24 ಗಂಟೆಗಳಲ್ಲಿ ಸಿದ್ಧವಾಗಿದೆ ಪ್ಲಾಸ್ಟಿಕ್ ಮನೆ!

ಪ್ಲಾಸ್ಟಿಕ್‌ ನಿಷೇಧದ ಬೆನ್ನಲ್ಲೇ ಪ್ಲಾಸ್ಟಿಕ್ ಮರುಬಳಕೆಯಿಂದ ಹಲವಾರು ವಸ್ತುಗಳ ತಯಾರಿ ನಡೆಯುತ್ತಿದೆ. ಪ್ಲಾಸ್ಟಿಕ್ ನಿಂದ ರಸ್ತೆ ಕೂಡ ನಿರ್ಮಾಣವಾಗಿದೆ. ಅದರಂತೆ ಇದೀಗ ಪ್ಲಾಸ್ಟಿಕ್ ಅನ್ನು ಮನೆಕಟ್ಟಲು ಬಳಸಲಾಗುತ್ತಿದೆ. 3ಡಿ ಪ್ರಿಂಟ್ ಮೂಲಕ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಲಾಸ್ ಏಂಜಲೀಸ್ ಮೂಲದ ಸ್ಟಾರ್ಟಪ್ ಕಂಪನಿ ಅಜೂರ್‌ ಈ ಯೋಜನೆಯನ್ನು ಪ್ರಾರಂಭಿಸಿದೆ.

ಕಂಪನಿಯ 3ಡಿ ಪ್ರಿಂಟ್‌ಗಳ ಮೂಲಕ ಮನೆಗಳನ್ನು ನಿರ್ಮಿಸಲು ಪ್ಲಾಸ್ಟಿಕ್ ಅನ್ನು ಬಳಸುತ್ತಿದೆ. ಅಜೂರ್ ಇಂತಹ ಮಾದರಿಗಳನ್ನು ಮಾರಾಟ ಮಾಡುತ್ತಿದೆ, ಇದರ ಬೆಲೆ ಸಹ ತುಂಬಾ ಕಡಿಮೆ. ಏಪ್ರಿಲ್‌ನಲ್ಲಿ, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ವಸ್ತುಗಳಿಂದ ತಯಾರಿಸಿದ ವಿಶ್ವದ ಮೊದಲ 3D ಮುದ್ರಿತ ‘ಬ್ಯಾಕ್‌ಯಾರ್ಡ್‌ ಸ್ಟುಡಿಯೋ’ ಅನ್ನು ಅಜೂರ್ ಅನಾವರಣಗೊಳಿಸಿತ್ತು.

ಕಂಪನಿ ಹೇಳುವ ಪ್ರಕಾರ ಮುದ್ರಣ ಸಾಮಗ್ರಿಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಆಹಾರದ ಪ್ಯಾಕೇಜಿಂಗ್‌ನಲ್ಲಿ ಕಂಡುಬರುವ ನೈಸರ್ಗಿಕವಾದ ಜಲನಿರೋಧಕ ಪ್ಲಾಸ್ಟಿಕ್ ಪಾಲಿಮರ್ಗಳನ್ನು ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ ನಾವು ಕಟ್ಟುವ ಮನೆಗಿಂತ ಶೇ.70ರಷ್ಟು ವೇಗವಾಗಿ ಈ ಮನೆ ನಿರ್ಮಾಣವಾಗುತ್ತದೆ. ವೆಚ್ಚ ಕೂಡ ಶೇ.30ರಷ್ಟು ಕಡಿಮೆ. ಮನೆಗಳ ನಿರ್ಮಾಣಕ್ಕೆ ಕಾಂಕ್ರೀಟ್‌ ಬಳಸಲಾಗುತ್ತದೆ.

ಆದ್ರೆ ಈ ಕಂಪನಿ ಬ್ಲಾಸ್ಟಿಕ್‌ ಅನ್ನು ಬಳಕೆ ಮಾಡಿಕೊಳ್ತಿದೆ. ಅವರು ಹೇಳುವ ಪ್ರಕಾರ 24 ಗಂಟೆಗಳಲ್ಲಿ ಮನೆಯನ್ನು ಸಿದ್ಧಪಡಿಸಬಹುದು. 120 ಚದರ ಅಡಿಯ ಸ್ಕೈ ಬ್ಯಾಕ್‌ಯಾರ್ಡ್ ಸ್ಟುಡಿಯೋದ ನಿರ್ಮಾಣಕ್ಕೆ 20 ಲಕ್ಷ ವೆಚ್ಚವಾಗಿದೆ. ಇದು ಒಂದೇ ಕೋಣೆಯನ್ನು ಹೊಂದಿದೆ. ಉಳಿದವುಗಳನ್ನು ಹಿಂಭಾಗದ ಕಚೇರಿ ಅಥವಾ ಜಿಮ್ ಆಗಿ ಬಳಸಬಹುದು.

Leave A Reply

Your email address will not be published.