ಮದುವೆಯಾದವಳ ಜೊತೆ ಪೊಲೀಸಪ್ಪನ ಸರಸ ಸಲ್ಲಾಪ | ಬ್ಲ್ಯಾಕ್ ಮೇಲ್ ಗೆ ಹೆದರಿದ ಪೊಲೀಸ್ ಮಾಡಿದ್ದೇನು?

ಇದೊಂದು ಪೊಲೀಸರನ್ನು ನಿಜಕ್ಕೂ ನಾಚಿಸುವ ಕೆಲಸವೆಂದೇ ಹೇಳಬಹುದು. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಯುಪಿ ಪೊಲೀಸರನ್ನೇ ನಾಚಿಸುವ ವೀಡಿಯೋವೊಂದು ವೈರಲ್ ಆಗಿದ್ದು, ಈ ಪ್ರಕರಣ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ. ಬಂಗಾರ್‌ಮೌ ಕೊತ್ವಾಲಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯೊಂದಿಗೆ ಹೆಡ್ ಕಾನ್ ಸ್ಟೇಬಲ್ ನ ಅಶ್ಲೀಲ ವೀಡಿಯೋವೊಂದು ಮುನ್ನಲೆಗೆ ಬಂದಿದೆ.

 

ಈ ವೀಡಿಯೋ ಎರಡು ವರ್ಷಗಳ ಹಿಂದಿನದ್ದು ಎಂದು ಹೇಳಲಾಗಿದೆ. ಇದನ್ನು ಮಹಿಳೆಯೇ ವೈರಲ್ ಮಾಡಿದ್ದಾರೆ. ಈ ವೀಡಿಯೋ ಹೊರಬಿದ್ದ ಬಳಿಕ ಕಾನ್‌ಸ್ಟೇಬಲ್‌ನನ್ನು ಅಮಾನತು ಮಾಡಲಾಗಿದೆ.

ಬಂಗಾರ್ ಮೌ ಕೊಟ್ಟಾಲಿಯ ಮುಖ್ಯ ಕಾನಸ್ಟೇಬಲ್ ಈ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಂಗಾರ್‌ಮೌ ಕೊಟ್ವಾಲಿಯ ಮುಖ್ಯ ಕಾನ್‌ಸ್ಟೇಬಲ್ ದೀಪ್ ಸಿಂಗ್. ಈತ ಪೊಲೀಸ್ ಯೂನಿಫಾರ್ಮ್ ನಲ್ಲಿದ್ದು, ಕೊಠಡಿಯೊಂದರಲ್ಲಿ ಸೀರೆಯುಟ್ಟ ಮಹಿಳೆಯೊಂದಿಗೆ ಅಶ್ಲೀಲ ಕೃತ್ಯಗಳನ್ನು ನಡೆಸುತ್ತಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಈತ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯನ್ನು ಚುಂಬಿಸುತ್ತಾನೆ. ಜೊತೆಗೆ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಾನೆ. ಕಾನ್ ಸ್ಟೇಬಲ್ ನ ಈ ಅಶ್ಲೀಲ ವೀಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂರು ವರ್ಷಗಳ ಹಿಂದೆ ಮುಖ್ಯ ಪೇದೆ ದೀಪ್ ಸಿಂಗ್ ಅವರನ್ನು ಗಂಗಾಘಾಟ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಪತಿ-ಪತ್ನಿಯರ ನಡುವಿನ ಜಗಳ ಬಿಡಿಸಲು ಹೋಗಿ, ಅನಂತರ ಆ ಮಹಿಳೆಯ ಪರಿಚಯವಾಗಿದೆ. ಇದಾದ ಬಳಿಕ ಪತಿ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆಯ ಮನೆಗೆ ತೆರಳಿ ಆಕೆಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದಾನೆ. ಮುಖ್ಯ ಪೇದೆಯ ಸತ್ಯಾಸತ್ಯತೆ ಬೆಳಕಿಗೆ ಬಂದಾಗ ಮಹಿಳೆಯ ಪತಿ, ಕಾರ್ ಗ್ಯಾರೇಜ್ ನಿರ್ವಾಹಕರ ಸಹಾಯದಿಂದ ಅಸಭ್ಯ ಸ್ಥಿತಿಯಲ್ಲಿ ತನ್ನ ಪತ್ನಿಯೊಂದಿಗೆ ಕಾನ್ ಸ್ಟೇಬಲ್ ಇರುವುದನ್ನು ವೀಡಿಯೋ ಮಾಡಿದ್ದಾನೆ.

ಸುಮಾರು ಮೂರು ವರ್ಷಗಳಿಂದ ವೀಡಿಯೋ ಮಾಡಿದ ಯುವಕರು ಮುಖ್ಯ ಪೇದೆಯನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ಎಸ್ಪಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಕಾನ್‌ಸ್ಟೆಬಲ್ ಬಳಿ ಯುವಕ ಹಣಕ್ಕೆ ಬೇಡಿಕೆ ಇಟ್ಟಿದ್ದ, ಆದರೆ ತನ್ನ ಬಳಿ ಹಣವಿಲ್ಲ ಎಂದು ದೀಪ್ ಸಿಂಗ್ ಹೇಳಿದ್ದಾನೆ. ಹಣದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾನ್ ಸ್ಟೇಬಲ್ ಮಹಿಳೆಯೊಂದಿಗೆ ಇರುವ ಆಕ್ಷೇಪಾರ್ಹ ವೀಡಿಯೋ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.

ಈ ವೀಡಿಯೋ ಲೀಕ್ ಆದ ನಂತರ ಕಾನ್‌ಸ್ಟೆಬಲ್ ದೀಪ್ ಸಿಂಗ್ ನನ್ನು ಅಮಾನತು ಮಾಡಲಾಗಿದೆ.

ಪತ್ನಿಯೊಂದಿಗಿನ ಕಾನ್ ಸ್ಟೇಬಲ್ ಸಂಬಂಧ ಕಂಡು ಬೇಸರಗೊಂಡ ಪತಿ ಆತನ ವಿರುದ್ಧ ದೂರಿಗೆ ಮುಂದಾಗಿದ್ದರೂ, ಆದರೆ ಅದೇನಾಯ್ತ ಗೊತ್ತಿಲ್ಲ ನಂತರ ಆತ ಕೂಡ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆ. ಹೆಂಡತಿಯೊಂದಿಗೆ ಸರಸವಾಡುತ್ತಿದ್ದ ಕಾನ್ ಸ್ಟೇಬಲ್ ವೀಡಿಯೋವನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಜೊತೆಗೆ ಸಾಧ್ಯವಾದಷ್ಟು ಹಣವನ್ನು ತಗೊಂಡಿದ್ದಾನೆ. ನಂತರ ಹಣ ಕೊಡದೇ ಇದ್ದಾಗ, ಈ ವೀಡಿಯೋವನ್ನು ಹರಿಬಿಟ್ಟಿದ್ದಾನೆ. ಪತಿ ಈ ವೀಡಿಯೋವನ್ನು ರೆಕಾರ್ಡ್ ಮಾಡಲು ತನ್ನ ಸ್ನೇಹಿತರ ಸಹಾಯವನ್ನೂ ಪಡೆದಿದ್ದಾನೆಂದು ವಿಚಾರಣೆಯಿಂದ ತಿಳಿದು ಬಂದಿದೆ.

Leave A Reply

Your email address will not be published.