ಪರಿಚಿತ ಮಹಿಳೆಯರ ಮನೆಯಲ್ಲಿ ಸ್ಪೈ ಕ್ಯಾಮೆರಾ ಬಳಸಿ ನಗ್ನ ವೀಡಿಯೋ ರೆಕಾರ್ಡ್ – ವಿಕೃತ ಕಾಮಿ ಅಂದರ್

ಆತನಿಗೆ ಮಹಿಳೆಯರ ನಗ್ನ ಚಿತ್ರಗಳನ್ನು ನೋಡುವ ವ್ಯಾಧಿ. ಅಷ್ಟೇ ಅಲ್ಲ, ಆತನಿಗೆ ಪರಿಚಯಸ್ಥ ಮಹಿಳೆಯರೇ ಆಗಬೇಕು. ಪರಿಚಯ ಇರುವ ಮಹಿಳೆಯರ ಮನೆಗೆ ಹೋಗಿ ಅಲ್ಲಿ ಒಂದಶ್ಟು ಗ್ಯಾಜೆಟ್ ಅಳವಡಿಸಿ ಬರುತ್ತಿದ್ದ. ಹಾಗೆ ಬಟ್ಟೆಯ ಜತೆ ಕಂಡ ಮಹಿಳೆಯರನ್ನು ಅವರ ಬಟ್ಟೆ ಇಲ್ಲದ ಸ್ಥಿತಿಯಲ್ಲೂ ನೋಡುವ ಚಪಲದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

 

ಆತನಿಗೆ ಕೆಲವು ಪರಿಚಿತ ಕುಟುಂಬದ ಮಹಿಳೆಯರ ಜೊತೆ ಸಾಮಾನ್ಯ ರೀತಿಯಲ್ಲಿ ಪರಿಚಯವಿತ್ತು. ಆ ಮಹಿಳೆಯರು ಕೂಡ ಈ ಹುಡುಗನ ಮೇಲೆ ಒಂದು ಅಕ್ಕರೆ ತೋರಿದ್ದರು. ಹಾಗೆ ಅವರ ಮನೆಗೆ ಹೋಗಿ ಚಹಾ ಕಾಫಿ ಹೀರಿ ಬರುತ್ತಿದ್ದ ಆತ ಮನೆಗೆ ಹೋದಾಗ ಮನೆಯ ಕೊಠಡಿಯ ಆಯಕಟ್ಟಿನ ಸ್ಥಳಗಳಲ್ಲಿ ಸ್ಪೈ ಕ್ಯಾಮೆರಾ ಇರುವ ಚಾರ್ಜರ್ ಅಳವಡಿಸುತ್ತಿದ್ದ. ಹಾಗೆ ಕ್ಯಾಮರಾ ಅಳವಡಿಸಿ ತನ್ನ ಮನೆಗೆ ವಾಪಾಸ್ ಆಗುತ್ತಿದ್ದ. ಇದ್ಯಾವುದರ ಪರಿವಿಯೇ ಇಲ್ಲದ ಮಹಿಳೆಯರು ಸಹಜವಾಗಿ ಮನೆಯಲ್ಲಿ ಬಟ್ಟೆ ಬದಲಿಸುವಾಗ ಮತ್ತು ಸ್ಥಾನ ಗ್ರಹಗಳಲ್ಲಿ ಬತ್ತಲೆಯಾಗುತ್ತಿದ್ದರು. ಆ ದೃಶ್ಯಾವಳಿ ಗಳೆಲ್ಲ ಈತನ ಸ್ಪೈಕ್ ಕ್ಯಾಮೆರಾದಲ್ಲಿ ದಾಖಲಾಗುತ್ತಿದ್ದವು. ಈ ಮೂಲಕ ನಗ್ನ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ನಂತರ ಆತ ತನ್ನ ನಕಲಿ ಇನ್ಸ್ಟಾಗ್ರಾಮ್ ಖಾತೆ ಮೂಲಕ ಆ ಮಹಿಳೆಯರಿಗೆ ಮೆಸೇಜ್ ಮಾಡುತ್ತಿದ್ದನು.

ಅಲ್ಲದೆ ಈ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ತನ್ನ ಜೊತೆ ಸಹಕರಿಸುವಂತೆ ಮಹಿಳೆಗೆ ಸಂದೇಶ ಕಳುಹಿಸುತ್ತಿದ್ದನು.
ಮಹಿಳೆಯು ಆರೋಪಿಯ ಅಕೌಂಟ್ ಬ್ಲಾಕ್ ಮಾಡಿದ್ರೂ, ಮತ್ತೊಂದು ನಕಲಿ ಅಕೌಂಟ್​​ನಿಂದ ಮತ್ತೊಮ್ಮೆ ವಿಡಿಯೋ ಕಳಿಸಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದನು. ತನ್ನ ವಿಡಿಯೋ ನೋಡಿ ಆತಂಕಗೊಂಡ ಮಹಿಳೆ ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಮಹೇಶ್ ಮೈಸೂರಿನಲ್ಲಿ ಬಂಧಿತ. ಈತ ಆ ಮಹಿಳೆಯ ಕುಟುಂಬಸ್ಥರಿಗೆ ಪರಿಚಯಸ್ಥ ಎಂಬ ಮಾಹಿತಿ ಲಭ್ಯವಾಗಿದೆ. ಪರಿಚಯನಾಗಿರುವ ಕಾರಣ ಆಗಾಗ ಮಹಿಳೆಯ ಮನೆಗೆ ಬರುತ್ತಿದ್ದನು. ಸ್ಪೈ ಕ್ಯಾಮೆರಾವನ್ನು ಚಾರ್ಜರ್​​ನಂತೆ ರೂಮಿನಲ್ಲಿ ತಾನೇ ಹಾಕಿ ಹೋಗಿರೋದಾಗಿ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯ ವಿಚಾರಣೆ ನಡೆಸಲಾಗ್ತಿದೆ.

Leave A Reply

Your email address will not be published.