಗ್ಗೇಶ್ ಅವರ ಮನೆ ನೀರಿನಿಂದ ತುಂಬಿದೆ. ನಿನ್ನೆ ಸುರಿದ ಭಾರೀ ಮಳೆಗೆ ರಾಜ್ಯಸಭೆ ಸದಸ್ಯ ನಟ ಜಗ್ಗೇಶ ಮನೆಗೆ ಮಳೆನೀರು ನುಗ್ಗಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನಲ್ಲಿ ಜಗ್ಗೇಶ್ ಹುಟ್ಟೂರಾದ ಮಾಯಸಂದ್ರ ಗ್ರಾಮದಲ್ಲಿರುವ ಮನೆಗೆ ನೀರು ನುಗ್ಗಿದೆ.

 

ಮಾಯಸಂದ್ರ ಗ್ರಾಮದ ಜಗ್ಗೇಶ್ ತೋಟದ ಮನೆ ಜಲಾವೃತಗೊಂಡಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಮನೆ ಜಲಾವೃತಗೊಂಡಿದೆ. ಮನೆಗೆ ನೀರು ನುಗ್ಗಿರುವುದರ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿ ಅಸಾಮಾಧಾನ ಹೊರ ಹಾಕಿದ್ದಾರೆ. ನೀರು ಹರಿಯುವ ಕಾಲುವೆ ಒತ್ತುವರಿ ಮಾಡಿಕೊಂಡ ಪರಿಣಾಮ ಮನೆಗೆ ನೀರು ನುಗ್ಗಿದೆ ಎಂದು ಜಗ್ಗೇಶ್ ಟ್ವಿಟ್ ಮಾಡಿದ್ದಾರೆ.

ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಚಿತ್ರ ನಟಜಗ್ಗೇಶ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲೆಹರ್ ಸಿಂಗ್ (ಮೂವರೂ ಬಿಜೆಪಿ) ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ (ಕಾಂಗ್ರೆಸ್) ಜುಲೈ 8ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜಗ್ಗೇಶ್, ಪ್ರತಿಭಾವಂತ ನಟ ಜೊತೆಗೆ ಉತ್ತಮ ರಾಜಕಾರಣಿ.

Leave A Reply

Your email address will not be published.