13 ವರ್ಷದ ವಿದ್ಯಾರ್ಥಿಯಿಂದ ವಿನ್ಯಾಸಗೊಂಡಿದೆ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ; ಹೇಗಿದೆ ಗೊತ್ತಾ ಈ ‘ರೋಬೋಟ್ ವಿತ್ ಎಮೋಷನ್ಸ್’?

ಪ್ರಪಂಚ ಅದೆಷ್ಟು ಮುಂದುವರಿದಿದೆ ಎಂದರೆ ಯಾವುದೂ ಅಸಾಧ್ಯ ಎಂಬುದೇ ಇಲ್ಲ. ನಮ್ಮ ಯುವ ಪೀಳಿಗೆಯ ಬುದ್ಧಿ ಶಕ್ತಿ ಆ ರೀತಿಯಾಗಿದೆ ಎನ್ನಬಹುದು. ಯಾಕಂದ್ರೆ, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದೀಗ ಯುವ ಪೀಳಿಗೆಯ ವಿದ್ಯಾರ್ಥಿಯೋರ್ವ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ಒಂದನ್ನು ಕಂಡುಹಿಡಿದಿದ್ದಾನೆ.

ಹೌದು. ಮನುಷ್ಯರ ಸೂಚನೆಯಂತೆ ಬದುಕುವ ರೋಬೋಟ್ ಗಳಿಗೆ ಭಾವನೆಯೇ ಇಲ್ಲ ಅನ್ನೋ ಮಾತನ್ನು ಈತ ಬದಲಾಯಿಸಿದ್ದಾನೆ. ‘ರೋಬೋಟ್ ವಿತ್ ಎಮೋಷನ್ಸ್’ ಎಂಬುದನ್ನು ವಿನ್ಯಾಸ ಮಾಡಿದ್ದಾನೆ. ಸಾಧನೆ ಮಾಡಿರೋ ವಿದ್ಯಾರ್ಥಿಯ ಹೆಸರು ಪ್ರತೀಕ್‌.

ಭಾವನೆಗಳನ್ನು ಹೊಂದಿರುವ ರೋಬೋಟ್‌ಗೆ “ರಫಿ” ಎಂದು ಹೆಸರಿಟ್ಟಿದ್ದಾನೆ. ಈ ರೋಬೋಟ್‌ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ನೀವು ಅದನ್ನು ಗದರಿಸಿದರೆ ಕ್ಷಮೆ ಕೇಳುವವರೆಗೂ ಪ್ರತಿಕ್ರಿಯಿಸುವುದೇ ಇಲ್ಲ. ನೀವು ದುಃಖಿತರಾಗಿದ್ದರೆ ಈ ರೋಬೋಟ್‌ ನಿಮ್ಮ ಮುಖದ ಭಾವನೆ ಮತ್ತು ಮನಸ್ಸನ್ನು ಓದುತ್ತದೆ ಎಂದು ಪ್ರತೀಕ್‌ ಹೇಳಿದ್ದಾನೆ.

ತಂತ್ರಜ್ಞಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ 13 ವರ್ಷದ ಈ ಬಾಲಕನ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿ ವಿಶಿಷ್ಟವಾದ ರೋಬೋಟ್‌ ಆವಿಷ್ಕರಿಸುವುದು ನಿಜಕ್ಕೂ ಬಹುದೊಡ್ಡ ಸಾಧನೆ ಎಂದು ಕೊಂಡಾಡಿದ್ದಾರೆ. ರೋಬೋಟ್ ಮುಖಗಳು ಮತ್ತು ಧ್ವನಿಗಳ ಅಂತರ್ಗತ ಡೇಟಾವನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.