‘ಮದರಸ’ ಗಳಿಗೆ ಕಡಿವಾಣ ಹಾಕಲು ಮುಂದಾದ ಸರಕಾರ – ಬಿ ಸಿ ನಾಗೇಶ್

Share the Article

ಮದರಸಗಳಿಗಾಗಿ ವಿಶೇಷ ಮಂಡಳಿ ರಚನೆ ವಿಚಾರವಾಗಿ ಹಾಗೂ ಅಲ್ಲಿ ಕಲಿಸುವ ಶಿಕ್ಷಣದ ಬಗ್ಗೆ ಪರಿಶೀಲನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಶಿಕ್ಷಣ ಸಿಗುತ್ತಿದೆಯಾ ಅಥವಾ ಇಲ್ಲವಾ ಅಂತ ಸಭೆಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮದರಸದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ವಿಜ್ಞಾನ, ಗಣಿತ ವಿಷಯ ಕಲಿಸುತ್ತಿಲ್ಲ. ಮದರಸಗಳ ಮೇಲೆ ಅನೇಕ ಆರೋಪಗಳು ಇಲಾಖೆಗೆ ಬಂದಿದ್ದ ಕಾರಣ ಮದರಸಗಳ ಬಗ್ಗೆ ಸಭೆ ಆಗಿದೆ. ಮದರಸಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಅಲ್ಲಿ ಏನು ಕಲಿಸಿ ಕೊಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮದರಸಗಳ ಮೇಲೆ ದೂರು ಬಂದಿದೆ. ನಮ್ಮ ಅಧಿಕಾರಿಗಳನ್ನು ಒಳಗೆ ಬಿಡೋದಿಲ್ಲ. ಹೀಗಾಗಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಶಿಕ್ಷಣ ತಜ್ಞರು, ಮದರಸ ನಡೆಸುತ್ತಿರೋ ಜೊತೆ ಸಭೆ ಮಾಡ್ತೀವಿ. ಮೊದಲು ಅಧಿಕಾರಿಗಳಿಂದ ವರದಿ ತರಿಸಿಕೊಳ್ತಿವಿ. ವರದಿ ಬಂದ ಬಳಿಕ ಮುಂದಿನ ಕ್ರಮ ತಗೋತೀವಿ.15 ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ಕಮೀಷನ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮದರಸಗಳ ಬಗ್ಗೆ ವರದಿ ನೀಡ್ತಾರೆ. ವರದಿ ಬಂದ ಬಳಿಕ ಮಂಡಳಿ ರಚನೆ ಬಗ್ಗೆ ತೀರ್ಮಾನ ಮಾಡ್ತೀವಿ. ಮುಂದೆ ಹೇಗೆ ಮಾಡಬಹುದು ಅಂತ ಸಭೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

Leave A Reply