ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಕಡಬ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆ

ಲಂಚಕ್ಕೆ ಬಾಯಿ ಬಿಟ್ಟು ಬಡವರಿಗೆ ಅನ್ಯಾಯ ಮಾಡಬೇಡಿ-ರಾಕೇಶ್ ರೈ ಕೆಡೆಂಜಿ

ಕಡಬ : ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಅರ್ಹಅಕ್ರಮ ಸಕ್ರಮ ಸರಕಾರಿ ಕೃಷಿ ಜಮೀನುಗಳ ಸಕ್ರಕರಣ ಸಭೆ ಬಂದರು ಮೀನುಗಾರಿ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಸುಮಾರು ೧೯೪ ಕಡತಗಳನ್ನು ವಿಲೇವಾರಿ ಮಾಡಲಾಯಿತು. ೬ ಕಡತಗಳನ್ನು ಮರುಪರಿಶೀಲನೆ ಕಳುಹಿಸಲಾಯಿತು. ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ , ತಹಶಿಲ್ದಾರ್ ಅನಂತ ಶಂಕರ್, ಉಪತಹಶಿಲ್ದಾರ್‌ಗಳಾದ ಮನೋಹರ ಕೆ.ಟಿ, ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು

ಸಭೆಯಲ್ಲಿ ಬ್ರಷ್ಟಾಚಾರದ ವಿರುದ್ಧ ಸ್ಪೋಟಗೊಂಡ ಅಕ್ರೋಶ
ಅಕ್ರಮ ಸಕ್ರಮ ಬೈಟಕ್‌ನಲ್ಲಿ ಬ್ರಷ್ಟಾಚಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ವಿದ್ಯಮಾನ ಸಚಿವರ ಸಮ್ಮುಖದಲ್ಲೇ ನಡೆಯಿತು.
ಬೆಳಿಗ್ಗೆ ಹನ್ನೊಂದು ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಮಧ್ಯಾಹ್ನದ ಬಳಿಕ ವಸ್ತುಶಃ ರಣರಂಗವಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಚರ್ಚೆಗೆ ಮುನ್ನುಡಿ ಬರೆದರೆ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೆಶ್ ರೈ ಕಡೆಂಜಿ ಅರ್ಧ ಗಂಟೆಗೂ ಹೆಚ್ಚು ಕಾಲ ತಹಸೀಲ್ದಾರ್ ಆದಿಯಾಗಿ ಅಧಿಕಾರಿಗಳನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡರು. ಕಡತವೊಂದರ ಮಂಜುರಾತಿ ಬಗ್ಗೆ ಪ್ರಸ್ತಾಪಿಸಿದಾಗ ಅದರ ಮಂಜುರಾತಿಗೆ ಕಾನೂನು ತೊಡಕು ಇದೆ ಎಂದು ತಹಸೀಲ್ದಾರ್ ಅವರಿಂದ ಉತ್ತರ ಬಂದಾಗ ಅಕ್ರೋಶಗೊಂಡ ಕೃಷ್ಣ ಶೆಟ್ಟಿ ನೀವು ಕಾನೂನು ಬಾಹಿರವಾಗಿ ಎಷ್ಟು ಕಡತಗಳ:ನ್ನು ಹಣ ಪಡೆದು ಮಾಡಿಕೊಟ್ಟಿದ್ದೀರಿ ಎಂದು ನನಗೆ ಗೊತ್ತಿದೆ. ಅರ್ಹ ಕಡತಗಳನ್ನು ಅನಾವಶ್ಯವಗಿ ತಡೆ ಹಿಡಿದು ದುಡ್ಡಿಗೋಸ್ಕರ ಬಡವರ ರಕ್ತ ಹೀರುತ್ತೀರಿ, ನಾವು ಮನಸ್ಸು ಮಾಡಿದರೆ ನೀವು ತಹಸೀಲ್ದಾರ್ ಚೈರಲ್ಲಿ ಒಂದು ನಿಮಿಷ ಕೂರಲು ಬಿಡುವುದಿಲ್ಲ. ನೀವು ಎಲ್ಲೆಲ್ಲಿ ಏನೇನೇನು ಅಕ್ರಮ ಮಾಡಿದ್ದೀರಿ ಎನ್ನುವ ಸಂಪೂರ್ಣ ಮಾಹಿತಿ ನನಗೆ ಲಭ್ಯವಾಗಿದೆ, ನೀವು ನಿವೃತ್ತಿಯಾದರೂ ನಿಮ್ಮನ್ನು ಬೆಂಬಿಡದೆ ಕಾಡಲು ನಮಗೆ ಗೊತ್ತಿದೆ ಎಂದು ಹೇಳುತ್ತಿದ್ದಂತೆ ರಾಕೆಶ್ ರೈ ಕೆಡೆಂಜಿ ತಹಸೀಲ್ದಾರ್ ವಿರುದ್ಧ ಕೆಮಡಾಮಂಡಲರಾಗಿ ನೀವು ಕೆಲವು ಕಡತಗಳನ್ನು ಪುರ್ವಾಗೃಹಪೀಡಿತರಾಗಿ ತಡೆಹಿಡಿಯುತ್ತೀರಿ ಎಂದು ತರಾಟೆ ತೆಗದುಕೊಂಡರು, ಗೋಳಿತೊಟ್ಟು ಗ್ರಾಮದ ಗಣೇಶ್ ಬೊಟ್ಟಿಮಜಲು ಎಂಬವರು ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ವಿರುದ್ಧ ಮಾತನಾಡಿದ್ದನ್ನೇ ದ್ವೇಷವಾಗಿ ಇಟ್ಟುಕೊಂಡು ಕಳೆದ ಆರು ತಿಂಗಳಿಂದ ಅವರ ಕಡತವನ್ನು ಮಂಜೂರು ಹಂತಕ್ಕೆ ಬಿಡಲಿಲ್ಲ. ಈಗ ಕೇಳಿದರೆ ಕಾನೂನು ತೊಡಕು ಹೇಳುತ್ತೀರಿ, ಆದರೆ ಅದೇ ಸರ್ವೆ ನಂಬರ್‌ನಲ್ಲಿ ಇತರರು ನೀಡಿದ ಅರ್ಜಿಯನ್ನು ಹಣ ಪಡೆದು ಸಕ್ರಮ ಮಾಡಿದ್ದೀರಿ, ನೀವು ಪ್ರತೀ ಕಡತಕ್ಕೆ ಹಣ ಪಡೆದೇ ಮಂಜುರಾತಿಗೆ ಅನುವು ಮಾಡುತ್ತೀರಿ ಎನ್ನುವ ದೂರುಗಳಿವೆ, ಮಾತ್ರವಲ್ಲ ಮಹಿಳೆಯೊಬ್ಬರಿಂದ ಲಕ್ಷಕ್ಕೂ ಅಧಿಕ ಹಣ ಪಡೆದು ಅವರ ಕಡತವನ್ನು ಮಾಡಿಕೊಟ್ಟಿಲ್ಲ ಎನ್ನುವ ದೂರು ಬಂದಿದೆ. ಆ ಮಹಿಳೆಯ ಕಣ್ಣೀರಿನ ಶಾಪ ನಿಮಗೆ ತಟ್ಟುತ್ತದೆ ಎಂದು ಅಬ್ಬರಿಸಿದರು. ನನಗೆ ಬ್ರಷ್ಟಚಾರದ ವಿರುದ್ಧ ನೈತಿಕತೆ ಇದೆ, ನಾನು ಅಕ್ರಮ ಸಕ್ರಮ ಸಭೆಯಲ್ಲಿ ಚಾ ಕುಡಿದು ಹೋಗಿರುವುದು ಬಿಟ್ಟರೆ ನಯಾ ಪೈಸೆ ಪಡೆವನಲ್ಲ. ಬೇಕಾದರೆ ಈ ವರೆಗೆ ಚಾಕುಡಿದ ಹಣವನ್ನು ಇಲ್ಲೇ ಕೊಟ್ಟು ಹೋಗುತ್ತೇನೆ ಎಂದು ನೊಂದು ಹೇಳಿದ ರಾಕೇಶ್ ರೈ ಬಡವರಿಗೆ ಕೆಲಸ ಮಾಡಿಕೊಡಿ ಲಂಚಕ್ಕೆ ಬಾಯಿ ಬಿಟ್ಟು ಅವರಿಗೆ ಅನ್ಯಾಯ ಮಾಡಬೇಡಿ ಎಂದು ಗರಂ ಆಗಿಯೇ ಅಧಿಕಾರಿಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡರು. ತಹಸೀಲ್ದಾರರು ಕೆಲವು ವಿಷಗಳಿಗೆ ಕಾನೂನು ತೊಡಕಿನ ವಿಷಯನ್ನು ಮುಂದಿಟ್ಟು ಮಾತನಾಡಿದರೆ. ಉಳಿದ ಬಹತೇಕ ಪ್ರಹಾರಕ್ಕೆ ನಿರುತ್ತರಾಗಿದ್ದರು. ನೆರದ ಫಲಾನುಭವಿಗಳು ಹಾಗೂ ಅಧಿಕಾರಿಗಳು ನಿಬ್ಬೆರಗಾಗಿ ಹೋದರು.

Leave A Reply

Your email address will not be published.