DHFWS : ಆರೋಗ್ಯ,ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ, ಹೆಚ್ಚಿನ ವಿವರ ಇಲ್ಲಿದೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ ಮತ್ತು ವಿಜಯನಗರ ಇಲ್ಲಿ ಖಾಲಿ ಇರುವ ವಿವಿಧ ಅರೆ ವೈದ್ಯಕೀಯ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಸೈಕಾಲಾಜಿಸ್ಟ್ : 03
ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ : 01
ಮೈಕ್ರೋಬಯೋಲಾಜಿಸ್ಟ್ : 06
ಅಸಿಸ್ಟಂಟ್ ಎಂಟೊಮೊಲಾಜಿಸ್ಟ್ : 01
ಫಿಸಿಯೋಥೆರಪಿಸ್ಟ್ : 05
ಡೆಂಟಲ್ ಮೆಕ್ಯಾನಿಕ್ : 03
ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ /
ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್ : 54
ಆಫ್ತಾಲ್ಮಿಕ್ ಆಫೀಸರ್ / ರಿಫ್ಯಾಕ್ಷನಿಸ್ಟ್ : 98
ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ |
ಇಸಿಜಿ ಟೆಕ್ನಿಷಿಯನ್ : 05
ಡಯಾಲಿಸಿಸ್ ಟೆಕ್ನಿಷಿಯನ್ 02
ಜೂನಿಯರ್ ಹೆಲ್ತ್ ಅಸಿಸ್ಟಂಟ್ (ಫೀಮೇಲ್) / ಪ್ರೈಮರಿ ಹೆಲ್ತ್ ಕೇರ್ ಆಫೀಸರ್: 126
ಇಲೆಕ್ಟ್ರಿಷಿಯನ್ : 01
ಇಸಿಜಿ ಟೆಕ್ನಿಷಿಯನ್ : 05
ಡಯಾಲಿಸಿಸ್ ಟೆಕ್ನಿಷಿಯನ್ 02
ಜೂನಿಯರ್ ಹೆಲ್ತ್ ಅಸಿಸ್ಟಂಟ್ (ಫೀಮೇಲ್) / ಪ್ರೈಮರಿ ಹೆಲ್ತ್ ಕೇರ್ ಆಫೀಸರ್: 126
ಇಲೆಕ್ಟ್ರಿಷಿಯನ್ : 01

ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿಸಿದ ವಿಷಯಗಳಲ್ಲಿ ಎಂಎಸ್ಸಿ / ಮೆಡಿಕಲ್ ಪದವಿ | ಎಸ್ಎಸ್ಎಲ್‌ಸಿ / ಪಿಯುಸಿ / ಡಿಪ್ಲೋಮಾ ಪಾಸ್ ಮಾಡಿರಬೇಕು.

ವೇತನ ಶ್ರೇಣಿ : ಕನಿಷ್ಠ ರೂ.23000 ದಿಂದ ರೂ.83,900 ವರೆಗೆ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29-08-2022
ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಕೊನೆ ದಿನಾಂಕ:
28-09-2022
ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಕೊನೆ ದಿನಾಂಕ :  29-09-2022
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ ರೂ.700.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 400.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.200.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 / ವಿಕಲಚೇತನ ಅಭ್ಯರ್ಥಿಗಳಿಗೆ ರೂ.100.

ವಯೋಮಿತಿ : ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.

ವರ್ಗಾವಾರು ಗರಿಷ್ಠ ವಯೋಮಿತಿ ಅರ್ಹತೆ ಕೆಳಗಿನಂತಿದೆ.
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ 35 ವರ್ಷಗಳು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 / ವಿಕಲಚೇತನ ಅಭ್ಯರ್ಥಿಗಳಿಗೆ 40 ವರ್ಷಗಳು.

ನೇಮಕಾತಿ ವಿಧಾನ: ಸದರಿ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಶೇಕಡವಾರು ಅಂಕಗಳು, ಸೇವಾ ಕೃಪಾಂಕ ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಪ್ರಕಟಿಸಲಾದ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.

ಯಾರೇ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಎಸ್ಎಸ್ಎಲ್‌ಸಿ ಅಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದದ ಅಭ್ಯರ್ಥಿಗಳು ಇಲಾಖೆ ನೇಮಕ ಪೂರ್ವದಲ್ಲಿಯೇ ನಡೆಸುವ ಕನ್ನಡ ಭಾಷೆ ಪರೀಕ್ಷೆ ಬರೆದು ಪಾಸ್ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave A Reply

Your email address will not be published.