ಮಠದ ಸಭೆಯಲ್ಲಿನ ಮುರುಘಾ ಶ್ರೀಗಳ ಭಾಷಣದ ಆಡಿಯೋ ವೈರಲ್: ಏನ್ ಮಾತನಾಡಿದ್ದಾರೆ ಗೊತ್ತಾ?
ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ, ಮಠದಲ್ಲಿ ಹಲವು ಮುಖಂಡರ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಮುರುಘಾ ಶ್ರೀಗಳು ಮಾತನಾಡಿದಂತ ಆಡಿಯೋ ವೈರಲ್ ಆಗಿದೆ. ಅವರು ಏನ್ ಮಾತನಾಡಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.
ಇಂದು ಮುರುಘಾ ಮಠದಲ್ಲಿ ನಡೆದಂತ ಸಭೆಯಲ್ಲಿ ಡಾ.ಶಿವಮೂರ್ತಿ ಶಿವಶರಣರು ಮಾತನಾಡಿರುವಂತ ಆಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಆಡಿಯೋದಲ್ಲಿ, ಮಠದಲ್ಲಿ ಇದ್ದವರೇ ಮಾಡಿದಂತ ಷಡ್ಯಂತ್ರವಾಗಿದೆ. ಮುರುಘಾ ಮಠದ ಮೇಲಿನ ನಂಬಿಕೆಗೆ ಧಕ್ಕೆ ತರೋ ಸಲುವಾಗಿ ಇಂತಹ ಷಡ್ಯಂತ್ರ ಮಾಡಲಾಗಿದೆ ಎಂಬುದಾಗಿ ಕಿಡಿಕಾರಿದ್ದಾರೆ.
ರೋಲ್ ಕಾಲ್, ಬ್ಲಾಕ್ ಮೇಲ್ ಮೂಲಕ ಅಧಿಕಾರಕ್ಕೆ ಬರಬೇಕೆಂಬ ಧೋರಣೆ ನಡೆಯುತ್ತಿದೆ. ಇಂದು ಗರಿಷ್ಠ ಮಟ್ಟದ ಕಿರುಕುಳ ಮತ್ತು ಪಿತೂರಿಯಾಗಿದೆ. 21ನೇ ಶತಮಾನದ ಕರಾಳ ಘಟನೆ ನನ್ನ ಮೇಲೆ ದಾಖಲಾಗಿರುವಂತ ಪ್ರಕರಣವಾಗಿದೆ. ಇದು ಷಡ್ಯಂತ್ರದಿಂದಲೇ ನಡೆದಂತ ಪ್ರಕರಣ ಆಗಿದೆ ಎಂದಿದ್ದಾರೆ.
ನಾವು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧವಾಗಿದ್ದೇವೆ. ಕೆಲವರು ಸಂಧಾನ ಮಾಡುತ್ತಿದ್ದಾರೆ. ಅದು ಪೇಲಾದ್ರೆ ಸಮರ. ಸಂಧಾನ ಬೇಡವಾದಾಗ ಸಮರ ಇದ್ದೇ ಇದೆ. ಸಾಧ್ಯವಾದ್ರೇ ಸಮಸ್ಯೆ ಬಗೆಹರಿಸೋಣ, ಇಲ್ಲವೇ ಹೋರಾಡೋಣ ಎಂದಿದ್ದಾರೆ.
ಯಾವ ಸುಖವೂ ಶಾಶ್ವತವಲ್ಲ, ಸಮಸ್ಯೆಯೂ ಶಾಶ್ವತವಲ್ಲ. ನೀವೆಲ್ಲಾ ನಮ್ಮ ಜೊತೆಗೆ ಇರುವುದು ನಮಗೆ ದೊಡ್ಡ ಧೈರ್ಯವಾಗಿದೆ. ಯಾರೂ ಕೂಡ ದುಖ ಮಾಡಿಕೊಳ್ಳಬೇಡಿ. ಎಲ್ಲವನ್ನೂ ಕಾಲವೇ ನಿರ್ಣಯ ಮಾಡುತ್ತದೆ ಎಂಬುದಾಗಿ ವೈರಲ್ ಆಗಿರುವಂತ ಆಡಿಯೋದಲ್ಲಿ ಮುರುಘಾ ಶ್ರೀಗಳು ಸಭೆಯಲ್ಲಿ ಮಾತನಾಡಿದ್ದಾರೆ.