BBK : ಆರ್ಯವರ್ಧನ್ ಗುರೂಜಿ ಹೇಳಿದ ಭವಿಷ್ಯಕ್ಕೆ ಭಯಗೊಂಡ ‘ಮಾರಿಮುತ್ತು’ ಮೊಮ್ಮಗಳು ಜಯಶ್ರೀ ಆರಾಧ್ಯ
ಎಲ್ಲರಿಗೂ ಈಗ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರ ಪರಿಚಯ ಇರಬಹುದು. ಈ ಮನೆಯಲ್ಲಿ ಸ್ಪರ್ಧಿಯಾಗಿ ‘ಮಾರಿಮುತ್ತು’ ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಅವರು ಕೂಡಾ ಇದ್ದಾರೆ. ತನ್ಮ ನೇರ ನುಡಿಯಿಂದ ಇಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ ಈಕೆ. ಜಗಳ ಮಾಡುವುದರಲ್ಲಿ, ವಾದ ಮಾಡುವುದರಲ್ಲಿ ಉಳಿದ ಕಂಟೆಸ್ಟೆಂಟ್ ಗಳಿಗಿಂತ ಇವರು ಕಮ್ಮಿ ಇಲ್ಲ. ಈಗ ಆರ್ಯವರ್ಧನ್ ಗುರೂಜಿ ಅವರು ಇವರ ಭವಿಷ್ಯ ನುಡಿದಿದ್ದಾರೆ. ಜಯಶ್ರೀ ಮದುವೆಯ ಬಗ್ಗೆ ಕುತೂಹಲಕಾರಿ ವಿಷಯವನ್ನು ಹೇಳಿದ್ದಾರೆ.
ಮನೆಯಿಂದ ಆಚೆನೇ ಆರ್ಯವರ್ಧನ್ ಗುರೂಜಿ ಭವಿಷ್ಯವಾಣಿ ನುಡಿಯುತ್ತಾ ಫೇಮಸ್ ಆದವರು. ಈಗ ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಅವರ ಕೈ ನೋಡಿ, ಭವಿಷ್ಯ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳುವ ಜ್ಯೋತಿಷ್ಯ ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನೋದು ಅವರವರಿಗೆ ಬಿಟ್ಟದ್ದು. ಬಿಗ್ ಬಾಸ್ ಮನೆಯಲ್ಲಿಯೂ ನಿತ್ಯ ಭವಿಷ್ಯ ಹೇಳುತ್ತಿರುವ ಗುರೂಜಿ ಈಗ ಜಯಶ್ರೀ ಕೈ ನೋಡಿ ಒಂದಷ್ಟು ವಿಷಯ ಹೇಳಿದ್ದಾರೆ.
ಜಯಶ್ರೀ ಆರಾಧ್ಯ ಕೈ ನೋಡಿದ ಗುರೂಜಿ ಅವರು, “ನೀನು ಎರಡು ಮದುವೆಯಾಗುತ್ತೀಯಾ? ನಿನ್ನ ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತೀಯಾ. ನಿನಗೆ ಹುಟ್ಟುವ ಮಕ್ಕಳು ತುಂಬ ಪುಣ್ಯ ಮಾಡಿರುತ್ತವೆ. ನಿನಗಿಂತ ನಿನ್ನ ಮಕ್ಕಳು ಹೈಟ್ ಇರುತ್ತವೆ. ನಿನ್ನ ಲೈಫ್ನಲ್ಲಿ ತುಂಬ ದುಡ್ಡು ಇರುತ್ತದೆ. ಮದುವೆ ಬಗ್ಗೆ ನೀನು ತಲೆ ಕೆಡಿಸಿಕೊಳ್ಳೋದಿಲ್ಲ. ಮದುವೆಯಲ್ಲಿ ಖುಷಿ ಇಲ್ಲ ಅಂದರೆ ಏನು ಉಪಯೋಗ ಎನ್ನುತ್ತಿರುತ್ತೀಯಾ. 5 ವರ್ಷಕ್ಕೊಮ್ಮೆ ನಿಮಗೆ ಯಾರಾದರೂ ಬೆಸ್ಟ್ ಫ್ರೆಂಡ್ ಸಿಗುತ್ತಾರೆ’ ಎಂದು ಹೇಳಿದ್ದಾರೆ.
“ನಿನಗೆ ಸಿಗುವ ಗೆಳೆಯರನ್ನು ಹೇಗೆ ಬೇಕಿದ್ದರೂ ಬಳಸಿಕೋ. ಸಿನಿಮಾ ಗೆಲ್ಲದಿದ್ದರೂ ನೀನು ಮಾಡ್ತಾ ಇರ್ತೀಯ. 4-5 ಮನೆ ತೆಗೆದುಕೊಳ್ಳುತ್ತೀಯಾ. ನಿತ್ಯ ಒಲೆ ಹಚ್ಚಿ ಅಡುವೆ ಮಾಡುವ ಕೈ ನಿಂದಲ್ಲ. ನಿನಗೆ ಬಣ್ಣ ಮೇಕಪ್ ಚೆನ್ನಾಗಿದೆ. ಬ್ಯುಸಿನೆಸ್ ಮಾಡು, ಒಳ್ಳೆಯದಾಗತ್ತೆ. ಕುಟುಂಬದ ಮೇಲೆ ಸ್ವಲ್ಪವೂ ನಿನಗೆ ಆಸೆ ಇರೋದಿಲ್ಲ, ನಿನಗೆ ದುಡ್ಡು ಮುಖ್ಯ. ಎಲ್ಲರೂ ನಿನಗೆ ಮೋಸ ಮಾಡುತ್ತಾರೆ, ಹುಷಾರಾಗಿರಬೇಕು” ಎಂದು ಗುರೂಜಿ ಹೇಳಿದ್ದಾರೆ.
“ಗುರೂಜಿ ನೀವು ನಾನು ಇಲ್ಲಿ ಬಂದಾಗಿನಿಂದ ಎರಡು ಮದುವೆ ಆಗುತ್ತೀರಾ ಎಂದಿದ್ದೀರಿ, ಇನ್ನೊಮ್ಮೆ ನನಗೆ ಮದುವೆ ಆಗಿದೆ ಅಂತ ಕೂಡ ಹೇಳ್ತೀರಾ. ನನಗೆ ಪಾರ್ಟನರ್ ಜೊತೆ ಬ್ಯುಸಿನೆಸ್ ಮಾಡೋಕೆ ಇಷ್ಟ ಇಲ್ಲ. ನಾನೊಬ್ಬಳೇ ಬ್ಯುಸಿನೆಸ್ ಮಾಡಬೇಕು” ಎಂದು ಗುರೂಜಿಗೆ ಜಯಶ್ರೀ ಉತ್ತರ ನೀಡಿದ್ದಾರೆ.
ಅಂದಹಾಗೇ ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಹೇಳುವ ಭವಿಷ್ಯಗಳೆಲ್ಲಾ ಸುಳ್ಳಾಗುತ್ತೆ ಎಂಬ ಮಾತಿದೆ. ಹಾಗಾದರೆ ನಾವು ಕಾದು ನೋಡಣವೇ? ಇದರಲ್ಲಿ ಯಾವುದು ನಿಜ ಆಗಬಹುದು ಅಥವಾ ಸುಳ್ಳಾಗಬಹುದು ಎಂದು.