ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಬಿಗ್ ಶಾಕ್: ಸರ್ಕಾರಿ ಸೌಲಭ್ಯ ಕಡಿತ

ಸುಳ್ಳು ಮಾಹಿತಿ ನೀಡಿ ಬಡವರ ಆಹಾರಗಳನ್ನು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರಿವ ಅನರ್ಹರನ್ನು ಇಲಾಖೆ ಪತ್ತೆ ಹಚ್ಚಲು ಪ್ರಾರಂಭ ಮಾಡಿದೆ. ಅಂತವರ ಕಾರ್ಡ್ ಗಳನ್ನು ರದ್ದುಪಡಿಸುತ್ತಿದೆ. ಈ ರೀತಿ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದುಕೊಂಡವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ದಂಡ ವಿಧಿಸಲಾಗುತ್ತಿದೆ.

ಕಾರ್ಡ್ ರದ್ದಾದದಲ್ಲಿ ಈ ಕಾರ್ಡ್ ಮೂಲಕ ಪಡೆದುಕೊಳ್ಳುತ್ತಿದ್ದ ಸರ್ಕಾರಿ ಸೌಲಭ್ಯಗಳು ಕೂಡ ಕಡಿತವಾಗಲಿವೆ. ಉಚಿತ ರೇಷನ್, ಆರೋಗ್ಯ ಸೇವೆ, ಆರ್‌ಟಿಇ ಸೀಟು, ಸರ್ಕಾರಿ ವಸತಿ ಸೌಲಭ್ಯ ಮೊದಲಾದ ಸೇವೆಗಳು ರದ್ದಾಗುತ್ತವೆ.

ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಹೊಂದಿದವರು, ವಾರ್ಷಿಕ 1.20 ಲಕ್ಷ ರೂ. ಗಿಂತ ಹೆಚ್ಚು ಆದಾಯ ಇರುವವರು, ಜೀವನೋಪಾಯಕ್ಕಾಗಿ ಸ್ವಂತ ವಾಣಿಜ್ಯ ವಾಹನ ಹೊಂದಿದವರು, ಕಾರು ಹೊಂದಿದವರು, ಜಿ.ಎಸ್.ಟಿ. ಆದಾಯ ತೆರಿಗೆ ಪಾವತಿಸುವವರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದವರು ಸರ್ಕಾರಿ ಸೌಲಭ್ಯ ಪಡೆಯುವಂತಿಲ್ಲ.

ಬಿಪಿಎಲ್, ಅಂತ್ಯೋದಯ ಕಾರ್ಡ್ ಇರುವವರಿಗೆ ವಾರ್ಷಿಕ 5 ಲಕ್ಷ ರೂ. ಉಚಿತ ಚಿಕಿತ್ಸೆ, ವಿವಿಧ ವಸತಿ ಯೋಜನೆಗಳಲ್ಲಿ ಮನೆ ಸೌಲಭ್ಯ, ಬಡ್ಡಿ ರಹಿತ ಸಾಲ, ಗಂಗಾ ಕಲ್ಯಾಣ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಕಲ್ಯಾಣ ಯೋಜನೆ ಸೌಲಭ್ಯ ನೀಡಲಾಗುವುದು. ಕಾರ್ಡ್ ರದ್ದಾದಲ್ಲಿ ಇವೆಲ್ಲವೂ ಸ್ಥಗಿತವಾಗಲಿವೆ. ಆಹಾರ ಇಲಾಖೆ ಅಧಿಕಾರಿಗಳು ಹೀಗೆ ಸುಳ್ಳು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ರದ್ದುಪಡಿಸುತ್ತಿದ್ದಾರೆ.

ಏನೆಲ್ಲ ಸೌಲಭ್ಯ ಸಿಗ್ತಿತ್ತು?: ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಇದ್ದವರಿಗೆ ಆಯುಷ್ಮಾನ್ ಭಾರತ್ ಕರ್ನಾಟಕ ಯೋಜನೆಯಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂ. ವರೆಗೆ ಚಿಕಿತ್ಸೆ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಮನೆ ಸೌಲಭ್ಯ, ಗಂಗಾ ಕಲ್ಯಾಣ ಹಾಗೂ ಬಡ್ಡಿರಹಿತ ಸಾಲ ಸೌಲಭ್ಯ ಸೇರಿ ಹಲವು ಯೋಜನೆಗಳು ಸರ್ಕಾರದಿಂದ ದೊರೆಯುತ್ತಿತ್ತು. ಭಾಗ್ಯಲಕ್ಷ್ಮೀ ಯೋಜನೆ, ಸ್ವಯಂ ಉದ್ಯೋಗ, ಶ್ರಮಶಕ್ತಿ, ಅರಿವು ಸಾಲ, ಕಿರುಸಾಲ, ಕೃಷಿ ಯಂತ್ರೋಪಕರಣ ಖರೀದಿ, ಪಶು ಸಂಗೋಪನಾ, ಟ್ಯಾಕ್ಸಿ ಮತ್ತು ಗೂಡ್ಸ್ ವಾಹನ ಖರೀದಿ ಸೇರಿ ಸರ್ಕಾರಿ ಕಲ್ಯಾಣ ಯೋಜನೆಯ ಸೌಲಭ್ಯ ಸಿಗುತ್ತಿದ್ದವು.

Leave A Reply

Your email address will not be published.