ಮತ್ತೆ ಮುಂದುವರಿದ ಭೂಕಂಪ : 46 ಗಂಟೆಗಳಲ್ಲಿ ಬರೋಬ್ಬರಿ 9 ಬಾರಿ ಕಂಪಿಸಿದ ಭೂಮಿ

ದೇಶದಾದ್ಯಂತ ಭೂಕಂಪನ ಸರದಿ ಮುಂದುವರಿದಿದ್ದು,
ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ತಡರಾತ್ರಿ ಪ್ರಬಲ ಭೂಕಂಪನದ ಅನುಭವವಾಗಿದೆ. ವರದಿಯ ಪ್ರಕಾರ, ಕತ್ರಾದಿಂದ 62 ಕಿಮೀ ದೂರದಲ್ಲಿ 48 ನಿಮಿಷಗಳ ಮಧ್ಯಂತರದಲ್ಲಿ ಎರಡು ಬಾರಿ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

ANI ಸುದ್ದಿ ಸಂಸ್ಥೆ ವರದಿ ಪ್ರಕಾರ, ಮೊದಲಿಗೆ ಭೂಕಂಪ ಬುಧವಾರ ರಾತ್ರಿ 11:04 ಕ್ಕೆ ಆಗಿದ್ದು, 48 ನಿಮಿಷಗಳ ನಂತರ, ಎರಡನೇ ನಡುಕ 11:52 ನಿಮಿಷಗಳಲ್ಲಿ ಆಗಿದೆ. ಮೊದಲನೆಯ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1, ಎರಡನೇ ಕಂಪನದ ತೀವ್ರತೆ 3.2 ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಭೂಮಿಯಿಂದ 5ಕಿ.ಮೀ ಆಳದಲ್ಲಿದೆ.ಬರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.2 ಇತ್ತು.

ಕಳೆದ ಎರಡು ದಿನಗಳಲ್ಲಿ ಇಲ್ಲಿ ಒಟ್ಟು 9 ಬಾರಿ ಭೂಕಂಪನದ ಅನುಭವವಾಗಿದೆ. ಆದರೆ, ಕಡಿಮೆ ತೀವ್ರತೆಯಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ. ಇದಲ್ಲದೇ, ಮಂಗಳವಾರ 6 ಬಾರಿ ಭೂಕಂಪನದ ಅನುಭವವಾಗಿದೆ. ಇದರಲ್ಲಿ ಮೂರು ಕಂಪನಗಳ ಕೇಂದ್ರಬಿಂದು ಉಧಂಪುರದಲ್ಲಿ ಮೂರು ದೋಡಾ ಜಿಲ್ಲೆಯಲ್ಲಿ ಮತ್ತು ಒಂದು ಕಂಪನದ ಕೇಂದ್ರಬಿಂದು ಕಿಶ್ಚಾರ್ ಜಿಲ್ಲೆಯಲ್ಲಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.6 ರಿಂದ 3.9 ರವರೆಗೆ ಅಳೆಯಲಾಗಿದೆ.

ಆದರೆ, ಕಡಿಮೆ ತೀವ್ರತೆಯಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ.

Leave A Reply

Your email address will not be published.