ಮಹಿಳಾ ಟೋಲ್ ಪ್ಲಾಜಾ ಸಿಬ್ಬಂದಿಗೆ ವಾಹನ ಚಾಲಕನಿಂದ ಕಪಾಳಮೋಕ್ಷ, ವಿಡಿಯೋ ವೈರಲ್

ರಸ್ತೆ ತೆರಿಗೆ ಪಾವತಿಸುವ ವಿಚಾರದಲ್ಲಿ ಮಹಿಳಾ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರಿಗೆ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ. ಮಹಿಳಾ‌ ಉದ್ಯೋಗಿ ದಾಖಲೆ ಕೇಳಿದ್ದಕ್ಕೆ ಚಾಲಕ ಕೋಪಗೊಂಡು ವಾಗ್ವಾದ ಮಾಡಿ ಮಹಿಳೆಯ ಕನ್ನೆಗೆ ಹೊಡೆದಿದ್ದಾನೆ.

 

ಈ ಆರೋಪದ ಹಿನ್ನಲೆಯಲ್ಲಿ ವಾಹನ ಚಾಲಕನ ವಿರುದ್ಧ
ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು
ಭಾನುವಾರ ತಿಳಿಸಿದ್ದಾರೆ.

ಬಿಯೋರಾ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಗಢ-ಭೋಪಾಲ್ ರಸ್ತೆಯಲ್ಲಿರುವ ಟೋಲ್ ಪ್ಲಾಜಾದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply

Your email address will not be published.