ಕೊಲೆ ಆರೋಪಿಯ ಭರ್ಜರಿ ಹುಟ್ಟುಹಬ್ಬ!! ಪೊಲೀಸ್ ವಾಹನದಲ್ಲೇ ಕುಳಿತು ಕೇಕ್ ಕಟ್ ಮಾಡಿ ಸಂಭ್ರಮ!!

ಕೊಲೆ ಪ್ರಕರಣದಲ್ಲಿ ಬಂಧಿತನಾದ ಆರೋಪಿಯೊಬ್ಬ ಪೊಲೀಸ್ ವಾಹನದಲ್ಲೇ ತನ್ನ ಗೆಳೆಯರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಘಟನೆಯೊಂದು ಮಹಾರಾಷ್ಟ್ರದ ಥಾಣೆಯ ಉಲ್ಲಾಸ್ ನಗರ ಎಂಬಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಬೆಳಕಿಗೆ ಬಂದಿದೆ.

 

ಕೊಲೆ, ಸುಲಿಗೆ, ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ರೋಷನ್ ಝಾ ಎನ್ನುವ ಆರೋಪಿಯನ್ನು ಪೊಲೀಸರು ತಮ್ಮ ವಾಹನದಲ್ಲಿ ನ್ಯಾಯಾಲಯಕ್ಕೆ ಕರೆತರುತ್ತಿದ್ದ ಸಂದರ್ಭ ಆತನ ಗೆಳೆಯರು ಕೇಕ್ ತಂದಿದ್ದು, ಅದನ್ನು ಪೊಲೀಸ್ ವಾಹನದಲ್ಲೇ ಕುಳಿತು ಕಟ್ ಮಾಡಿ ಸಂಭ್ರಮಿಸಿದ್ದ.

ಈ ದೃಶ್ಯಗಳನ್ನು ಆತನ ಗೆಳೆಯರು ಮೊಬೈಲ್ ನಲ್ಲಿ ಸೆರೆಹಿಡಿದು, ಬಳಿಕ ತಮ್ಮ ಗೆಳೆಯನ ಹುಟ್ಟುಹಬ್ಬದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ ರಾಜ ಮರ್ಯಾದೆ ಕೊಟ್ಟ ವಿವಾದ ಮುಗಿಯುತ್ತಿದ್ದಂತೆ ಇನ್ನೊಂದು ವಿವಾದ ಸೃಷ್ಟಿಯಾಗಿದ್ದು,ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿದೆ.

ಹುಟ್ಟುಹಬ್ಬ ಆಚರಿಸಿಕೊಂಡ ಆರೋಪಿ

Leave A Reply

Your email address will not be published.