ಕುಕ್ಕೇ ಸುಬ್ರಹ್ಮಣ್ಯ: ನಾಲ್ಕು ದಿನಗಳ ಹಿಂದೆ ಕುಮಾರಧಾರೆಯಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ!!

ಸುಬ್ರಹ್ಮಣ್ಯ: ಆ. 21 ರಂದು ಕುಕ್ಕೆ ಕ್ಷೇತ್ರಕ್ಕೆ ಬಂದ ಪ್ರವಾಸಿಗನೊಬ್ಬ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದು ನಾಪತ್ತೆಯಾದ ಘಟನೆ ದುರಂತ ಅಂತ್ಯ ಕಂಡಿದ್ದು ಇಂದು ಯುವಕನ ಶವ ಪತ್ತೆಯಾಗಿದೆ.

 

ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು ಮೂಲತಃ ಮಂಡ್ಯದ ಯುವಕ ಶಿವು(25) ಎನ್ನಲಾಗಿದೆ . ಈತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

21 ಜನರ ತಂಡ ವಿವಿಧ ಕ್ಷೇತ್ರಗಳ ಭೇಟಿಗೆ ಬಂದಿದ್ದು ಕುಕ್ಕೆಗೂ ಆಗಮಿಸಿ ಕುಮಾರಧಾರ ಸ್ನಾನಘಟ್ಟಕ್ಕೂ ಬಂದಿದ್ದರು. ಈ ವೇಳೆ ನದಿಗೆ ಇಳಿಯದಂತೆ ಸ್ನೇಹಿತರೂ ಸೂಚಿಸಿದರೂ ತಡೆಹಗ್ಗ ದಾಟಿ ನದಿ ನೀರಿಗೆ ಇಳಿದಿದ್ದಾನೆ ಎಂದು ಆತನ ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ರಕ್ಷಣಾ ತಂಡ ಹಗಲು ಇರುಳೆನ್ನದೆ ಕಾರ್ಯಚರಣೆ ನಡೆಸಿತ್ತು. ಆದರೆ ನಿರಂತರ ಮಳೆಯಿಂದ ಕಾರ್ಯಚರಣೆ ವಿಳಂಬವಾಗಿತ್ತು.

Leave A Reply

Your email address will not be published.