KEA ಯಿಂದ ಮಹತ್ವದ ಪ್ರಕಟಣೆ | ಸಿಇಟಿ ಆನ್‌ಲೈನ್ ದಾಖಲೆಗಳ ಪರಿಶೀಲನೆ ದಿನಾಂಕ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿ ಇಸಿ 2022ರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ನಡೆಸಲು ಯೋಜಿಸಲಾಗಿದೆ. ಹಾಗಾಗಿ ದಾಖಲಾತಿ ಪರಿಶೀಲನೆ ಕೆಲಸ ಪ್ರಗತಿಯ ಹಂತದಲ್ಲಿದೆ. ಈ ಮೂಲಕ ಸುಮಾರು 1,71,000 ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ ಅರ್ಹರಿರುತ್ತಾರೆ.

ಅಭ್ಯರ್ಥಿಗಳಿಗೆ ಕಂದಾಯ ಇಲಾಖೆಯಿಂದ ನೀಡಲಾಗುವ ದಾಖಲೆಗಳಾದ ಜಾತಿ / ಆದಾಯ | 371ಜೆ ಪ್ರಮಾಣ ಪತ್ರಗಳನ್ನು ಆರ್‌ಡಿ ಸಂಖ್ಯೆಯ ಆಧಾರದ ಮೇರೆಗೆ ಆನ್‌ಲೈನ್ ಮುಖಾಂತರ ಪರಿಶೀಲನೆ ನಡೆಸಲಾಗುವುದು. ಇದರ ಜೊತೆಗೆ 10ನೇ ತರಗತಿಯ ಅಂಕಪಟ್ಟಿಯನ್ನು ಅವರ ಜನ್ಮ ದಿನಾಂಕ, ತಂದೆ, ತಾಯಿ ಹೆಸರು ತಾವು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಡಾಟಾದೊಂದಿಗೆ ಆನ್‌ಲೈನ್‌ ಮುಖಾಂತರ ಪರಿಶೀಲಿಸಲಾಗುತ್ತದೆ.

ಇದಲ್ಲದೆ ಅರ್ಹ ಪರೀಕ್ಷೆಯಾದ ಎರಡನೇ ಪಿಯುಸಿ/ 12ನೇ ತರಗತಿಯ ಅಂಕಗಳನ್ನೂ ಪದವಿ ಪೂರ್ವ ಇಲಾಖೆಯ ಡಾಟದೊಂದಿಗೆ ಆನ್‌ಲೈನ್ ಮೂಲಕ ಪರಿಶೀಲಿಸಲಾಗುತ್ತಿದೆ.

ಹಲವಾರು ಅಭ್ಯಥಿಗಳು ಈ ಪರಿಶೀಲನಾ ಕಾರ್ಯದಲ್ಲಿ
ಜಾತಿ / ಆದಾಯ / 375ಜೆ/ ಭಾಷಾ ಅಲ್ಪಸಂಖ್ಯಾತ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆ, ತಮ್ಮ ಕಾಲೇಜು/ ಶಾಲೆಯ ವಿವರಗಳನ್ನು ನಮೂದಿಸುವಾಗ ಜಿಲ್ಲಾ | ತಾಲ್ಲೂಕು ವಿವಿರಗಳನ್ನು ನಮೂದಿಸಿರುವುದಿಲ್ಲ. ಹಾಗಾಗಿ ಈ ಕಾರಣದಿಂದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ತಮ್ಮ ಆರ್ ಡಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಲು ಹಾಗೂ ಶಾಲಾ ಕಾಲೇಜಿನ ಹೆಸರು/ ತಾಲ್ಲೂಕು / ಜಿಲ್ಲೆ ಇವುಗಳನ್ನು ಸರಿಯಾಗಿ ನಮೂದಿಸಲು ದಿನಾಂಕ 19-08-2022 ರ ರಾತ್ರಿ 8:00 ರಿಂದ 21-08-2012 ರವರೆಗೆ ಅವಕಾಶವನ್ನು ನೀಡಲಾಗುತ್ತಿದೆ.

ದಿನಾಂಕ: 22-08-2022 ರಿಂದ 07-09-2022 ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಅಯಾ ಶಾಲೆಗಳಿಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಗೆ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಹಾಗು ಅಗತ್ಯತೆ ಇದ್ದಲ್ಲಿ ಪೋಷಕರ ವ್ಯಾಸಂಗ ಪ್ರಮಾಣ ಪತ್ರದ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ, ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ.

ಜಿಲ್ಲೆ/ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರ ಕಛೇರಿಯ ಪ್ರೋಗ್ರಾಮರ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಗಳೊಂದಿಗೆ ದಿ. 22-08-2022 ರಂದು ಅವರ ಕಛೇರಿಯಲ್ಲಿ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಆನ್‌ಲೈನ್ ಮೂಲಕ ಕೆಇಎ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ.

ಬೆಂಗಳೂರು ಜಿಲ್ಲೆಯಲ್ಲಿ ಒಟ್ಟು 18 ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದು (N1, 62, N9, N4 & 51, 53, 53, 54), ಬೆಂಗಳೂರು ಜಿಲ್ಲೆಯಲ್ಲಿ ಪ್ರಾಧಿಕಾರದಲ್ಲಿರುವ ಮಾಹಿತಿಯನುಸಾರ ಸುಮಾರು 40,000 ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ ಅರ್ಹರಿರುತ್ತಾರೆ.

ಬೆಂಗಳೂರಿನ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಗೆ ಹೋಗಬೇಕೆಂಬ ಗೊಂದಲ ಬರಬಾರದು ಎಂಬ ಕಾರಣಕ್ಕೆ, ಬೆಂಗಳೂರಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೊದಲ ಬಾರಿಗೆ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಕೆಜಿಎ ಕಛೇರಿಯಲ್ಲಿಯೇ ಆಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave A Reply

Your email address will not be published.