ಒಂದು ಕೈಯಲ್ಲಿ ಮಗು, ಇನ್ನೊಂದರಲ್ಲಿ ರಿಕ್ಷಾ ಸ್ಟೇರಿಂಗ್ – ಬದುಕು ಬ್ಯಾಲೆನ್ಸ್ ಮಾಡಲು ಹೆಣಗುವ ವ್ಯಕ್ತಿಗೆ ಕರಗಿದ ಇಂಟರ್ನೆಟ್ !

ಮಧ್ಯಪ್ರದೇಶ: ಕುಟುಂಬವನ್ನು ಬೆಳೆಸುವುದು ಸುಲಭದ ಕೆಲಸವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬದುಕಿನ ಸವಾಲನ್ನು ಯಶಸ್ವಿಯಾಗಿ ಜಯಿಸಲು, ಜನರು ನಿಜವಾಗಿಯೂ ಕಷ್ಟಪಟ್ಟು ದುಡಿಯಬೇಕು. ಅದು ಎಲ್ಲರೂ ಮಾಡುವಂತದ್ದೇ. ಆದರೆ ಇಲ್ಲೊಬ್ಬ ದುರದೃಷ್ಟವಂತನಿಗೆ ತನ್ನ ಅಂಬೆಗಾಲಿಡುವ ಹಸುಳೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಆಟೋ ರಿಕ್ಷಾ ಓಡಿಸಿ, ಬದುಕಿನ ಬಂಡಿ ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆ ಇದೆ. ಅದೀಗ ಎಲ್ಲರ ಗಮನ ಸೆಳೆದಿದೆ.

ಮಧ್ಯಪ್ರದೇಶದ ಜಬಲ್ಪುರದಲ್ಲಿ ಸೈಕಲ್ ರಿಕ್ಷಾ ಓಡಿಸುತ್ತಿರೋ ವ್ಯಕ್ತಿಯ ಕಥೆಯೆ ಇವತ್ತಿನ ಸ್ಫೂರ್ತಿ.
ಆತ ನಗರದ ಬೀದಿಗಳಲ್ಲಿ ಸೈಕಲ್ ರಿಕ್ಷಾವನ್ನು ಓಡಿಸುವಾಗ ರಾಜೇಶ್ ತನ್ನ ಅಂಬೆಗಾಲಿಡುವ ಮಗನನ್ನು ಒಂದು ಕೈಯಲ್ಲಿ ಎತ್ತಿಕೊಂಡು ಹೋಗುತ್ತಾನೆ. ಆ ವ್ಯಕ್ತಿ ಪ್ರತಿದಿನ ತನ್ನ ಮಗನನ್ನು ಭುಜದ ಮೇಲೆ ಹೊತ್ತುಕೊಂಡು ಕೆಲಸ ಮಾಡುತ್ತಾನೆ, ಬಳಿಕ ಮಗುವು ನಿದ್ರೆ ಜಾರಿದ್ರೂ ಹೊತ್ತುಕೊಂಡೆ ರಿಕ್ಷ ಚಾಲನೆ ಮಾಡುತ್ತಾನೆ. ಪ್ರತಿನಿತ್ಯ ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುತ್ತಾ ತನ್ನ ಕುಟುಂಬ ನಿರ್ವಹಿಸುತ್ತಾನೆ.

ರಾಜೇಶ್ ಪ್ರಯಾಣಿಕರನ್ನು ಹುಡುಕುತ್ತಾ ಜಬಲ್ಪುರದಾದ್ಯಂತ ತಿರುಗಾಡುತ್ತಾನೆ. ಪ್ರಯಾಣಿಕರನ್ನು ಅವರು ತೆರಳಬೇಕಾದ ಸ್ಥಳಕ್ಕೆ ಕರೆದೊಯ್ಯಲು ಒಂದು ಕೈಯಿಂದ ರಿಕ್ಷಾವನ್ನು ಓಡಿಸುತ್ತಾರೆ. ಈ ವಿಡಿಯೋ ಕಂಡ  ಟ್ವಿಟರ್ ಬಳಕೆದಾರರ ಭಾವ ಕಲಕಿದೆ. ವ್ಯಕ್ತಿಯ ಕಠಿಣ ಪರಿಶ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಆತನಿಗೆ ಬಳಕೆದಾರರು ಸಹಾಯಕ್ಕೆ ಮುಂದಾಗಿದ್ದಾರೆ, 

“ಅವನಿಗೆ ಖಂಡಿತವಾಗಿಯೂ ಸಹಾಯದ ಅಗತ್ಯವಿದೆ. ಇದು ಅಸುರಕ್ಷಿತ ಮತ್ತು ದುಃಖಕರವಾಗಿದೆ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. “ಅವನಿಗೆ ಸಹಾಯ ಮಾಡಲು ಯಾವುದಾದರೂ ಮಾರ್ಗವಿದೆಯೇ?” ಎಂದು ಇನ್ನೊಬ್ಬರು ಕೇಳಿದ್ದಾರೆ.

ರಾಜೇಶ್ ಗೆ ಇಬ್ಬರು ಗಂಡು ಮಕ್ಕಳಿದ್ದಾರೆ – ಅವನು ಹಿರಿಯನನ್ನು ಮನೆಯಲ್ಲಿ ಬಿಟ್ಟು ಪುಟ್ಟ ಮಗುವನ್ನು ತನ್ನೊಂದಿಗೆ ಕರೆದೊಯ್ಯುತ್ತ ಹೊಟ್ಟೆಪಾಡಿಗಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ. ಆತನಿಗೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಬಹುಶಃ ಹೆಂಡತಿಯಾಗಲೀ, ಇನ್ಯಾರೇ ಹೆಣ್ಣು ಜೀವಗಳು ಇಲ್ಲಾ ಅನ್ನಿಸುತ್ತಿದ್ದು, ಇದೀಗ ಸೋಷಿಯಲ್ ಮೀಡಿಯಾ ಆತನಿಗಾಗಿ ಮರುಗಿ ಸಹಾಯಕ್ಕಾಗಿ ಮನಸ್ಸು ಮಾಡುತ್ತಿದೆ.

Leave A Reply

Your email address will not be published.