ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ | ಈ ಮಾತನ್ನು ಯಾರು, ಯಾರಿಗೆ ಹೇಳಿದರು?

ಯಾಕೋ ಸಿದ್ದರಾಮಯ್ಯ ಅವರು ಏನು ಮಾಡಿಸರೂ ಎಲ್ಲಾ ಉಲ್ಟಾ ಹೊಡೆತಿರೋ ಹಾಗೇ ಕಾಣಿಸುತ್ತದೆ. ಮಳೆಹಾನಿ ಪ್ರದೇಶಕ್ಕೆ ಭೇಟಿಗೆಂದು ಹೋದಾಗ ಕಪ್ಪು ಬಾವುಟ ಪ್ರದರ್ಶನ, ಧಿಕ್ಕಾರ ಕೂಗಿದ್ದು. ಅನಂತರ ಈಗ ಸಿದ್ದರಾಮಯ್ಯ ನಾಟಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿದ ವಿಷಯ ಭಾರೀ ಚರ್ಚೆಗೆ ಗುರಿಯಾಗುತ್ತಿದೆ.

 

ಸಿದ್ದರಾಮಯ್ಯ ನಾಟಿ ಕೋಳಿ ತಿಂದು ಮಡಿಕೇರಿ ಬಸವೇಶ್ವರ ದೇಗುಲಕ್ಕೆ ಹೋಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದೇ ತಡ, ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ವಿಜಯಪುರ ನಗರದ ವಿಡಿಎ ಬಳಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯರಿಗೆ ಸವಾಲೊಂದನ್ನು ಹಾಕಿದ್ದಾರೆ. “ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಹಂದಿ ಮಾಂಸ ಸೇವಿಸಲಿ. ಹಂದಿ ಮಾಂಸ ಸೇವಿಸಿ ಮಸೀದಿಗೆ ಹೋಗಲಿ. ಆಗ ನಿಮ್ಮ ತಾಕತ್ತು ಏನೆಂಬುದು ಗೊತ್ತಾಗುತ್ತದೆ” ಎಂದು ಸವಾಲು ಹಾಕಿದ್ದಾರೆ.

ನಮ್ಮಲ್ಲಿ ಒಂದೊಂದು ದೇವಸ್ಥಾನ ದರ್ಶನಕ್ಕೂ ಒಂದೊಂದು ಪದ್ಧತಿ ನಿಯಮಗಳಿವೆ. ಕೆಲವು ದೇವಸ್ಥಾನಗಳಲ್ಲಿ ಬನಿಯನ್ ಸಹ ಹಾಕದೇ ಹೋಗೋ ಸಂಸ್ಕೃತಿ ಇದೆ. ಯಾವ ಯಾವ ದೇವಸ್ಥಾನಗಳಲ್ಲಿ ಯಾವ ರೀತಿಯ ಪಾಲನೆಗಳಿವೆಯೋ ಅವುಗಳನ್ನು ಪಾಲಿಸಬೇಕು. ನೀವು ಅಂಥ ದೇವಸ್ಥಾನಕ್ಕೆ ಹೋಗಬೇಕೆಂದರೆ, ದೇವಸ್ಥಾನದ ಪಾವಿತ್ರ್ಯ ಉಳಿಯಬೇಕಾದರೆ ಅಲ್ಲಿನ ನಿಯಮ ಪಾಲನೆ ಮಾಡಬೇಕು. ಈ ರೀತಿಯ ನೀವು ಉದ್ಧಟತನ ಮಾಡುವುದರಿಂದ ಆಸ್ತಿಕರ ಮನಸ್ಸಿಗೆ
ಸಿದ್ದರಾಮಯ್ಯ ಆಗಲಿ ಯಾರೇ ಆಗಲಿ ಮಾಡಬಾರದು ಎಂದು ಹೇಳುತ್ತಾ, ಸಿದ್ದರಾಮಯ್ಯ ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ ನೊಡೋಣ ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.

Leave A Reply

Your email address will not be published.