ಕರಾವಳಿಯ ಈ ಜಂಕ್ಷನ್ ಗೆ ವೀರ್ ಸಾವರ್ಕರ್ ಹೆಸರು!

ಮಂಗಳೂರಿನ ಬಿಜೆಪಿ ಶಾಸಕರ ನೇತೃತ್ವದಲ್ಲಿ ದ.ಕ ಜಿಲ್ಲೆಯ ಒಂದು ಜಂಕ್ಷನ್ ಗೆ ಸಾವರ್ಕರ್ ಹೆಸರಿಡಲು ಸದ್ದಿಲ್ಲದೇ ಸಿದ್ಧತೆಯೊಂದು ನಡೆಯುತ್ತಿದೆ. ಕಾನೂನು ಪ್ರಕಾರವೇ ಈ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ತಯಾರಿ ಅಂತಿಮ ಹಂತದಲ್ಲಿದೆ.

 

ಈ ಕುರಿತು ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲೂ ಮಂಡನೆಯಾಗಿದೆ. ಈ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವ ವಹಿಸಿದ್ದು, ಈ ಬಗ್ಗೆ ಮಂಗಳೂರು ಹೊರವಲಯ ಸುರತ್ಕಲ್ ಸಾವರ್ಕರ್ ಹೆಸರಿಡಲು ತಯಾರಿ ನಡೆದಿದೆ. ಈ ಕುರಿತು ಕಳೆದ ವರ್ಷವೇ ಪಾಲಿಕೆಗೆ ಶಾಸಕ ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದ್ದು, ಆ ಬಳಿಕ ಕೌನ್ಸಿಲ್ ಸಭೆಯಲ್ಲಿ ವಿರೋಧದ ಮಧ್ಯೆಯೇ ಪ್ರಸ್ತಾವನೆ ಪಾಸ್ ಆಗಿದೆ. ಸದ್ಯ ಪಾಲಿಕೆ ಸ್ಥಾಯಿ ಸಮಿತಿ ಮುಂದಿರೋ ಸಾವರ್ಕರ್ ಹೆಸರಿಡೋ ಪ್ರಸ್ತಾವನೆ, ಕೆಲವೇ ದಿನಗಳಲ್ಲಿ ಪಾಲಿಕೆ ಮೂಲಕ ಸರ್ಕಾರದ ಅನುಮತಿಗೆ ರವಾನೆಯಾಗಲಿದೆ. ಅನುಮತಿ ಸಿಕ್ಕ ತಕ್ಷಣ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ನಾಮಕರಣ ಮಾಡಲು ಯೋಜನೆ, ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ.

ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ಪ್ರಸ್ತಾಪವನ್ನು ಸ್ಥಳೀಯ ಕಾರ್ಪೋರೆಟರ್ ಗಳು ಇಟ್ಟಿದ್ದರು. ಭಜರಂಗದಳ ಜಾಗರಣವೇದಿಕೆ ಸೇರಿ ಹಲವು ಸಂಘಟನೆ ನನ್ನ ಬಳಿ ಕೇಳಿಕೊಂಡಿದ್ದವು. ನಾನು ನನ್ನ ಲೆಟರ್ ಹೆಡ್ ನಲ್ಲಿ ಮಂಗಳೂರು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಕಾನೂನಿನ ಮೂಲಕ ಅದು ಪಾಲಿಕೆ ಕೌನ್ಸಿಲ್ ಸಭೆಯ ಮುಂದೆ ಬಂದಿತ್ತು. ಸದ್ಯ ಆ ಸಭೆಯಲ್ಲಿ ಮಂಡನೆಯಾಗಿ ಅಲ್ಲಿಂದ ಪಾಸ್ ಆಗಿದೆ. ಸದ್ಯ ಅದು ಮಂಗಳೂರು ಪಾಲಿಕೆ ಸ್ಥಾಯಿ ಸಮಿತಿಯ ಮುಂದೆ ಇದೆ. ಅಲ್ಲಿಂದ ಪಾಸ್ ಆಗಿ ಸರ್ಕಾರದ ಮುಂದೆ ಬಂದು ಮತ್ತೆ ಕೌನ್ಸಿಲ್ ನಲ್ಲಿ ಪಾಸ್ ಆಗಲಿದೆ. ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಎಸ್ ಡಿಪಿಐ ತಡೆ ವಿರೋಧ ಉಂಟು ಮಾಡಿತ್ತು.

ಜಂಕ್ಷನ್ ಗೆ ಹೆಸರಿಡೋ ವಿಚಾರಕ್ಕೆ ತಡೆ ಆಗೋಕೆ ಸಾಧ್ಯವಿಲ್ಲ. ಕಾನೂನು ಪ್ರಕಾರ ನೋಡಿದರೆ ಅದೊಂದು ಸ್ವಾತಂತ್ರ್ಯ ಹೋರಾಟಗಾರನ ಹೆಸರು. ಹಾಗಾಗಿ ಸ್ವಾತಂತ್ರ್ಯ ವೀರನ ಹೆಸರಿಡಲು ಯಾವುದೇ ಸಮಸ್ಯೆ ಇಲ್ಲ. ಸುರತ್ಕಲ್ ನಲ್ಲಿ ಕೋಮು ಗಲಭೆ ಆಗದಂತೆ ನಮ್ಮ ಸರ್ಕಾರ ತಡೆದಿದೆ. ಗಲಭೆ ಆಗಲು ನಾವು ಬಿಡಲ್ಲ, ಅದನ್ನು ನಾವು ತಡೆಯುತ್ತೇವೆ. ಪಕ್ಷದ ನಾಯಕರು ಒಳ್ಳೆಯ ವಿಷಯ ಅಂತ ಇದನ್ನು ಬೆಂಬಲಿಸಿದ್ದಾರೆ. ಜನರಿಗೆ ಸಾವರ್ಕರ್ ಬಗ್ಗೆ ಮಾಹಿತಿ ಕೊಡೋ ಕೆಲಸ ಆಗಲಿ ಅಂತ ಪಕ್ಷದ ಹಿರಿಯರು ಹೇಳಿದ್ದಾರೆ. ನಾವು ಏನೇ ಅಡೆತಡೆ ಬಂದರೂ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡುತ್ತೇವೆ. ಯಾವುದೇ ತಡೆ ಬಂದರೂ ಆ ಕೆಲಸ ಮಾಡಿಯೇ ಸಿದ್ಧ ಎಂದಿದ್ದಾರೆ.

Leave A Reply

Your email address will not be published.