SSC : ಸ್ಟೆನೋಗ್ರಾಫರ್ ಗ್ರೇಡ್ ಸಿ, ಡಿ ಹುದ್ದೆಗಳ ನೇಮಕ ಪರೀಕ್ಷೆಗೆ ಅರ್ಜಿ ಆಹ್ವಾನ

ಸೆಲೆಕ್ಷನ್ ಕಮಿಷನ್ 2022ನೇ ಸಾಲಿನ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ : ಸಿಬ್ಬಂದಿ ನೇಮಕಾತಿ ಆಯೋಗವು 2022ನೇ ಸಾಲಿನ ಸ್ಟೆನೋಗ್ರಾಫರ್ ಗ್ರೇಡ್ ಸಿ, ಡಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷಾ ಅಧಿಸೂಚನೆ ಪ್ರಕಟಿಸಿದೆ.

ಈ ಹುದ್ದೆಗಳ ಪರೀಕ್ಷೆಗೆ ಆನ್‌ಲೈನ್ ರಿಜಿಸ್ಟ್ರೇಷನ್ ಈಗಾಗಲೇ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 05, 2022 ರವರೆಗೆ ಆನ್‌ಲೈನ್ ರಿಜಿಸ್ಟ್ರೇಷನ್‌ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಹಾಗೂ ಸಂಯೋಜಿತ ವಿವಿಧ ಸಂಸ್ಥೆಗಳಲ್ಲಿ ಭರ್ತಿ ಮಾಡುತ್ತದೆ.

ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ :
20-08-2022
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 05-09-2022 ರ ರಾತ್ರಿ 11 ಗಂಟೆವರೆಗೆ
ಆನ್‌ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ : 06-09-2022 ರ ರಾತ್ರಿ 11 ಗಂಟೆವರೆಗೆ.
ಅಪ್ಲಿಕೇಶನ್ ಶುಲ್ಕಕ್ಕೆ ಆಫ್‌ಲೈನ್ ಚಲನ್ ಜೆನೆರೇಟ್
ಮಾಡಲು ಕೊನೆ ದಿನಾಂಕ : 05-09-2022 ರ ರಾತ್ರಿ 11
ಗಂಟೆವರೆಗೆ.
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ
: 06-09-2022
ಅರ್ಜಿ, ಅರ್ಜಿ ಶುಲ್ಕ ಮಾಹಿತಿ ತಿದ್ದುಪಡಿಗೆ ಕೊನೆಯ ದಿನಾಂಕ 07-09-2022
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ನವೆಂಬರ್
2022

ವಿದ್ಯಾರ್ಹತೆ : ಎಸ್ಎಸ್ ಸಿ ಸ್ಟೆನೋಗ್ರಾಫರ್ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ಪರೀಕ್ಷೆ ತೆಗೆದುಕೊಳ್ಳಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.

ಅಪ್ಲಿಕೇಶನ್ ಶುಲ್ಕ : ಜೆನೆರಲ್ ಕೆಟಗರಿ ಅಭ್ಯರ್ಥಿಗಳು ಅಪ್ಲಿಕೇಶನ್ ಶುಲ್ಕ ರೂ.100 ಪಾವತಿಸಬೇಕು. ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ಮೂಲಕ ಸಹ ಪಾವತಿಸಬಹುದು.

ನೇಮಕ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಜತೆಗೆ ಸ್ಕಿಲ್ ಟೆಸ್ಟ್ ಸಹ ಇರುತ್ತದೆ. ಈ ಎರಡು ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ನಂತರ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಸಿಬಿಟಿ ಪರೀಕ್ಷೆಯು 200 ಅಂಕಗಳಿಗೆ 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಗಳನ್ನು ಜೆನೆರಲ್ ಇಂಟೆಲಿಜೆನ್ಸ್/ ರೀಸನಿಂಗ್, ಜೆನೆರಲ್ ಅವಾರ್ನೆಸ್, ಇಂಗ್ಲಿಷ್ / ರೀಡಿಂಗ್ ಕಂಪ್ರೆಹೆನ್ಸನ್ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿರುತ್ತದೆ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.