ಕೊಡಗಿನಲ್ಲಿ ಪ್ರತಿಭಟನೆ ಅವಕಾಶ ಕೊಟ್ರೆ ಹೆಣ ಬೀಳುತ್ತೆ – ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಎಚ್ಚರಿಕೆ
ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಕೊಡಗು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ರಾಜ್ಯ ಸರ್ಕಾರ ನಿಷೇಧಾಜ್ಞೆ ಹೊರಡಿಸಿದ ಕಾರಣ, ಮುಂದೂಡಿಕೆ ಮಾಡಲಾಗಿತ್ತು. ಈ ಬೆನ್ನಲ್ಲೇ ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ, ಪಕ್ಕಾ ಹೆಣ ಬೀಳುತ್ತೆ ಎಂಬುದಾಗಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು. ಒಂದು ವೇಳೆ ಕೊಟ್ಟರೇ ಪಕ್ಕಾ ಹೆಣ ಬೀಳುತ್ತದೆ. ಇದರಿಂದ ಗಲಾಟೆಯಾಗಬಹುದು. ರಾಜ್ಯ ಸರ್ಕಾರ ಹೆಣಬಿದ್ದು, ಗಲಾಟೆಯಾಗೋದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.
ಈಗಾಗಲೇ ಎಷ್ಟು ಕೊಲೆಯಾಗಿವೆ ಗೊತ್ತಾ.? ಎಲ್ಲೆಲ್ಲಿಂದಲೇ ಬಂದು ಕೊಲೆ ಮಾಡ್ತಾ ಇದ್ದಾರೆ ಗೊತ್ತಾ.? ಕೇರಳ ಗಡಿ ದಾಟಿ, ರಾಜ್ಯಕ್ಕೆ ಬಂದು ಕೊಲೆ ಮಾಡ್ತಾರೆ. ಅದಕ್ಕೆ ಸಾಕಷ್ಟು ಅವಕಾಶಗಳಿದ್ದಾವೆ. ರಾಜ್ಯ ಸರ್ಕಾರ ಇದನ್ನು ಅವೈಡ್ ಮಾಡಬೇಕು ಎಂದು ಹೇಳಿದರು.
ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವ್ಯಕ್ತಿಗೆ ಬೇಸರ ಕಾರಣ ಎಂದಿದ್ದಾನೆ. ಅದು ಆತನ ಹೇಳಿಕೆಯಿಂದ ತಿಳಿದು ಬಂದಿದೆ. ಆತ ಜೆಡಿಎಸ್ ನಲ್ಲಿದ್ದು, ಕಾಂಗ್ರೆಸ್ ಗೆ ಬಂದೆ ಎಂದು ಹೇಳಿದ್ದಾನೆ. ಆತನನ್ನು ಈಗ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದರು.