‘ಎಲ್ಲೇ ಹೋದರೂ ಅಲ್ಲೆಲ್ಲಾ ನೀವೇ ಇದ್ದೀರಿ, ವಾಪಸ್‌ ಭಾರತಕ್ಕೆ ಹಿಂತಿರುಗಿ’ ಎಂದು ಭಾರತೀಯರನ್ನು ನಿಂದಿಸಿದ ಅಮೆರಿಕನ್‌ ಮಹಿಳೆ ಅರೆಸ್ಟ್!

ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಾಲ್ವರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಜನಾಂಗೀಯ ನಿಂದನೆ ಮತ್ತು ಥಳಿಸಿರುವ ಮೆಕ್ಸಿಕನ್-ಅಮೆರಿಕನ್ ಮಹಿಳೆ ಯನ್ನು ಅರೆಸ್ಟ್‌ ಮಾಡಲಾಗಿದೆ. ಈಕೆ ‘ನೀವು ಅಮೆರಿಕವನ್ನು ಹಾಳು ಮಾಡುತ್ತಿದ್ದೀರಿ, ವಾಪಸ್‌ ಭಾರತಕ್ಕೆ ಹಿಂತಿರುಗಿʼ ಎಂದು ಜನಾಂಗೀಯ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

 

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇದೀಗ ಬಂಧನಕ್ಕೊಳಗಾಗಿರುವ ಮಹಿಳೆ ಭಾರತೀಯ ಮೂಲದವರನ್ನು ನಿಂದಿಸಿದ್ದಾರೆ. ಇದರ ವಿಡಿಯೋ ಕೂಡ ವೈರಲ್‌ ಆಗಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

“ನಾನು ನಿಮ್ಮನ್ನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲಾ ಭಾರತೀಯರು ಉತ್ತಮ ಜೀವನವನ್ನು ಬಯಸಿ ಅಮೆರಿಕಕ್ಕೆ ಬರುತ್ತಾರೆ. ನಾನು ಎಲ್ಲಿಗೇ ಹೋದರೂ ಅಲ್ಲೆಲ್ಲಾ ಭಾರತೀಯರೇ ಇದ್ದೀರಿ. ನೀವು ಈ ದೇಶವನ್ನು ಹಾಳು ಮಾಡುತ್ತಿದ್ದೀರಿ. ವಾಪಸ್‌ ಭಾರತಕ್ಕೆ ಹಿಂತಿರುಗಿ” ಎಂದು ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಅಮೆರಿಕದಾದ್ಯಂತ ಭಾರತೀಯ-ಅಮೆರಿಕನ್‌ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವೀಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿ, “ನನ್ನ ತಾಯಿ ಮತ್ತು ಅವರ ಮೂವರು ಸ್ನೇಹಿತರು ಊಟಕ್ಕೆ ಹೋದಾಗ ಈ ಘಟನೆಯು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಸಂಭವಿಸಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನೂ, ಪ್ಲಾನೋ ಪೋಲೀಸ್ ಡಿಟೆಕ್ಟಿವ್ಸ್ ಗುರುವಾರ ಮಧ್ಯಾಹ್ನ ನಿಂದಿಸಿ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಿದ್ದಾರೆ.

Leave A Reply

Your email address will not be published.