ಕೇವಲ 17 ನೆಯ ವರ್ಷದಲ್ಲಿಯೇ 5 ಖಂಡಗಳ, 52 ದೇಶಗಳನ್ನು ಏಕಾಂಗಿಯಾಗಿ ಡ್ರೈವ್ ಮಾಡುತ್ತಾ ವಿಮಾನದಲ್ಲಿ ಸುತ್ತಿ ಬಂದ ಬಾಲಕ
ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಸಾಧಿಸುವ ತುಡಿತ, ಹಟವಿದ್ದರೆ ಸಾಧನೆಯ ಹಾದಿಯಲ್ಲಿ ಅದೆಷ್ಟೇ ಕಲ್ಲು – ಮುಳ್ಳುಗಳು ಎದುರಾದರೂ ದೃಢ ಚಿತ್ತದೊಂದಿಗೆ ನಿರಂತರ ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು .
ಸಣ್ಣ ವಯಸ್ಸಿನಲ್ಲೇ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ನಿರೂಪಿಸಿದ 17 ವರ್ಷದ ಪೈಲಟ್ ಮ್ಯಾಕ್ ರುದರ್ ರ್ಫೋರ್ಡ್ ಇತಿಹಾಸ ಸೃಷ್ಟಿಸಿ ಎಲ್ಲ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ.
ಏವಿಯೇಟರ್ ಕುಟುಂಬದಲ್ಲಿ ಜನಿಸಿದ ರುದರ್ ರ್ಫೋರ್ಡ್ 2020ರಲ್ಲಿ ಪೈಲಟ್ ಪರವಾನಗಿಗೆ ಅರ್ಹತೆ ಪಡೆದು ತಮ್ಮ 15ನೇ ವಯಸ್ಸಿನಲ್ಲೇ ವಿಶ್ವದ ಕಿರಿಯ
ಪೈಲಟ್ ಎಂಬ ಬಿರುದು ಪಡೆದವರು.
ಇವರ ಏಕಾಂಗಿ ಪಯಣ ಮಾರ್ಚ್ 23ರಂದು ಆರಂಭಗೊಂಡು 5 ಖಂಡಗಳ 52 ದೇಶಗಳಿಗೆ ಸಾಗಿತ್ತು.
3 ತಿಂಗಳೊಳಗೆ ತಮ್ಮ ಯೋಜನೆ ಮುಗಿಯು ವುದೆಂದು ಕೊಂಡಿದ್ದ ಪ್ರಯಾಣ ಮಾನ್ಸೂನ್ ಮಳೆಯ ಅಬ್ಬರ,ಬಿರುಗಾಳಿ ,ವಿಪರೀತ ಶಾಖ ಮತ್ತು ಪ್ರಾಕೃತಿಕ ಕಾರಣದ ಜೊತೆಗೆ ಇತರೆ ತೊಂದರೆಗಳಿಂದ ಪ್ರಯಾಣದ ಅವಧಿ ಸುಧಿರ್ಘವಾಗಿತ್ತು.ಈ ಪ್ರಯಾಣದಲ್ಲಿ ಯೇ ತಮ್ಮ 17ನೇ ವರ್ಷಕ್ಕೆ ಕಾಲಿಟ್ಟಿದ್ದು ವಿಶೇಷ .
ಸಣ್ಣ ವಿಮಾನದಲ್ಲಿ ಸಂಚರಿಸಿದ ರುದರ್ ಎರಡೇ ಆಸನವಿರುವ ವಿಮಾನವನ್ನು ತಮ್ಮ ಅನುಕೂಲಕ್ಕಾಗಿ ಎರಡನೇ ಆಸನದ ಬದಲಾಗಿ ಹೆಚ್ಚುವರಿ ಇಂಧನ ಟ್ಯಾಂಕನ್ನು ಬಳಸಿಕೊಂಡರು.
ಬೆಲ್ಜಿಯಂ ಮತ್ತು ಯುನೈಟೆಡ್ ಕಿಂಗ್ಡಮ್ ನ ಪ್ರಜೆಯಾಗಿ ತಮ್ಮ ಸಾಧನೆಯ ಬಳಿಕ ಪ್ರತಿಕ್ರಿಯೆ ನೀಡಿದಾಗ ” ನಿಮ್ಮ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ಎಷ್ಟೇ ವಯಸ್ಸಾಗಿದ್ದರೂ, ಕಷ್ಟಪಟ್ಟು ಕೆಲಸ ಮಾಡಿ .ನಿಮ್ಮ ಗುರಿ ಮುಟ್ಟುವವರೆಗೂ ಮುಂದುವರೆಯಿರಿ ” ಎಂಬ ಕಿವಿಮಾತು ಹೇಳಿದರು.
ಇವರ ಸಹೋದರಿ ಜರಾ ಕೂಡ ತಮ್ಮ 19ನೇ ವಯಸ್ಸಿನಲ್ಲಿ ಜಾಗತಿಕ ಹಾರಾಟ ನಡೆಸಿ ಅಲ್ಟ್ರಾಲೈಟ್ ದಾಖಲೆ ಹೊಂದಿರುವುದು ಕುಟುಂಬದ ಹಿರಿಮೆಯ ಜೊತೆಗೆ ಜನರಿಗೆ ಸ್ಪೂರ್ತಿ ನೀಡುತ್ತಿರುವುದು ಶ್ಲಾಘನೀಯ.