ಪ್ಲಾಸ್ಟಿಕ್‌ನಂತಾಯ್ತು ಬಿಸಿಲಿನಲ್ಲಿ ಮಲಗಿದ್ದ ಯುವತಿಯ ಮುಖದ ಚರ್ಮ!

ಬಿಸಿಲಿಗೆ ಹೋದರೆ ಚರ್ಮ ಟ್ಯಾನ್ ಆಗೋದು ಮಾಮೂಲ್. ಆದ್ರೆ, ಇಲ್ಲೊಂದು ಕಡೆ ಬಿಸಿಲಿಗೆ ಮಲಗಿದ್ದ ಯುವತಿಯ ಚರ್ಮ ಪ್ಲಾಸ್ಟಿಕ್ ನಂತಾಗಿರುವ ವಿಚಿತ್ರ ಘಟನೆ ನಡೆದಿದೆ.

 

ಹೌದು. ಬ್ಯೂಟಿಷಿಯನ್ ಸಿರಿನ್ ಮುರಾದ್ ಅವರು ಬಲ್ಗೇರಿಯಾದಲ್ಲಿ ವಿಹಾರದಲ್ಲಿದ್ದಾಗ, 21 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಹಚ್ಚದೇ ನಿದ್ರಿಸಿದ್ದಾಳೆ. ನಂತರ ಮುಖದ ಭಾಗದಲ್ಲಿ ಸ್ವಲ್ಪ ನೋಯುತ್ತಿರುವ ಅನುಭವವಾಗಿದೆ. ಆದ್ರೂ ಕೂಡ 30 ನಿಮಿಷಗಳ ಕಾಲ ತನ್ನ ವಿಶ್ರಾಂತಿ ಮುಂದುವರೆಸಿದ್ದಾಳೆ.

ಆದರೆ, ಮರುದಿನ ಎಚ್ಚೆತ್ತಾಗ ಆಕೆಗೆ ಕಾದಿತ್ತು ಶಾಕ್. ಮರುದಿನ ಅವಳ ಮುಖದ ಚರ್ಮವು ತುಂಬಾ ಬಿಗಿಯಾಗುವಂತೆ ಅನುಭವವಾಗಿದೆ. ಈ ವೇಳೆ ಕನ್ನಡಿ ಮುಂದೆ ನಿಂತು ಹುಬ್ಬುಗಳನ್ನು ತಿರುಗಿಸಿದಾಗ ಅದು ಪ್ಲಾಸ್ಟಿಕ್‌ನಂತೆ ಕಂಡುಬಂದಿದೆ. ಈ ಬಗ್ಗೆ ಸಿರಿನ್ ತನ್ನ ಕುಟುಂಬದೊಂದಿಗೆ ಚರ್ಚಿಸಿದ್ದು, ಇದು ನನಗೆ ಅಷ್ಟೊಂದು ಎಫೆಕ್ಟ್‌ ಅಲ್ಲ ಎಂದು ಭಾವಿಸಿ ವೈದ್ಯರ ಬಳಿಗೆ ಹೋಗದಿರಲು ನಿರ್ಧರಿಸಿದಳು.

ಆದರೆ, ದಿನಗಳು ಕಳೆದಂತೆ ಸಿರಿನ್ ಮುಖದಲ್ಲಿ ಸಂಪೂರ್ಣವಾಗಿ ಚರ್ಮ ಸುಲಿಯಲು ಪ್ರಾರಂಭಿಸಿತು. ʻಚರ್ಮದ ಸಿಪ್ಪೆ ಸುಲಿಯಲು ಪ್ರಾರಂಭಿಸಿದ ನಂತರ ನನಗೆ ಸ್ವಲ್ಪ ಪರಿಹಾರ ಸಿಕ್ಕಿತು. ನನ್ನ ಚರ್ಮವು ಈಗ ಉತ್ತಮವಾಗಿದೆ. ಇದು ಮೊದಲಿಗಿಂತ ಉತ್ತಮವಾಗಿದೆʼ ಎಂದು ಸಿರಿನ್ ಹೇಳಿಕೊಂಡಿದ್ದಾರೆ.

ಇನ್ನೂ, ಈ ನೋವಿನ ಅನುಭವ ಹಂಚಿಕೊಂಡ ಸಿರಿನ್ ಸನ್‌ಸ್ಕ್ರೀನ್‌ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. “ನೀವು ನಿಮ್ಮ ಚರ್ಮಕ್ಕೆ ಯಾವಾಗಲೂ ಸನ್‌ಸ್ಕ್ರೀನ್ ಅನ್ವಯಿಸಿ. ಇದರಿಂದ ನಿಮ್ಮ ಚರ್ಮ ಸುರಕ್ಷಿತವಾಗಿರುತ್ತದೆ” ಎಂದು ಸಿರಿನ್ ಸಲಹೆ ನೀಡಿದ್ದಾರೆ.

Leave A Reply

Your email address will not be published.